ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

CTRL+ALT+Backspace – ಕೆಲಸ ಮಾಡ್ತಿಲ್ವಾ?

ಉಬುಂಟುವಿನಲ್ಲಿ ಮೊದಲಿಂದಲೂ ಕೆಲಸ ಮಾಡ್ತಿದ್ದ್ರೆ, CTRL+ALT+Backspace ಉಪಯೋಗಿಸಿ ಲಾಗ್-ಔಟ್ ಆಗುತ್ತಿದ್ದದ್ದು ಹಳೆಯ ಕಥೆ. ಹೊಸ ಉಬುಂಟು ಆವೃತ್ತಿಗಳಲ್ಲಿ ಇದು ಸಾಧ್ಯವಿಲ್ಲ.. ಅನೇಕ ಬಳಕೆದಾರರು CTRL+ALT+Backspace ನಿಂದ ತೊಂದರೆಯಾಗುತ್ತಿದೆ ಎಂಬ ಅನಿಸಿಕೆ ನೀಡಿದ್ದರಿಂದ, UI ಎಕ್ಸ್ಪರ್ಟುಗಳು ಇದನ್ನು ಹೊಸ ಆವೃತ್ತಿಗಳಲ್ಲಿ ತೆಗೆದು ಹಾಕಿದರು. ಆದರೆ ನಮ್ಮಲ್ಲಿ ಅನೇಕರಿಗೆ ಇದು ಇನ್ನೂ ಬಹಳ ಉಪಯೋಗಿ. ಬೇರೆ ಬಳಕೆದಾರನ ಲಾಗಿನ್ ಹೆಸರನ್ನು ಬಳಸಿ ಕಂಪ್ಯೂಟರ್ ಗೆ ಲಾಗಿನ್ ಆಗಬೇಕಾದಲ್ಲಿ ಇದು ಬೇಕೆಬೇಕು. ಈ ಆಯ್ಕೆಯನ್ನು ಮತ್ತೆ ಉಬುಂಟುವಿನಲ್ಲಿ ಕೆಲಸ ಮಾಡುವಂತೆ ಮಾಡುವುದು ಸುಲಭ.

ಮೆನು System > Preferences > Keyboard ಬಳಸಿ. ಹೊಸ ವಿಂಡೋ ನಲ್ಲಿ Layout tab ಗೆ ಸರಿದು ಅಲ್ಲಿನ Options ಬಟನ್ ಮೇಲೆ ಕ್ಲಿಕ್ಕಿಸಿ. ಈಗ ಕೆಳಕಂಡ ಚಿತ್ರದಲ್ಲಿರುವಂತೆ “Key sequence to kill the X server” ನಲ್ಲಿ + ಕ್ಲಿಕ್ಕಿಸಿ ಆಯ್ಕೆಯನ್ನು ಹಿಗ್ಗಿಸಿ. ಈಗ ನಿಮಗೆ Control + Alt + Backspace ಗೆ ಆಯ್ಕೆ ದೊರೆಯುತ್ತದೆ. ಛೆಕ್ ಬಾಕ್ಸ್ ಆಯ್ಕೆ ಆಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ವಿಂಡೋವನ್ನು ಮುಚ್ಚಿರಿ.

ಈಗ ಕೀಬೋರ್ಡ್ ನಲ್ಲಿ CTRL-ALT-Backspace ಬಳಸಿ ಲಾಗ್-ಔಟ್ ಆಗೋದನ್ನು ನೋಡಿ.

ಪ್ರತಿಕ್ರಿಯೆಯನ್ನು ಉಳಿಸಿ

Your email address will not be published. Required fields are marked *

*

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong> <pre lang="" line="" escaped="" highlight="">