ಲಿನಕ್ಸಾಯಣ

ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ
Press Release

ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ

ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ಧೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು.

ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು ೧೫ ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು ೫೭೮ ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು. ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿಯಾದಂತಹ ಜಿ ಎನ್ ನರಸಿಂಹ ಮೂರ್ತಿಯವರು ಈ ನಿಟ್ಟಿನಲ್ಲಿ ಹಿಂದೆ ನಡೆದ ಕೆಲಸಗಳು ಹಾಗು ಮುಂದಿನ ಕಾರ್ಯಗಳ ಕುರಿತು ಮಾತನಾಡಿದರು. ಇದರಲ್ಲಿ ಖ್ಯಾತ ಕಿರುತೆರೆಯ ನಟಿ ಜಯಲಕ್ಷ್ಮಿ ಪಾಟೀಲ್, ಬನವಾಸಿ ಬಳಗದ ಸದಸ್ಯರು, ಕಣಜದಲ್ಲಿ ಕೆಲಸ ಮಾಡುತ್ತಿರುವವರು, ತಂತ್ರಜ್ಞರು, ಗೂಗಲ್ ಸಂಸ್ಥೆಯಲ್ಲಿನ ಈ ಹಿಂದಿನ ಅನುವಾದಕರು, ಪತ್ರಕರ್ತರು, ಭಾಷಾತಂತ್ರಜ್ಞರು ಮುಂತಾದವರು ಭಾಗವಹಿಸಿದ್ದರು.

ಲೋಕಲೈಸೇಶನ್ ಅಥವ ಪ್ರಾದೇಶೀಕರಣ ಎನ್ನುವುದು ಒಂದು ಉತ್ಪನ್ನವನ್ನು ನಿರ್ದಿಷ್ಟ ಪ್ರದೇಶ ಅಥವ ಭಾಷಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸುವ ಮಾಡುವ ಕೆಲಸವಾಗಿದೆ. ಪ್ರಾದೇಶೀಕರಣವು ಹೆಚ್ಚು ಸಂಕೀರ್ಣವಾದಂತೆಲ್ಲಾ ಮತ್ತು ಹಲವು ಉಪಕರಣಗಳನ್ನು ಒಳಗೊಂಡಂತೆಲ್ಲಾ ಅನುವಾದ ಮತ್ತು ಪದಕೋಶದ ಶಿಷ್ಟತೆಯು ಎದುರಾಗುತ್ತಾ ಹೋಗುತ್ತದೆ. ಆದ್ದರಿಂದ, ಈ ಸಂದರ್ಭದಲ್ಲಿ ಆ ರೀತಿಯ ಒಂದು ಕಾರ್ಯಗಾರವು ಅಗತ್ಯ ಹಾಗು ಪ್ರಮುಖವೆನಿಸುತ್ತದೆ. ಇಂದಿನ ತಂತ್ರಜ್ಞಾನ ಕ್ರಾಂತಿಯು ನಮ್ಮ ಕರ್ನಾಟಕದ ಪ್ರತಿ ಮೂಲೆಯನ್ನು ತಲುಪಲು ಅದು ಏಕರೂಪವಾದ ಪದಗಳೊಂದಿಗೆ ಕನ್ನಡದಲ್ಲಿ ಲಭ್ಯವಾಗಿಸುವುದು ಅನಿವಾರ್ಯ.

ಸ್ಥಳೀಯ ಬಳಕೆದಾರರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಲು ನೆರವಾಗಲು FUEL ಪರಿಯೋಜನೆಯು ಒಂದು ಶಿಷ್ಟವಾದ ಹಾಗು ಏಕರೂಪವಾದ ಪಾರಿಭಾಷಿಕ ಪದಕೋಶವನ್ನು ಒದಗಿಸುತ್ತದೆ. ಈಗಾಗಲೆ ಸುಮಾರು ೯ ಭಾರತೀಯ ಭಾಷೆಗಾಗಿ ಈ ಬಗೆಯ ಕಾರ್ಯವು ನಡೆದಿದ್ದು, ಕನ್ನಡದ ಕಂಪ್ಯೂಟರ್ ಪದಕೋಶವು ೧೦ನೆಯದ್ದಾಗಿದೆ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

FUEL – ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ  ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಕೆಲವು ಇಂಗ್ಲೀಷ್ ಪದ ಅಥವ ಪದಗುಚ್ಛಗಳಿಗೆ ಸನ್ನಿವೇಶಕ್ಕೆ ಅನುಗುಣವಾದ ಸೂಕ್ತವಾದ ಪರ್ಯಾಯ ಕನ್ನಡ ಪದ ದೊರೆಯದೆ ಇರುವುದು. ಇಂತಹ ಸಂದರ್ಭಗಳಲ್ಲಿ ಇವರು ತಮಗೆ ತೋಚಿದ ಯಾವುದೊ ಒಂದು ಪದವನ್ನು ಬಳಸಿದಾಗ ಆ ತಂತ್ರಾಂಶವನ್ನು ಬಳಸುವ ಬಳಕೆದಾರರಿಗೆ ಸಹ ಗೊಂದಲ ಉಂಟಾಗಿ, ಅದರ ಇಂಗ್ಲೀಷ್‌ನ ಆವೃತ್ತಿಗೆ ಮರಳುವ ಸಾಧ್ಯತೆ ಇರುತ್ತದೆ.

ಇದನ್ನು ಪರಿಹರಿಸಲು, ಇಂತಹ ಅನುವಾದ ಕಾರ್ಯಗಳಲ್ಲಿ ಬಳಸಬಹುದಾದ ಒಂದು ಶಿಷ್ಟ ಪದಕೋಶವು ಲಭ್ಯವಿರಬೇಕಾಗುತ್ತದೆ. ಎಲ್ಲಾ ಅನ್ವಯಿಕಗಳಲ್ಲಿ ಏಕಪ್ರಕಾರದ ಪರ್ಯಾಯ ಕನ್ನಡ ಪದ/ಪದಗುಚ್ಛವನ್ನು ಬಳಸುವುದಲ್ಲಿ, ಸಾಮಾನ್ಯ ಜನರಿಗೆ ಅಂತಹ ಅನ್ವಯಿಕ ತಂತ್ರಾಂಶವು ಬಳಕೆಗೆ ಸುಲಭವಾಗುತ್ತದೆ. ಇದರಿಂದಾಗ ಅನುವಾದದ ಉದ್ಧೇಶವು ನೆರವೇರುವುದರ ಜೊತೆಗೆ ಉಚಿತ ಹಾಗು ಮುಕ್ತ ತಂತ್ರಾಂಶಗಳ ಜನಪ್ರಿಯತೆಯೂ ಸಹ ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಕೆಲಸಕ್ಕಾಗಿ, ತಂತ್ರಾಂಶಗಳ ಅನುವಾದದಲ್ಲಿ ಪದೇ ಪದೆ ಬಳಸಲಾಗುವ ಪದಗಳ (FUEL-Frequently Used Entries in Localization) ಒಂದು ಶಿಷ್ಟ ಕೋಶವನ್ನು ಮಾಡಬೇಕಿದೆ. ಈಗಾಗಲೆ ಸುಮಾರು ೫೦೦ ಕ್ಕೂ ಮಿಕ್ಕ ಇಂತಹ ಪದ/ಪದಗುಚ್ಛಗಳನ್ನು ಗುರುತಿಸಲಾಗಿದ್ದು , ಮುಂದಿನ ಹಂತದದಲ್ಲಿ ಇವುಗಳ ಪರಿಶೀಲನೆಯ ಕಾರ್ಯ ಆಗಬೇಕಿದೆ. ಇದಕ್ಕಾಗಿ ಕೆಲವು ಭಾಷಾಶಾಸ್ತ್ರಜ್ಞರು, ಅನುವಾದಕರು, ಪತ್ರಕರ್ತರು, ಗಣಕತಂತ್ರಜ್ಞರು ಒಂದೆಡೆ ಕಲೆತು ಈ ಪದಗಳನ್ನು ಅವಲೋಕಿಸಬೇಕಿದೆ. ಒಟ್ಟಿನಲ್ಲಿ ಒಮ್ಮತದಿಂದ ಒಂದು ಶಿಷ್ಟತೆಯನ್ನು ರೂಪಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ ಸುಮಾರು ೨ ದಿನ ತಗಲುವ ಸಾಧ್ಯತೆ ಇರುವುದರಿಂದ, ಉಚಿತ ಹಾಗು ಮುಕ್ತ ತಂತ್ರಾಂಶದ ಕನ್ನಡ ಸಮುದಾಯವಾದ ಸಂಚಯದ (sanchaya.net) ವತಿಯಿಂದ ಈ ಜನವರಿ ೨೮, ೨೯ ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸಿ ಐ ಎಸ್‌ನಲ್ಲಿ (ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿ) ಸಿಐಎಸ್ ಹಾಗು ರೆಡ್‌ ಹ್ಯಾಟ್‌ನ (Red Hat) ನೆರವಿನೊಂದಿಗೆ FUEL-ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

FUEL ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು: www.fuelproject.org <wbr>ಹಾಗು https://fedorahosted.org/<wbr>fuel/</wbr>

</wbr>

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?
ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು.

ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು :

$ lspci | grep VGA

01:00.0 VGA compatible controller: nVidia Corporation G72M [GeForce Go 7400] (rev a1)

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ನಾಸಾದ ಹೊಸ ಓಪನ್‌ಸೋರ್ಸ್ ತಾಣ
ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್‌ಸೋರ್ಸ್ ತಾಣವಾಗಲಿದೆ.

ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ ಪಡೆದುಕೊಳ್ಳುವುದಕ್ಕೆ ‘ಓಪನ್‌ಸೋರ್ಸ್‘ ಯೋಜನೆಗಳಲ್ಲಿ ಆಯಾ ಯೋಜನೆಯ ಸಂಪೂರ್ಣ ಸೋರ್ಸ್ ಅಥವ ಮಾಹಿತಿಯನ್ನು ಸ್ವತಂತ್ರವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಈ ಸೋರ್ಸ್‌ಕೋಡ್ ಉಪಯೋಗಿಸಿಕೊಂಡು ಮನುಕುಲಕ್ಕೆ ಬೇಕಾದ ಅತ್ಯುತ್ತಮ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ, ಅದನ್ನು ಮತ್ತೆ ಸಮುದಾಯಕ್ಕೆ ಹಿಂತಿರುಗಿಸುವಂತಾಗಲು ‘ಓಪನ್‌ಸೋರ್ಸ್’ ಯೊಜನೆಗಳು ಸಹಾಯ ಮಾಡುತ್ತವೆ. ತಂತ್ರಜ್ಞಾನದ ಮಟ್ಟದಲ್ಲಿ ಅತ್ಯುನ್ನತ ಮಟ್ಟದ ವಿಜ್ಞಾನಿಗಳನ್ನು ಹೊಂದಿರುವ ನಾಸಾ ಸಂಸ್ಥೆ ಫ್ರೀ ಮತ್ತು ಓಪನ್‌ಸೋರ್ಸ್ ಯೋಜನೆಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಮುಂಚಿನಿಂದಲೂ ಉಪಯೋಗಿಸಿಕೊಂಡು ಬಂದಿದೆ. ಸೈಂಟಿಫಿಕ್ ಲಿನಕ್ಸ್ ಅದಕ್ಕೊಂದು ಉತ್ತಮ ಉದಾಹರಣೆ. ಉಪಯೋಗಿಸಿಕೊಳ್ಳುವುದರ ಜೊತೆಗೆ ಅವುಗಳ ಅಭಿವೃದ್ದಿಯ ಕಡೆಗೂ ಮತ್ತದನ್ನು ಓಪನ್‌ಸೋರ್ಸ್ ಸಮುದಾಯಕ್ಕೆ ಹಿಂತಿರುಗಿಸುವಲ್ಲೂ ನಾಸಾ ಮುಂದಿದೆ. ಆದರೆ, ತನಗೆ ಬೇಕಿರುವ ಯೋಜನೆಗಳನ್ನು ಮೊದಲ ಭಾರಿಗೆ ನಾಸಾ ತನ್ನದೇ ವೆಬ್‌ಸೈಟ್‌ನ ಮೂಲಕ ಲೋಕಕ್ಕೆ ತೆರೆದಿಟ್ಟಿದೆ.

ಸಧ್ಯಕ್ಕೆ ಇದರಲ್ಲಿ ಓಪನ್‌ಸೋರ್ಸ್ ತಂತ್ರಾಂಶ ಯೋಜನೆಗಳ ಮೇಲೆ ಕೆಲಸ ಮಾಡುವ ಕಂಪೆನಿಗಳ ಡೈರೆಕ್ಟರಿ ಮತ್ತು ನಾಸಾ ತಾನು ಉಪಯೋಗಿಸುವ ಓಪನ್‌ಸೋರ್ಸ್ ತಂತ್ರಾಂಶಗಳ ದಾಖಲೆಗಳನ್ನು ಇರಿಸಿಕೊಂಡಿದೆ.

ವಿಜ್ಞಾನ, ತಂತ್ರಜ್ಞಾನ ಆಸಕ್ತರಿಗೆ ಮತ್ತು ಮುಕ್ತ ಹಾಗು ಸ್ವತಂತ್ರ ತಂತ್ರಾಂಶ ಅಭಿವೃದ್ದಿಯ ಕಡೆ ಗಮನಕೊಡುವ ಅನೇಕರಿಗೆ ಇದು ಸಿಹಿ ಸುದ್ದಿ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಗುಬ್ಬಿ ಮತ್ತು ನವಿಲು – ಕನ್ನಡಕ್ಕೆರಡು ಹೊಸ ಫಾಂಟುಗಳು
ಕಂಪ್ಯೂಟರ್‌ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಅನೇಕ ಫಾಂಟುಗಳಿವೆ. ಆದರೆ ನಮಗೆಲ್ಲಾ ಈಗಾಗಲೇ ಅರಿವಿಗೆ ಬಂದಿರುವಂತೆ,  ಎಲ್ಲರೂ ನಾವು ಟೈಪಿಸಿದ ಪದಗಳನ್ನು ಓದಲು ಯುನಿಕೋಡ್ ಶಿಷ್ಟತೆಯನ್ನು ಬಳಸಿರಬೇಕು. ಆಗಲೇ ಎಲ್ಲರನ್ನು ಸುಲಭವಾಗಿ ತಲುಪಲು ಸಾಧ್ಯ. ಇಲ್ಲವಾದಲ್ಲಿ. ನಿಮ್ಮ ಲೇಖನವನ್ನು ಓದುವ ಪ್ರತಿಯೊಬ್ಬರೂ ನೀವು ಬಳಸಿದ ಫಾಂಟನ್ನು ತಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಂಡಿರಬೇಕಾಗುತ್ತದೆ.

ಕನ್ನಡದ ಮೊದಲ ಕೆಲವು ಫಾಂಟುಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ವಹಿಸಿಕೊಂಡಿತ್ತು. ಇದರ ಫಲಿತಾಂಶವಾಗಿ ನಮಗೆ ಕೇದಗೆ ಮತ್ತು ಮಲ್ಲಿಗೆ ನಮಗೆ ಜಿ.ಪಿ.ಎಲ್ ಲೈಸೆನ್ಸಿನಡಿ ದೊರೆತವು. ಈ ಫಾಂಟುಗಳ ಕಥೆಯನ್ನು ಕೆದಕಿದರೆ ದೊಡ್ಡ ಕಥೆಯನ್ನೇ ಬರೆಯಬಹುದು.  ಇದರ ಜೊತೆಗೆ ರೆಡ್‌ಹ್ಯಾಟ್ ಲೋಹಿತ್ ಪರಿವಾರಕ್ಕೆ ಸೇರಿದ ಫಾಂಟುಗಳನ್ನು ಭಾರತೀಯ ಭಾಷೆಗಳಿಗೆ ನೀಡಿತು. ಲೋಹಿತ್ ಕನ್ನಡ – ಇದರಲ್ಲಿನ ಕನ್ನಡ ಫಾಂಟು. ರೆಡ್‌ಹ್ಯಾಟ್ ಇದನ್ನು ಇಂದಿಗೂ ಪಾಲನೆ ಪೋಷಣೆ ಮಾಡಿಕೊಂಡು ಬಂದಿದೆ. ಅತಿ ಕಡಿಮೆ ತಾಂತ್ರಿಕ ದೋಷಗಳನ್ನು ಹೊಂದಿರುವ ಈ ಫಾಂಟು, ಲಿನಕ್ಸ್ ಬಳಸುವ ನಮ್ಮಲ್ಲನೇಕರಿಗೆ ಅದರ ಮುಖಛರ್ಯೆ ಇಂದಾಗಿಯೋ ಏನೋ, ಅಷ್ಟು ಇಷ್ಟವಾಗಿಲ್ಲ. ಸಾಮಾನ್ಯವಾಗಿ ನಾವು ಬಳಸುವ ಫಾಂಟು ಕೇದಗೆ.

ಈ ಎಲ್ಲ ಫಾಂಟುಗಳ ಮೂಲ ತಾಂತ್ರಿಕ ತೊಂದರೆಗಳು ನಮಗೆ ಕಾಣಸಿಗುವುದು ಅದನ್ನು ನಾವು ಸಂಪೂರ್ಣವಾಗಿ ಬಳಸಿದಾಗ ಮಾತ್ರ. ಸಂಚಯ ತಂಡ ಅರಿವಿನ ಅಲೆಗಳನ್ನು ಹೊರ ತರುವಾಗ, ಈ ಫಾಂಟುಗಳ ಮತ್ತಷ್ಟು ತೊಂದರೆಗಳು ನಮ್ಮ ಗಮನಕ್ಕೆ ಬಂದವು ಕೂಡ. ಅವುಗಳನ್ನು ತಕ್ಷಣವೇ ಫಾಂಟ್ ಫೋರ್ಜ್ ಮೂಲಕ ತಿದ್ದಿದ್ದೂ ಆಯ್ತು. ಆದರೆ ಇವುಗಳನ್ನು ಮೂಲ ತಂತ್ರಜ್ಞರಿಗೆ ತಲುಪಿಸಲು ಸಾಧ್ತ್ಯವಿರಲಿಲ್ಲ. ಯಾಕೆಂದರೆ ಸಧ್ಯ ಈ ಫಾಂಟುಗಳನ್ನು (ಕೇದಗೆ, ಸಂಪಿಗೆ ಮತ್ತು ಮಲ್ಲಿಗೆ) ಯಾರೂ ನೋಡಿಕೊಳ್ಳುತ್ತಿಲ್ಲ.  ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಹುವಾಗಿ ಬಳಸುವ ನಮ್ಮಲ್ಲಿ ಫಾಂಟುಗಳ ಮೇಲೆ ತುಂಬು ಪ್ರೀತಿ ಹುಟ್ಟಿದ್ದು ನಮ್ಮ ಹಳ್ಳಿ ಮನೆ ಅರವಿಂದನಿಗೆ.  ಕೇದಗೆ ಮತ್ತು ಮಲ್ಲಿಗೆ ಫಾಂಟುಗಳ ಅನೇಕ ತೊಂದರೆಗಳನ್ನು ನಿವಾರಿಸಿ ಅವುಗಳನ್ನು ಇಂದು ನಿಮ್ಮ ಮುಂದೆ ಇಟ್ಟಿದ್ದಾನೆ.

ಫಾಂಟುಗಳ ತೊಂದರೆಯನ್ನು ನಿವಾರಿಸಲು, ಅದರ ಮೂಲ ನಿರ್ವಾಹಕರು ಜವಾಬ್ದಾರಿವಹಿಸಿಕೊಳ್ಳಬೇಕು. ಆದರೆ, ಅವರ ಅನುಪಸ್ಥಿತಿಯಲ್ಲಿ ನಾವುಗಳು ಹೊಸ ಪರಿಹಾರಗಳನ್ನು ಫಾಂಟುಗಳಿಗೆ ಹೊಂದಿಸಿ ಅದೇ ಹೆಸರಿನಲ್ಲಿ ನಿಮ್ಮೆಲ್ಲರಿಗೂ ದೊರೆಯುವಂತೆ ಮಾಡಲಾಗುವುದಿಲ್ಲ. ಆದ್ದರಿಂದಲೇ  ಅವುಗಳನ್ನು ಮೂಲ ಫಾಂಟುಗಳಿಂದ ಫೋರ್ಕ್ ಮಾಡಿ ಹೊಸ ಹೆಸರುಗಳನ್ನೂ ನೀಡಿದ್ದಾನೆ. ಕೇದಗೆ – ಗುಬ್ಬಿಯಾಗಿಗೂ, ಮಲ್ಲಿಗೆ – ನವಿಲಾಗಿಯೂ ಓಪನ್ ಫಾಂಟ್ ಲೈಸೆನ್ಸ್ (Open Font License 1.1 (OFL)) ನಡಿ ಲಭ್ಯವಾಗುವಂತೆ ಮಾಡಲಾಗಿದೆ. ಇವು ಈ ಕೆಳಗೆ ಕೊಟ್ಟಿರುವ ಗಿಟ್ ಹಬ್‌ನ ಕೊಂಡಿಗಳಲ್ಲಿ ಲಭ್ಯವಿವೆ.

[1] http://github.com/aravindavk/Gubbi

[2] http://github.com/aravindavk/Navilu

ಗುಬ್ಬಿ  –  ಹಳೆಯ ಕೇದಗೆ ಫಾಂಟುಗಳ ತೊಂದರೆಗಳನ್ನು ಮತ್ತು ರೆಂಡರಿಂಗ್ ತೊಂದರೆಗಳನ್ನು ನಿವಾರಿಸಲಾಗಿದೆ.

ನವಿಲು –  ಹಳೆಯ ಮಲ್ಲಿಗೆ  ಫಾಂಟುಗಳ ತೊಂದರೆಗಳನ್ನು ಮತ್ತು ರೆಂಡರಿಂಗ್ ತೊಂದರೆಗಳನ್ನು ನಿವಾರಿಸಲಾಗಿದೆ.

ಅರವಿಂದನ ಕೆಲಸ ಮತ್ತು ಹುರುಪು ಬಹು ಮೆಚ್ಚುಗೆಗೆ ಪಾತ್ರವಾದದ್ದು. ಮುಂದೆ ಇನ್ನಷ್ಟು ಬಾಕಿಯಿದೆ ಎನ್ನುತ್ತಲೇ ಮತ್ತೆ ನಮ್ಮನ್ನು ಮತ್ತೆ ತುದಿಗಾಗಲ್ಲಿ ನಿಲ್ಲಿಸುತ್ತಾನೆ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್
ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್‌ ಒಂದು ಯಾವುದೇ ಹೊರಗಿನ ಡ್ರೈವರ್‌ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್ ನಿಮಗಾಗಿ.

ಇಲ್ಲಿಯವರೆಗೂ ಬಹುತೇಕ ಕ್ಯಾನನ್ ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್ಗಳು ಲಭ್ಯವಿರಲಿಲ್ಲ. ಟರ್ಬೋಪ್ರಿಂಟ್ ಎಂಬ ಕಂಪೆನಿಯೊಂದು ಇಂತಹ  ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್‌ ಅನ್ನು ಒದಗಿಸುತ್ತಿತ್ತು. ಆದರೆ, ಅದನ್ನು ಕೊಂಡು ಉಪಯೋಗಿಸ ಬೇಕಾದಲ್ಲಿ  ಪ್ರಿಂಟರ್‌ನಷ್ಟೇ ದುಡ್ಡನ್ನು ಮತೆ ಸುರಿಯಬೇಕಿತ್ತು. ಈಗ ಉಬುಂಟುವಿನಲ್ಲಿ ಪ್ರಿಂಟರ್ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಬ್ರೌಸರ್ ಗಳಿಗೆ
ಜರ್ಮನಿಯ ರಿಕ್ಯುರಿಟಿ ಲ್ಯಾಬ್ಸ್ ನ ಅನ್ವೇಷಕರು ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಎನ್ಕ್ರಿಪ್ಷನ್ ತಂತ್ರಾಂಶವನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಇಂಟರ್ನೆಟ್ ನ ವೆಬ್‌ಮೈಲ್ ಬಳಕೆಯ ಸಮಯದಲ್ಲಿ ತಮ್ಮ ಸಂದೇಶವನ್ನು ಓಪನ್ ಪಿ.ಜಿ.ಪಿ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಬಹುದು. GPG4Browsers ಎಂಬ ಈ ತಂತ್ರಾಂಶ http://gpg4browsers.recurity.com ನಲ್ಲಿ ಲಭ್ಯವಿದೆ. ಈ ತಂತ್ರಾಂಶದ ಪ್ಲಗಿನ್ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಕೆಲಸ ಮಾಡಲಿಕ್ಕೆ ಈಗಾಗಲೇ ಅಣಿಯಾಗಿದೆ ಹಾಗೂ ನೀವು ಇದನ್ನು ಜಿ-ಮೈಲ್ ನೊಂದಿಗೆ ಬಳಸಬಹುದು.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಲಿನಕ್ಸೂ – ತೊಂದರೆಗಳೂ – ಪರಿಹಾರಗಳು
ಮೊನ್ನೆ ಒಮ್ಮೆ ಹೀಗಾಯ್ತು…

itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ.

kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ.

(“rh” “ಱ್”) ; not in ITRANS Kannada table

ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ ಮಾಡುತ್ತಿದೆ.

ಹೀಗೆ ಯಾವಾಗಲೋ ಒಮ್ಮೆ ವರ್ಷಾನುವರ್ಷಗಳಿಂದ ಲಿನಕ್ಸ್ ಬಳಸುತ್ತಿರುವ ನಮಗೇ ಹೊಸ ತೊಂದರೆ ತಾಪತ್ರಯಗಳು ಕಾಡುತ್ತಲೇ ಇರುತ್ತವೆ. ಹಾಗೆಂದು ಎಲ್ಲವೂ ಕೆಲಸ ಮಾಡುವುದೇ ಇಲ್ಲ ಎಂದೇನಲ್ಲವಲ್ಲ. ಮೇಲಿನ ಸಾಲುಗಳನ್ನೇ ನೋಡಿ. ನನ್ನ ತಿಳಿವಿಗೆ ಬಂದಿದ್ದ ಒಂದೆರಡು ವಿಷಯಗಳನ್ನು ಜಾಲಾಡಿ ನೋಡಿ ತೊಂದರೆಯನ್ನೂ ದೂರ ಮಾಡಿಕೊಂಡದ್ದಾಗಿದೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ನನಗೆ ಇಂತದ್ದೊಂದು ಶಕ್ತಿಯನ್ನು ಕೊಟ್ಟಿದೆ. ನಾನು ಬಳಸುತ್ತಿರುವ ತಂತ್ರಾಂಶ ಮತ್ತ್ಯಾವುದೋ ಖಾಸಗಿ ಸಂಸ್ಥೆಯದ್ದಾಗಿದ್ದರೆ, ನಾವು ಅವರ ತಂತ್ರಜ್ಞರ ತಂಡ ಪರಿಹಾರ ಸೂಚಿಸುವವರೆಗೂ ಯೋಚಿಸುತ್ತಾ ಕುಳಿತಿರಬೇಕಿತ್ತೋ ಏನೋ ಅಲ್ವೇ? ಜೊತೆಗೆ ತಂತ್ರಾಂಶ ಕೆಲಸ ಮಾಡುವುದರ ಬಗ್ಗೆ ಹೆಚ್ಚಿನ ಅರಿವನ್ನು ನಾವೇ ಬೆಳೆಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

ಲಿನಕ್ಸ್ ನಲ್ಲಿ ಕನ್ನಡ ಮತ್ತು ಅದರ ಸುತ್ತಲಿನ ತೊಂದರೆ ನಿವಾರಣೆಗಳ ಬಗ್ಗೆ ನಮ್ಮ ಹಳ್ಳಿಮನೆ ಅರವಿಂದ ಬರೆದಿರುವ ಲೇಖನವನ್ನೂ ಓದಿ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಉಬುಂಟು ೧೨.೦೪ – ಬದಲಾವಣೆಗಳೇಕೆ?
ಉಬುಂಟು ೧೧.೧೦ ಈಗಾಗಲೇ ನಮ್ಮಲ್ಲನೇಕರ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳನ್ನೇರಿರಬಹುದು. ಹಿಂದಿನ ಉಬುಂಟುಗಳಿಗಿಂದ ಇದರಲ್ಲಿ ಭಿನ್ನವಾಗಿದ್ದದ್ದು ಉಬುಂಟು ಯುನಿಟಿ ಡೆಸ್ಕ್ಟಾಪ್ ಮತ್ತು ಜಿನೋಮ್ -೩ ನ ಹೊಸ ಆವೃತ್ತಿ . ಇದರಲ್ಲಿ ಕನ್ನಡ ಓದಲಿಕ್ಕೆ ನಾವೇನೂ ಮಾಡಬೇಕಿಲ್ಲ. ಇನ್ಟಾಲ್ ಆದ ತಕ್ಷಣದಿಂದಲೇ ಕನ್ನಡ ಓದಲಿಕ್ಕೆ ಪ್ರಾರಂಭಿಸಬಹುದು. ಕನ್ನಡದಲ್ಲಿ ಟೈಪಿಸಲಿಕ್ಕೆ ಐ-ಬಸ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. Settings -> System Settings -> Language Support ಅಥವಾ ವಿಂಡೋಸ್ ಕೀ ಪ್ರೆಸ್ ಮಾಡಿ ಯುನಿಟಿಯ ಸರ್ಚ್ ನಲ್ಲಿ Language Support ಟೈಪಿಸಿದರಾಯ್ತು. ಲ್ಯಾಂಗ್ವೇಜ್ ಸಪೋರ್ಟ್ ನಲ್ಲಿ ibus ಅನ್ನು “Keyboard Input Method System” ಆಗಿ ಆಯ್ಕೆ ಮಾಡಿಕೊಂಡು ibus-m17n ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಐ-ಬಸ್ ನಲ್ಲಿ ಕನ್ನಡದ ಕೀ-ಬೋರ್ಡ್ ಲೇಔಟ್ ಗಳನ್ನು ಸೇರಿಸಿಕೊಂಡರಾಯ್ತು. ಕನ್ನಡ ಟೈಪಿಸಲಿಕ್ಕೆ ಪ್ರಾರಂಭಿಸಬಹುದು.

ನೆನಪಿರಲಿ:- ಸಿನ್ಯಾಪ್ಟೆಕ್ ಬದಲಿಗೆ ಈಗ ಉಬುಂಟು ಸಾಫ್ಟ್ವೇರ್ ಸೆಂಟರ್ ಇದೆ. ಸಿನ್ಯಾಪ್ಟೆಕ್ ನಿಮಗೆ ಬೇಕಿದ್ದರೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.

ಈಗ ಮುಂಬರುವ ಉಬುಂಟುವಿನಲ್ಲಿ ಆಗಲಿರುವ ಕೆಲವು ಮುಖ್ಯ ಬದಲಾವಣೆಗಳನ್ನು ನೋಡೋಣ.

ಇತ್ತೀಚಿನವರೆಗೂ ನೊಡಿದ (ಕಳೆದ ಎರಡು- ಮೂರು ಆವೃತ್ತಿಗಳಲ್ಲಿ) ಬ್ಯಾನ್‌ಶೀ ಮ್ಯೂಸಿಕ್ ಪ್ಲೇಯರ್ ಅನ್ನು ರಿಥಮ್ ಬಾಕ್ಸ್ ಹೊರದಬ್ಬಲಿದೆ. ಹಾಗು ನೋಟ್ಸ್ ಬರೆಯಲಿಕ್ಕಿದ್ದ ಟಾಮ್ ‌ಬಾಯ್ ತಂತ್ರಾಂಶವನ್ನೂ ಕೂಡ ಕೈ-ಬಿಡಲಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ, ಈ ಎರಡೂ ತಂತ್ರಾಂಶಗಳು ಮೂಲತ: Mono ಲೈಬ್ರರಿಗಳಿಂದ ಕೆಲಸ ನಿರ್ವಹಿಸುತ್ತವೆ. ಉಬುಂಟು ಸಿ.ಡಿ ಜೊತೆ ಬರುವ ಬೇರೆ ಯಾವುದೇ ತಂತ್ರಾಂಶಗಳು Mono ಬಳಸದೆ ಕೆಲಸ ನಿರ್ವಹಿಸುತ್ತವೆ. ಈ ಎರಡು ತಂತ್ರಾಂಶಗಳ ಜೊತೆ ಮೊನೋ ಲೈಬ್ರರಿಯನ್ನು ತೆಗೆದು ಹಾಕುವುದರಿಂದ ಸಿ.ಡಿ ಜೊತೆಗೆ ಇನ್ನೂ ಹೆಚ್ಚಿನ ಉತ್ತಮ ತಂತ್ರಾಂಶಗಳನ್ನು ಜನರಿಗೆ ಪಸರಿಸುವಲ್ಲಿ ಸಹಾಯವಾಗುತ್ತದೆ ಎಂಬುದು ಉಬುಂಟು ಅಭಿವೃದ್ದಿ ತಂಡದ ಅಭಿಪ್ರಾಯ.

ಉಬುಂಟು ತಂಡ ಪ್ರತಿ ಬಾರಿಯೂ ಹೀಗೆ ಒಂದಿಲ್ಲಾ ಒಂದು ಬದಲಾವಣೆಗಳನ್ನು ತನ್ನ ಆವೃತ್ತಿಗಳಲ್ಲಿ ಅಳವಡಿಸಿಕೊಳ್ಳುತ್ತಲೇ ಇರುವುದು ಕೆಲವರಿಗೆ ಬೇಜಾರು ತರಿಸಿದರೂ, ಕಾಲಕಾಲಕ್ಕೆ ಅತ್ಯುತ್ತಮ ಮತ್ತು ಸದೃಡ ತಂತ್ರಾಂಶಗಳನ್ನು ಎಲ್ಲರಿಗೂ ಹಿತವಾಗುವ ರೂಪದಲ್ಲಿ ಅಭಿವೃದ್ದಿ ಪಡಿಸುವ ಯೋಜನೆ ಇಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಉಬುಂಟು ಇನ್ನೂ ಜನಪ್ರಿಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿ ಯೋಜನೆಗಳು ಸಮುದಾಯದ ಜೊತೆಗೆ ಬೆಳೆಯುತ್ತಾ ಬರುವುದರಿಂದ ಕೆಲವು ತಂತ್ರಾಂಶಗಳ ಅಭಿವೃದ್ದಿಯ ಕಾಲಘಟ್ಟದಲ್ಲಿ ಕೆಲವೊಮ್ಮೆ ಏರುಪೇರುಗಳಾಗುವುದುಂಟು. ಇವುಗಳೂ ಕೂಡ ಉಬುಂಟುವಿನಂತಹ ಯೋಜನೆಗಳ ಏರು ಪೇರಿಗೂ ಕಾರಣವಾಗುತ್ತವೆ. ಜೊತೆಗೆ ಯೋಜನೆಯ ಮುಖ್ಯಸ್ಥರು, ಸಮುದಾಯದ ಸದಸ್ಯರುಗಳೂ ಕೂಡ ಇಂತಹ ಬದಲಾವಣೆಗಳಿಗೆ ಮುನ್ನುಡಿ ಇಡುತ್ತಾರೆ. ಒಟ್ಟಿನಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಒಳ್ಳೆಯ ತಂತ್ರಾಂಶ ಬೇಕಿರುವುದು ಸಾಮಾನ್ಯ ಬಳಕೆದಾರನಿಗೆ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.

ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ
ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್‌ಗಳಲ್ಲಿ ಬಳಸುವ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಉಬುಂಟು ಹಾಗೂ ಲಿನಕ್ಸ್ ಮಿಂಟ್‌ನ ನಂತರ ಅತ್ಯಂತ ಜನಪ್ರಿಯ ಗ್ನು/ಲಿನಕ್ಸ್ ಆವೃತ್ತಿ ಫೆಡೋರ.

Fedora 16 ನಲ್ಲಿ ಹೊಸತೇನಿದೆ?

ಹೊಸ ಕರ್ನೆಲ್ v3.1.0, ಜಿನೋಮ್ ಡೆಸ್ಕ್ಟಾಪ್ ನ ಹೊಸ ಆವೃತ್ತಿ v3.2.1, KDE ನ ಹೊಸ ಆವೃತ್ತಿ v4.7.2 , Grub 2.0 ಅವಲಬ್ದತೆಯ ಜೊತೆಗೆ, ಕಂಪ್ಯೂಟರ್ ಅಡ್ಮಿನ್‌ಗಳಿಗಾಗಿ ಅಪಾಚೆಯ ಹೊಸ ಆವೃತ್ತಿ ಸೇರಿಸಲಾಗಿದೆ. ಬಳಕೆದಾರರ ಐಡಿ (UID/GID) ಗಳ ಪ್ರಾರಂಭಿಕ ಸಂಖ್ಯೆಯನ್ನು ಹೆಚ್ಚಿಸಲಾಗಿದೆ , ಹಳೆಯ ext2/ext3 ಫೈಲ್ ಸಿಸ್ಟಂಗಳನ್ನು ext4 ಕರ್ನೆಲ್ ಡ್ರೈವರ್ ಮೂಲಕವೇ ಓದುವಂತೆ ಮಾಡಲಾಗಿದೆ. ವರ್ಚುಅಲೈಸೇಷನ್ ನಲ್ಲಿ ಓಪನ್ ಸ್ಟ್ಯಾಕ್ ಮತ್ತು ಅಯಿಲಸ್ ಕಂಡಕ್ಟರ್ ಗಳನ್ನೂ ಸೇರಿಸಲಾಗಿದೆ. ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆಯಲ್ಲಿ ಬೇಕಿದ್ದ HAL ಡೀಮನ್ ಮತ್ತು libhal ಬದಲಿಗೆ udisks, upower ಮತ್ತು libudev ಗಳನ್ನು ಸೇರಿಸಲಾಗಿದೆ.

ಈ ಎಲ್ಲ ಬದಲಾವಣೆಗಳು, ಫೆಡೋರ ಲಿನಕ್ಸ್‌ ಕಂಪ್ಯೂಟರಿನಲ್ಲಿ ಮೊದಲಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತವೆ. ಹಾಗೂ ಇತ್ತೀಚೆಗೆ ಬಂದ ಜಿನೋಮ್ ಮತ್ತು ಕೆಡಿಯಿ ಗಳ ಸವಿ ಸವಿಯಲು ಅನುವು ಮಾಡಿಕೊಡುತ್ತದೆ. ಹೊಸ ಕರ್ನೆಲ್ ಲಿನಕ್ಸ್ ಕಾರ್ಯಶಕ್ತಿಯನ್ನು ಹೆಚ್ಚಿಸಿದೆ ಹಾಗೂ ಇತ್ತೀಚೆಗೆ ಸುದ್ದಿಯಲ್ಲಿದ್ದ ಲಿನಕ್ಸ್ ಪವರ್ ಬಗ್ ತೊಂದರೆಯನ್ನು ಕೂಡ ಹೊಸ ಕರ್ನೆಲ್ ಮೂಲಕ ನಿವಾರಿಸಿಕೊಂಡಿದೆ.

ಫೆಡೋರ ಡೌನ್ಲೋಡ್ ಮಾಡಿಕೊಳ್ಳಲು – http://fedoraproject.org ಗೆ ಭೇಟಿಕೊಡಿ.

Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at http://linuxaayana.net.