ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ ಇದು ಕೊಡುತ್ತದೆ. ಈ ಅಪ್ಡೇಟ್ನಲ್ಲಿ ಬಿಡುಗಡೆಗೊಂಡಿರುವ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸಿ ಬೇರೆಡೆಗಳಲ್ಲಿ ಅವುಗಳ ಬಗ್ಗೆ ವಿವರಗಳನ್ನು ನೀಡಲಾಗಿತ್ತು.

ಈ ಅಪ್ಡೇಟ್ ಹೊಸ ಡೆಬಿಯನ್ ವಿತರಣೆ ಆಗಿರದೆ ಕೆಲವೊಂದು ಪ್ಯಾಕೇಜ್‌ಗಳಿಗೆ ಮಾತ್ರ ಅಪ್ಡೇಟ್ ಆಗಿರುತ್ತದೆ. ಹೊಸ ಸಿ.ಡಿ ಅಥವಾ ಡಿ.ವಿ.ಡಿ ಗಳನ್ನು ಡೌನ್ಲೋಡ್ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಇರುವ ನಿಮ್ಮ ಡೆಬಿಯನ್ ಇನ್ಸ್ಟಾಲೇಷನ್ ಅನ್ನು ಅಪ್ಗ್ರೇಡ್ ಮಾಡಿಕೊಂಡರಾಯ್ತು.

ಈಗಾಗಲೇ security.debian.org ಇಂದ ಆಗಾಗ ಅಪ್ದೇಟ್ ಗಳನ್ನು ಪಡೆದುಕೊಳ್ಳುವವರು ಮತ್ತೆ ಡೆಬಿಯನ್ ಅಪ್ಗ್ರೇಡ್ ಮಾಡುವ ಅವಶ್ಯಕತೆಯಿಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ.

ಪ್ರತಿಕ್ರಿಯೆಯನ್ನು ಉಳಿಸಿ

Your email address will not be published. Required fields are marked *

*

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong> <pre lang="" line="" escaped="" highlight="">