- ಮನೆ, ಕಚೇರಿ, ಶಾಲಾ ಕಾಲೇಜು, ಸಹಕಾರ ಸಂಸ್ಥೆಗಳು, ಸರ್ಕಾರ ಇತ್ಯಾದಿಗಳಿಗೆ ತಂತ್ರಜ್ಞಾನ ಸಂಬಂದಿ ಸೇವೆಗಳನ್ನು ಒದಗಿಸಲು ಲಿನಕ್ಸಾಯಣ ಇಚ್ಚಿಸುತ್ತದೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಹರಿವನ್ನು ಹೆಚ್ಚಿಸುವ ಸಲುವಾಗಿ ಲಿನಕ್ಸಾಯಣ ಈ ಹೊಸದೊಂದು ಹೆಜ್ಜೆಯನ್ನು ಇಡಲು ಬಯಸಿದೆ. ದಿನನಿತ್ಯದ ಕಾರ್ಯಗಳಿಗೆ ಬಳಸುವ ತಂತ್ರಾಂಶಗಳು, ಕಂಪ್ಯೂಟರ್ ಹಾರ್ಡ್‌ವೇರ್, ತಂತ್ರಜ್ಞಾನ ಸ್ಥಾಪನೆ, ಪರಿಶೀಲನೆ, ಅಭಿವೃದ್ದಿ, ಸುರಕ್ಷತೆ ಹೀಗೆ ಹತ್ತು ಹಲವು ಸೇವೆಗಳನ್ನು ನೀವು ಇನ್ಮುಂದೆ ಲಿನಕ್ಸಾಯಣದಿಂದ ಪಡೆಯಬಹುದು. ಗ್ನು/ಲಿನಕ್ಸ್ ಮತ್ತು ಮುಕ್ತ ತಂತ್ರಾಂಶಗಳ ಜೊತೆ ಹತ್ತಾರುವರ್ಷ ಕೆಲಸ ಮಾಡಿದ ವೃತ್ತಿಪರರು ನಿಮಗೆ ಈ ಕೆಲಸದಲ್ಲಿ ಸಹಾಯ ಮಾಡಲಿದ್ದಾರೆ.
- ಇದೆಲ್ಲದರ ಜೊತೆಗೆ ಗ್ನು/ಲಿನಕ್ಸ್ ಹಾಗೂ ಮುಕ್ತ ತಂತ್ರಾಂಶದ ಬಗೆಗಿನ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಕೂಡ ಲಿನಕ್ಸಾಯಣ ಆಯೋಜಿಸುತ್ತಿದೆ.
- ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಸುತ್ತಮುತ್ತ ಕನ್ನಡಿಗರಿಗಿರುವ ಉದ್ಯೋಗಾವಕಾಶಗಳನ್ನು ಲಿನಕ್ಸಾಯಣ ಇನ್ಮುಂದೆ ನಿಮ್ಮ ಮುಂದಿಡಲಿದೆ
- ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಸೇವೆಗಳನ್ನು ಈಗಾಗಲೇ ಕರ್ನಾಟಕದ ಹಲವೆಡೆ ನೀಡುತ್ತಿರುವ ಕಂಪೆನಿಗಳು ಲಿನಕ್ಸಾಯಣದ ಸೂಚಿಯನ್ನು ಹೊಕ್ಕಬಹುದು. ಜೊತೆಗೆ ಜಾಹೀರಾತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು
- ಗ್ನು/ಲಿನಕ್ಸ್ ಸಿ.ಡಿ/ಡಿ.ವಿ.ಡಿ ಗಳನ್ನು ನಮ್ಮಿಂದ ಕನಿಷ್ಟ ಮೊತ್ತದ ಹಣಕ್ಕೆ ಅಂಚೆಯ ಮೂಲಕ ಪಡೆಯಬಹುದು
- ತಂತ್ರಜ್ಞಾನ ಸಂಬಂದ ಕನ್ನಡದ ಪುಸ್ತಕಗಳ ಖರೀದಿ ಮತು ಪ್ರಕಟಣೆಗೆ ನಮ್ಮಿಂದ ಸಹಾಯ ಪಡೆಯಬಹುದು
- ಹಾಗೂ ಇನ್ನೂ ಮತ್ತಷ್ಟು ಹೊಸ ಸೇವೆಗಳು
ಹೆಚ್ಚಿನ ಮಾಹಿತಿಗೆ [email protected] ಇಲ್ಲಿಗೆ ಒಂದು ಸಂದೇಶ ಕಳುಹಿಸಿ.