ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಆಗಸ್ಟ್ ೧ ರಿಂದ ಆಗಸ್ಟ್ ೧೪ ವರೆಗೆ ಲೇಖನಗಳು ಜ್ಞಾನದ ಅಲೆಗಳಾಗಿ ಹರಿದು ಬಂದವು. ಆಗಸ್ಟ್ ೧೫ರಂದು ಇವೆಲ್ಲವುಗಳನ್ನು ಇಡಿಯಾಗಿ ಇ-ಪುಸ್ತಕ ರೂಪದಲ್ಲಿ ಕನ್ನಡಿಗರ ಮುಂದೆ ಇಡಲಾಗಿದೆ. ಕನ್ನಡದಲ್ಲಿ ತಂತ್ರಜ್ಞಾನ ಸಂಬಂಧಿತ ಲೇಖನಗಳು ಬರುವುದು ಹೆಚ್ಚಾಗಲು ಕೂಡ ಈ ಕಾರ್ಯಕ್ರಮ ಸಹಾಯ ಮಾಡಲಿದೆ ಎಂಬುದು ‘ಸಂಚಯ’ದ ಅರಿವಿನ ಅಲೆಗಳ ತಂಡದ ಆಶಯ.

ಅರಿವಿನ ಅಲೆಗಳು – ಇ-ಪುಸ್ತಕ ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಚಿತ್ರದ ಮೇಲೆ ಅಥವಾ ಅರಿವಿನ ಅಲೆಗಳ ತಾಣದ ಕೊಂಡಿಯ ಮೇಲೆ ಕ್ಲಿಕ್ಕಿಸಿ.

ಅರಿವಿನ ಅಲೆಗಳು – ಇ-ಪುಸ್ತಕ

http://arivu.sanchaya.net

ನೀವೂ ಕೂಡ ಅರಿವಿನ ಅಲೆಗಳಿಗೆ ಲೇಖನಗಳನ್ನು ಕಳಿಸಬಹುದು ಮತ್ತು ನಮ್ಮ ಕೆಲಸದೊಂದಿಗೆ ಕೈ-ಜೋಡಿಸ ಬಹುದು.

ಮಿಂಚಂಚೆ – arivu @ sanchaya.net

ಪ್ರತಿಕ್ರಿಯೆಯನ್ನು ಉಳಿಸಿ

Your email address will not be published. Required fields are marked *

*

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong> <pre lang="" line="" escaped="" highlight="">