ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?

ಸಾಮಾನ್ಯ ಪ್ರಶ್ನೆಗಳು | 0 comments

Written By Omshivaprakash H L

March 21, 2010

ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ ಹೆಣಗಾಡಿದ್ದಿದೆ.

ಈಗ ಪ್ರಿಂಟರ್ಗಳನ್ನು ಉಪಯೋಗಿಸೋದು ತುಂಬಾ ಸುಲಭ. ಪ್ರಿಂಟರ್ ತಂದು, ಅದರ ಕೇಬಲ್ ಅನ್ನು ನಿಮ್ಮ ಕಂಪ್ಯೂಟರ್ ಗೆ ಜೋಡಿಸಿ, ಸ್ವಿಚ್ ಆನ್ ಮಾಡಿದರಾಯಿತು (ಗ್ನು/ಲಿನಕ್ಸ್ ನಲ್ಲಿ 😉 ). ನಿಮಗೇ ತಿಳಿಯದಂತೆ, ನಿಮ್ಮ ಪ್ರಿಂಟರ್ ಕೆಲಸ ಮಾಡ್ಲಿಕ್ಕೆ ತಯಾರಾಗಿಬಿಟ್ಟಿರುತ್ತೆ.

ಕಳೆದ ವಾರ ಸಂಪದದ ತಿ-ಇನ್-ಒನ್ ಪ್ರಿಂಟರ್ ಬಂತು, ಕನೆಕ್ಟ್ ಮಾಡಿದ್ದಷ್ಟೇ, ಕ್ಷಣ ಮಾತ್ರದಲ್ಲಿ ಪ್ರಿಂಟರ್ ಪತ್ರಗಳನ್ನು ಪ್ರಿಂಟ್ ಮಾಡ್ಲಿಕ್ಕೆ ತಯಾರು. ಅದರಲ್ಲಿ ಸ್ಕ್ಯಾನ್ ಮಾಡ್ಲಿಕ್ಕೆxsane ತಂತ್ರಾಂಶ ಉಪಯೋಗಿಸ್ಬೇಕು. ಈಗಾಗ್ಲೇ ಇನ್ಸ್ಟಾಲ್ ಆಗಿದ್ದ ತಂತ್ರಾಂಶವನ್ನ ಓಪನ್ ಮಾಡಿ, ಪುಸ್ತಕವೊಂದರ ಮುಖಪುಟ ಕೂಡ ಸ್ಕ್ಯಾನ್ ಮಾಡಿದ್ದಾಯ್ತು. HP ಮತ್ತು Canon ಪ್ರಿಂಟರ್ಗಳು ತುಂಬಾ ಸುಲಭವಾಗಿ ಲಿನಕ್ಸ್ ನಲ್ಲಿ ಕೆಲಸ ಮಾಡ್ತವೆ. ಹಳೆಯ ಪ್ರಿಂಟರ್ಗಳನ್ನ ಎತ್ತಿಟ್ಟಿದ್ದರೆ, ಒಮ್ಮೆ ಲಿನಕ್ಸ್ ನಲ್ಲಿ ಉಪಯೋಗಿಸಿ ನೋಡಿ. ಕೆಲವೊಂದು ಕೆಲಸಗಳಿಗೆ ಅವು ಉಪಯೋಗಕ್ಕೆ ಬಂದಾವು.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

IPv6 ನಿಷ್ಕ್ರಿಯಗೊಳಿಸುವುದು ಹೇಗೆ?

ಉಬುಂಟು ೧೨.೦೪, ಲಿನಕ್ಸ್ ಮಿಂಟ್ ಇತ್ಯಾದಿಗಳಲ್ಲಿ IPv6 ನಿಂದಾಗಿ ಇಂಟರ್ನೆಟ್ ಸಂಪರ್ಕ ಬಹಳ ನಿಧಾನವಾಗಿ ಕೆಲಸ ಮಾಡುವುದು. ಇದು ಸಾಮಾನ್ಯವಾಗಿ ಕೇಳಿಬರುವ ತೊಂದರೆಯಾಗಿದೆ. IPv6ನ ಬಳಕೆ ಇನ್ನೂ ದಿನಬಳಕೆಯಲ್ಲಿ ಇಲ್ಲದಿರುವುದರಿಂದ ಇದನ್ನು ನಿಷ್ಕ್ರಿಯಗೊಳಿಸುವುದರಿಂದ ಈ ತೊಂದರೆ ನಿವಾರಿಸಬಹುದು. ನಿಷ್ಕ್ರಿಯಗೊಳಿಸಲು ಈ ಕೆಳಗೆ...

read more

ಉಬುಂಟು ಲಾಗಿನ್ ಪುಟದಲ್ಲಿ ಬರುವ ಗೆಸ್ಟ್(ಅತಿಥಿ) ಸಮಾವೇಶ/ಲಾಗಿನ್ ತೆಗೆಯುವುದು

ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ: sudo nano /usr/share/lightdm/lightdm.conf.d/50-ubuntu.conf ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ. allow-guest=false...

read more