ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಉಬುಂಟು ೯.೦೪ ಕೈಗೆ ಸಿಕ್ಕಾಯ್ತು ಅನ್ನಿಸುತ್ತೆ ಹಲವರಿಗೆ.. ಕೆನಾನಿಕಲ್ ಕಂಪನಿ ಅದರ ಒಂದು ಪ್ರತಿಯನ್ನ ನನಗೂ ಕಳಿಕೊಟ್ಟಿದೆ. ಸರಿ, ಕೈಗೆ ಸಿ.ಡಿ ಎನೋ ಸಿಕ್ಕಿದೆ. ಹಳೆಯ ಉಬುಂಟುವಿನಿಂದ ೯.೦೪ ಆವೃತ್ತಿಗೆ ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅನ್ನೊ ಪ್ರಶ್ನೆ ಇರಬೇಕಲ್ಲ ನಿಮ್ಮ ಮನಸಿನಲ್ಲಿ? ಈ ಲೇಖನ ಆ ಪ್ರಶ್ನೆಗೆ ಉತ್ತರ ಕೊಡಲಿದೆ.

ನಿಮ್ಮ ಉಬುಂಟುವಿನ ಆವೃತ್ತಿ ಯಾವ್ದು ಅಂತ ಹೇಗೆ ಕಂಡು ಕೊಳ್ತೀರಾ?

System -> About Ubuntu ಈ ಮೆನು ಆಯ್ಕೆ ನಿಮಗೆ ಅದರ ಉತ್ತರ ಕೊಡುತ್ತೆ.

ನನ್ನ ಹತ್ರ ಉಬುಂಟು ೮.೦೪ ಇದೆ ಹ್ಯಾಗೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳೋದು? ಇದು ಸಾಧ್ಯಾನಾ?

ಖಂಡಿತ ಅಪ್ಡೇಟ್ ಮಾಡಿಕೊಳ್ಳಬಹುದು. ಉಬುಂಟು ಆವೃತ್ತಿಯನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಿದ್ದರೆ ಈ ಕೆಲಸ ಸುಲಭವಾಗುತ್ತೆ.

ಉಬುಂಟುವನ್ನು ನೇರವಾಗಿ ೮.೦೪ ಇಂದ ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಮೊದಲು ಅದನ್ನು ೮.೧೦ ಗೆ ಅಪ್ಡೇಟ್ ಮಾಡಿಕೊಂಡು ನಂತರ ಅದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಳ್ಳಬೇಕು.

ಸರಿ. ೮.೧೦ಗೆ ಅಪ್ಡೇಟ್ ಮಾಡಿಕೊಳ್ಳಲಿಕ್ಕೆ ಏನ್ಮಾಡ್ಬೇಕು?

ಮೊದಲು alt+f2 ಕೀಗಳನ್ನು ಪ್ರೆಸ್ ಮಾಡಿ ಅಥವಾ Applications -> Accessories -> Terminal ತೆಗೆದುಕೊಂಡು ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.

sudo update-manager -d

ಇದಾದ ನಂತರ ಮುಂಬರುವ ಅಪ್ಡೇಟ್ ಮ್ಯಾನೇಜರ್ ನಲ್ಲಿ ಸ್ವಲ್ಪ ಕಣ್ಣಾಡಿಸಿ.

Quote:

New distribution release ’8.10′ is available [upgrade]

ಕಾಣಿಸ್ತಿರಬೇಕಲ್ವಾ? ಈಗ ಅಲ್ಲಿ [upgrade]  ಮೇಲೆ ಕ್ಲಿಕ್ ಮಾಡಿ.

ಸೂಚನೆ ೧:- ಇದಕ್ಕೆಲ್ಲಾ ಇಂಟರ್ನೆಟ್ ಇರಲೇಬೇಕು ಮತ್ತೆ ಈ ಅಪ್ಗ್ರೇಡ್ ಗಳು ಎನಿಲ್ಲವೆಂದರೂ ೬೦೦ ಎಂ.ಬಿ ಇಂದ ೧ ಜಿ.ಬಿಯ ವರೆಗೆ ತಂತ್ರಾಂಶಗಳನ್ನು ಡೌನ್ಲೋಡ್ ಮಾಡಬಹುದು. ನಿಮ್ಮ ಸಿಸ್ಟಂನಲ್ಲಿ ಇನ್ಸ್ಟಾಲ್ ಆಗಿರುವ ತಂತ್ರಾಂಶಗಳು ಇದನ್ನು ನಿರ್ಧರಿಸುತ್ತವೆ.

ಸರಿ. ಅಪ್ರ್ಗೇಡ್ ಕೊಟ್ಟಾಯ್ತಲ್ಲ. ಅರಾಮಾಗಿ ಕೂರಿ ಅದು ಮುಗಿಯುವವರೆಗೆ :) .

ಸೂಚನೆ ೨:- ನಿಮ್ಮ ಸಿಸ್ಟಂ ನಲ್ಲಿ 3rd party ಸೋರ್ಸ್ ಗಳನ್ನು ಅಳವಡಿಸಿಕೊಂಡರೆ, ಈ ಅಪ್ಡೇಟ್ ಆಗದೇ ಹೋಗಬಹುದು.  System -> Administration -> Software Sources ಇಲ್ಲಿ ಉಬುಂಟುವಿನ ಸೋರ್ಸ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಬೇರೆಯವನ್ನು ಡಿಸೇಬಲ್ ಮಾಡಿ ನಂತರ ಅಪ್ಡೇಟ್ ಮಾಡಿದರೆ ಈ ತೊಂದರೆ ತಪ್ಪುತ್ತದೆ.

ಸೂಚನೆ ೩:-  ಅಯ್ಯೋ ಕರೆಂಟ್ ಹೊರಟೋಯ್ತು ಮಧ್ಯದಲ್ಲಿ. ಈಗೇನು ಮಾಡೋದು? ಹೆದರಬೇಡಿ. ಇನ್ಸ್ಟಾಲೇಷನ್ ಸುರುವಾಗದ, ತಂತ್ರಾಂಶಗಳು ಇನ್ನೂ ಡೌನ್ಲೋಡ್ ಆಗ್ತಿತ್ತು ಅಂತಂದ್ರೆ ತೊಂದರೆ ಏನಿಲ್ಲ. ಮತ್ತೆ ಮೊದಲಿನಿಂದ ಅಪ್ಡೇಟ್ ಶುರುಮಾಡಿಕೊಳ್ಳಿ ಮೇಲೆ ಹೇಳಿದ ಹಾಗೆ. ಈಗಾಗಲೇ ಡೌನ್ಲೋಡ್ ಆಗಿರೋ ಪ್ಯಾಕೇಜ್ಗಳು ಮತ್ತೆ ಡೌನ್ಲೋಡ್ ಆಗಲ್ಲ. ಮಿಕ್ಕವನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಲಾಗುತ್ತೆ.

ಸೂಚನೆ ೪:-  ಸೂಚನೆ ೩ ರಲ್ಲಿ ಹೇಳಿದಂತೆ ಮಧ್ಯದಲ್ಲಿ ಅಪ್ಗ್ರೇಡ್ ಆಗದೇ ಉಳಿದ ಸಿಸ್ಟಂ ನಲ್ಲಿ ಜಿ.ಯು.ಐ ಬರದೆ ಬರಿ ಕನ್ಸೋಲ್ ಕಂಡರೆ ಮುಂದೇನು ಮಾಡೋದು?

ಇದಕ್ಕೆ ಅಪ್ಗ್ರೇಡ್ ಮುಂದುವರೆಸಿ ಬೇಕು.  ಹೌದು ಕಮ್ಯಾಂಡ್ ಪ್ರಾಂಪ್ಟ್ ನಲ್ಲೇ. ಲಾಗಿನ್ ಆಗಿ ನಂತರ ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ.

Quote:

sudo aptitude dist-upgrade

ಇದು ಮುಗಿದ ನಂತರ ಸಿಸ್ಟಂ ರೀಸ್ಟಾರ್ಟ್ ಮಾಡಿದರಾಯಿತು.

ಈಗ ಮತ್ತೆ ನಿಮ್ಮ ಉಬುಂಟುವಿನ ಆವೃತ್ತಿ ಯಾವುದೆಂದು ನೋಡಿ. ಇಷ್ಟರಲ್ಲೇ ಅದು ೮.೧೦ ಆಗಿರಬೇಕಲ್ಲವೇ? ಸಕತ್! ಸರಿ ಹಾಗಿದ್ರೆ ಇದನ್ನು ೯.೦೪ ಗೆ ಅಪ್ಡೇಟ್ ಮಾಡಿಕೊಂಡು ಬಿಡಿ.

೯.೦೪ ಗೆ ಹ್ಯಾಗೆ ಅಂದ್ರಾ?

ಮೇಲೆ ಹೇಳಿದ ಕಥೆಯನ್ನೇ ಮತ್ತೆ ಹೇಳ್ಬೇಕಾಗುತ್ತೆ :) ಗೊತ್ತಾಯ್ತಲ್ಲ?

ಈ ರೀತಿ ಅಪ್ಡೇಟ್ ಮಾಡಿಕೊಳ್ಳಬೇಕಾದಲ್ಲಿ ಕೆಲವೊಂದು 3rd party ತಂತ್ರಾಂಶಗಳು ಕೆಲಸ ಮಾಡದೇ ಹೋಗಬಹುದು. ಆ ತಂತ್ರಾಂಶದ ವೆಬ್ಸೈಟ್ ನಲ್ಲಿ ಹೊಸ ಉಬುಂಟು ಆವೃತ್ತಿಗೆ ಬೇಕಾದ Software Soures ನ ಮಾಹಿತಿ ಕೊಟ್ಟಿರುತ್ತಾರೆ. ಅದನ್ನು ಮತ್ತೆ ಸೇರಿಸಿಕೊಂಡರಾಯಿತು.

ಸೂಚನೆ ೫:- ನಿಮ್ಮ ಇಂಟರ್ನೆಟ್ ಕನೆಕ್ಷನ್ ಸೀಮಿತ ಡೌನ್ಲೋಡ್ ವ್ಯವಸ್ಥೆ ಹೊಂದಿದ್ದರೆ ಹುಷಾರು ಟೆಲಿಫೋನ್ ಬಿಲ್ ಮುಗಿಲು ಮುಟ್ಟೀತು..

ಇದು ಬೇಡ ಅಂದ್ರೆ, ಹೊಸ ಉಬುಂಟು ಆವೃತ್ತಿಯ ಸಿ.ಡಿಯನ್ನ https://ubuntu.com ನಿಂದ ತರಿಸಿಕೊಳ್ಳಿ ನಂತರ ಹೊಸದಾಗಿ ಉಬುಂಟು ಇನ್ಸ್ಟಾಲ್ ಅಥವಾ ಸಿ.ಡಿ ಇಂದಲೇ ಅಪ್ಗ್ರೇಡ್ ಮಾಡಿಕೊಳ್ಳಬಹುದು.

ಕೊನೆ ಮಾತು:-  ನಮ್ಮ ಸಂಪದದ ಚಿಗುರು ಗ್ನು/ಲಿನಕ್ಸ್ ಅಪ್ಡೇಟ್ ಮಾಡೋದು ಕೂಡ ಹೀಗೆ ಗೊತ್ತಾ? ಆದ್ರೆ ಅದರಲ್ಲಿ ಉಬುಂಟುವಿನ ತರ ೬ ತಿಂಗಳಿಗೊಮ್ಮೆ ಹೊಸ ಆವೃತ್ತಿ ಬರೋದಿಲ್ಲ. ಇದರ ಬಗ್ಗೆ ಮೊದಲೊಮ್ಮೆ ಬರೆದಿದ್ದೆ. ಡೆಬಿಯನ್ ಆವೃತ್ತಿ ೫ ಹೊರಬಂದಾಗ ಅದನ್ನೊಮ್ಮೆ ಓದಿ.

ಈಗ ಉಬುಂಟು ೯.೦೪ ನೊಂದಿಗೆ ಮಜಾ ಮಾಡಿ.

ubuntu9.04.jpg

Select rating
ಉತ್ತಮಪಡಿಸಲಾಗದ ಬರಹ
ಇನ್ನೂ ಉತ್ತಮವಾಗಬಹುದು
ಒಳ್ಳೆಯ ಬರಹ
ಚೆನ್ನಾಗಿದೆ!
ಉತ್ತಮ ಬರಹ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Flat list – collapsed
Flat list – expanded
Threaded list – collapsed
Threaded list – expanded

ದಿನಾಂಕ – ಹೊಸತು ಮೊದಲು
ದಿನಾಂಕ – ಹಳೆಯವು ಮೊದಲು

10 comments per page
30 comments per page
50 comments per page
70 comments per page
90 comments per page
150 comments per page
200 comments per page
250 comments per page
300 comments per page

Select your preferred way to display the comments and click “Save settings” to activate your changes.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

shreekant.mishrikoti's picture
Submitted by shreekant.mishrikoti on May 17, 2009 – 6:43pm.

ಸರ್, ತರಿಸಿಕೊಂಡ ಸೀಡೀಯಿಂದ ಅಪ್ಡೇಟ್ ಮಾಡೋದು ಹೇಗೆ ಅಂತ ಸ್ವಲ್ಪ ಸುಳುಹು ಕೊಡಿ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

vasudev's picture
Submitted by vasudev on May 17, 2009 – 8:36pm.

ಹೌದು ಶಿವು ಸಿ.ಡಿ. ಯಿಂದ ಅಪ್ಗ್ರೇಡ್ ಹೇಗೆ ಮಾಡೋದು ಅಂತ ಹೇಳಿದ್ದರೆ ಸಹಾಯವಾಗ್ತಿತ್ತು.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

omshivaprakash's picture
Submitted by omshivaprakash on May 18, 2009 – 6:58pm.

:) ಹೌದಲ್ಲ.. ಹಾಕ್ತೇನೆ ಅದರ ಬಗ್ಗೆ ಕೂಡ…

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on June 15, 2009 – 1:38pm.

ಶಿವು, ಸಿ.ಡಿ. ಯಿಂದ ಅಪ್ಗ್ರೇಡ್ ಹೇಗೆ ಮಾಡೋದು ಅಂತ ಬೇರೆ ಕಡೆ ಹೇಳಿದ್ರಾ?

ನಂಗೂ ಉಬುಂಟು ೯.೦೪ ಸಿಡಿ ಕೈಗೆ ಸಿಕ್ಕಾಯ್ತು . ಆದ್ರೆ ವಿಂಡೋಸ್ ಎಕ್ಸ್‌ಪಿ ಜೊತೆ ಇನ್ಸ್ಟಾಲ್ ಮಾಡೋದು ಸ್ವಲ್ಪ ತೊಂದ್ರೆ ಆಗ್ತಾ ಇದೆ.

ಈಗ ಇರೊ ವಿಂಡೋಸ್ ಎಕ್ಸ್‌ಪಿಯಲ್ಲಿ ನಾಲ್ಕು ಪಾರ್ಟಿಶನ್‌ಗಳಿವೆ.

C: (40GB)

D: (30GB)

E: (60GB)

F: (30GB)

ನನಗೆ E ಡ್ರೈವ್‌ನಲ್ಲಿ, ಉಬುಂಟು ೯.೦೪ ಇನ್ಸ್ಟಾಲ್ ಮಾಡ್ಬೇಕು. ಆದರೆ ಆ option ೯.೦೪ರಲ್ಲಿ ಇಲ್ಲಾ :-(

ಆದ್ರೆ ೮.೦೪ರಲ್ಲಿ ಇತ್ತು.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿಧಿ's picture
Submitted by ಶ್ರೀನಿಧಿ on June 15, 2009 – 3:37pm.

ಶ್ರೀನಿವಾಸರೆ,

೮.೦೪ನಲ್ಲೂ E Drive ಅಂತ ಇರ್ತಿರಲಿಲ್ಲ!!

ನೀವು Installation ಶುರು ಮಾಡಿದ ಮೇಲೆ System partitioning ಬಂದಾಗ Manual Partition ಆರಿಸಿಕೊಳ್ಳಿ.

ಅಲ್ಲಿ ನಿಮ್ಮ E Drive ನ Device (/dev/sda ಅಥವಾ /dev/sdb ಅಂತಿರುತ್ತದೆ) ಯಾವುದೋ ನೋಡಿಕೊಂಡು ಅಲ್ಲಿಗೆ ಇನ್ಸ್ಟಾಲ್ ಮಾಡಿಕೊಳ್ಳಿ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

nkumar's picture
Submitted by nkumar on June 15, 2009 – 2:30pm.

ನಿನ್ನೆ ನನ್ನ ಸಿಸ್ಟಮಿನಲ್ಲಿ ಉಬುಂಟು ೯.೦೪ ಕೂರಿತು. SCIM ಇನ್ನೂ ಟ್ರೈ ಮಾಡಿಲ್ಲ. ಬಹುಶಃ ಇನ್ನೆರಡು ದಿನದಲ್ಲಿ ಉಬುಂಟು ಹೋಗಿ ಫೆಡೋರಾ ೧೧ ಕೂರುತ್ತದೆ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

smurthygr's picture
Submitted by smurthygr on June 15, 2009 – 2:44pm.

E drive ಖಾಲಿ ಇದ್ದರೆ ಇನ್ಸ್ಟಾಲ್ ಮಾಡಲು ಸಾಧ್ಯವಾಗಬೇಕು. ಖಾಲಿ ಇಲ್ಲದಿದ್ದರೆ gpartedmagic ಮುಖಾಂತರ ಖಾಲಿ ಮಾಡಿಕೊಳ್ಳಲು ಸಾಧ್ಯ. ಉಬುಂಟುಗೆ ಸುಮಾರು 20 GB, swap ಗೆ ಸುಮಾರು 2GB (ಅಥವಾ ram ನ ಎರಡರಷ್ಡು) ಇದ್ದರೆ ಸಾಕು.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on June 15, 2009 – 3:01pm.

E drive ಖಾಲಿ ಇದೆ.

Step 4 of 7:

https://news.softpedia.com/images/extra/LINUX/large/ubuntu904installation-large_007a.jpg

(ಚಿತ್ರ ಕೃಪೆ: news.softpedia.com)

ನಾನು ಆಯ್ದುಕೊಂಡದ್ದು, Install them side by side.

ಈಗ ನನಗೆ E drive ಆಯ್ದುಕೊಳ್ಳಬೇಕಾಗಿದೆ. ಆಲ್ಲಿ ಆ ತರದ option ಇಲ್ಲ. (ಉಬುಂಟು ೮.೦೪ರಲ್ಲಿ ಇದ್ದ ಹಾಗೆ)

ಕೆಳಗಡೆ slider ಇದೆ. ಹೇಗೆ ಉಪಯೋಗಿಸುವುದು ಗೊತ್ತಿಲ್ಲ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

nkumar's picture
Submitted by nkumar on June 15, 2009 – 3:17pm.

ಹಾಗಾದರೆ ಖಾಲಿ ಡ್ರೈವನ್ನು ಡಿಲೀಟ್ ಮಾಡಿ ಇಲ್ಲವೇ ext3 ಗೆ ಫಾರ್ಮಾಟ್ ಮಾಡಿ. ಉಬುಂಟು ತಂತಾನೆ ಅಲ್ಲೇ ಸ್ಥಾಪಿಸಿಕೊಳ್ಳುತ್ತೆ. ಇಲ್ಲವೇ ಫೆಡೋರಾ ೧೧ ಪ್ರಯತ್ನಿಸಿ ನೋಡಿ. ಸ್ವಲ್ಪ ಪಾರ್ಟೀಶನ್ ಸುಲಭವಾಗಿದೆ. ವಿಂಡೊಸ್ ಪಾರ್ಟೀಶನ್ ಇರುವುದರಿಂದ ತೊಂದರೆ ಬರುತ್ತಿರಬಹುದು

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿಧಿ's picture
Submitted by ಶ್ರೀನಿಧಿ on June 15, 2009 – 3:41pm.

Specify partitions Manyally (Advanced) ಅನ್ನೋದನ್ನ ಆರಿಸಿಕೊಳ್ಳಿ.

ಆಮೇಲೆ ಬರುವ screenshot ಹಾಕುತ್ತೀರಾ? ಸಹಾಯ ಮಾಡಬಹುದು

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿಧಿ's picture
Submitted by ಶ್ರೀನಿಧಿ on June 15, 2009 – 3:40pm.

Specify partitions Manyally (Advanced) ಅನ್ನೋದನ್ನ ಆರಿಸಿಕೊಳ್ಳಿ.

ಆಮೇಲೆ ಬರುವ screenshot ಹಾಕುತ್ತೀರಾ? ಸಹಾಯ ಮಾಡಬಹುದು

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on June 15, 2009 – 3:59pm.

ಅದನ್ನೂ ಮಾಡಿ screenshot ಹಾಕ್ತಿನಿ. ಆದರೆ ಆ optionನಿಂದ ವಿಂಡೋಸ್ ಎಕ್ಸ್‌ಪಿ ಹೋಗುತ್ತೇನೋ?

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿಧಿ's picture
Submitted by ಶ್ರೀನಿಧಿ on June 15, 2009 – 4:06pm.

ಹೋಗೋಲ್ಲ. ಧೈರ್ಯ ಇರಲಿ :P

ಅಲ್ಲಿಗೆ ಬಂದು Screenshot ಹಾಕಿ. ಮುಂದೇನು ಮಾಡೋದು ಅಂತ ಆಮೇಲೆ ನೋಡುವ

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on June 16, 2009 – 12:53pm.

ಥ್ಯಾಂಕ್ಸ್, ಇದು ಕೆಲ್ಸ ಮಾಡ್ತು (it worked!).

Specify partitions Manyally (Advanced) ಅನ್ನೋದನ್ನು ಆರಿಸಿಕೊಂಡೆ. ಅದರಲ್ಲಿ ಎಲ್ಲಾ ಡ್ರೈವ್‌ಗಳನ್ನು ತೋರಿಸಿತು (೮.೦೪ರ ಹಾಗೆ). ಬೇಕಾಗಿದ್ದನ್ನು ಆರಿಸಿಕೊಂಡು ಇನ್ಸ್ಟಾಲ್ ಮಾಡ್ದೆ :-)

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

omshivaprakash's picture
Submitted by omshivaprakash on June 17, 2009 – 12:04am.

ಸಕತ್! ಇನ್ನು ಗೊತ್ತಾಯ್ತಲ್ಲ.. ಹೆದರ್ಬೇಡಿ.. ಸಲೀಸಾಗಿ ಗ್ನು/ಲಿನಕ್ಸ್ ಉಪಯೋಗಿಸಿ… ನೋಡಿ ಎಷ್ಟು ಜನ ಇದಾರೆ ನಿಮಗೆ ಸಹಾಯ ಮಾಡ್ಲಿಕ್ಕೆ.. ನಿಮ್ಮ ಸ್ನೇಹಿತರಿಗೂ ಇದರ ಕಂಪನ್ನು ಹರಡಿ.

ನಿಮ್ಮ

ಶಿವು

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on June 17, 2009 – 10:53am.

ಖಂಡಿತವಾಗಿ, ಶಿವು. ವಿಂಡೋಸ್ ಎಕ್ಸ್‌ಪಿನಿಂದ ಒಂದೊಂದೆ application ತೆಗೆದು, alternativeನ್ನು ಉಬುಂಟುನಲ್ಲಿ ಹಾಕ್ಬೇಕು!

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿಧಿ's picture
Submitted by ಶ್ರೀನಿಧಿ on June 17, 2009 – 4:56pm.

ಇಲ್ಲಿ ನೋಡಿ ಇಲ್ಲಿ ಹೇಳಿರುವ ಎಲ್ಲಾ ಅಪ್ಲಿಕೇಶನ್ಗಳೂ ಉಬುಂಟುನಲ್ಲಿ synaptic ಇಂದ ಹಾಕಿಕೊಳ್ಳಬಹುದು

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

anil.ramesh's picture
Submitted by anil.ramesh on June 17, 2009 – 5:03pm.

ಅರೆರೆ,

AutoCAD ಕೂಡ ಇದೆ. ಅದೇ ನನ್ನ ಜೀವ.

ಡೌನ್ ಲೋಡ್ ಮಾಡಿಕೊಳ್ತೀನಿ.

ಉಬುಂಟುವಿನಲ್ಲಿ AutoCAD ಕೆಲಸ ಮಾಡುತ್ತದೆ ಎಂದು ತಿಳಿದು ತುಂಬಾ ಸಂತೋಷವಾಯ್ತು.

ಕೊಂಡಿಗೆ ಥ್ಯಾಂಕ್ಸ್ ಶ್ರೀನಿಧಿ.

-ಅನಿಲ್

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on February 4, 2010 – 9:46am.

ಉಬುಂಟು ೯.೦೪ರಿಂದ ೯.೧೦ ಗೆ ಅಪ್‌ಡೇಟ್ ಮಾಡೋಕೆ ಪ್ರಯತ್ನಿಸ್ತಿದ್ದಿನಿ.

https://www.ubuntu.co… – ಇಲ್ಲಿಂದ ಉಬುಂಟು ೯.೧೦ iso ಫೈಲ್‌ನ ಇಳಿಸಿಕೊಂಡೆ.

https://help.ubuntu…. – ಇದರಲ್ಲಿ ತಿಳಿಸಿದ ಹಾಗೆ ಸಿಡಿಗೆ ಹಾಕಿಕೊಂಡೆ.

https://www.ubuntu.co… – ಇಲ್ಲಿರೋ ಹಾಗೆ ಅಪ್‌ಡೇಟ್ ಮಾಡೊಕೆ ಪ್ರಯತ್ನಿಸಿದೆ.

dialog box ಏನೋ ಬರ್ತಾ ಇದೆ. ಆದರೆ ಕೆಳಗೆ ತೋರಿಸಿರೋ dialog boxನ ಹಾಗೆ “Run upgrade” ಗುಂಡಿ ಬರ್ತಾ ಇಲ್ಲ :-(

ಉಬುಂಟು ಅಪ್‌ಗ್ರೇಡ್

(ಚಿತ್ರ ಸಹಾಯ: https://help.ubuntu.com)

ಏನು ಮಾಡೋದು?

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

omshivaprakash's picture
Submitted by omshivaprakash on February 6, 2010 – 11:42am.

ನೀವು ಪ್ರಯತ್ನಿಸಿದ ಕಮ್ಯಾಂಡ್ ಅನ್ನು sudo ಉಪಯ್ಯೋಗಿಸಿ ಬಳಸಿ ನೋಡಿ. ನನಗೆ ಈ ತೊಂದರೆ ಹಿಂದೆ ಕಂಡಿದ್ದಿಲ್ಲ.. ಬೇರೇನಾದರೂ ಉಪಾಯ ಹೊಳೆದರೆ ತಿಳಿಸುತ್ತೇನೆ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on February 18, 2010 – 2:08pm.

sudo ಬಳಸಿದೆ. ಆದ್ರೂ ಬರ್ತಾ ಇಲ್ಲ.

ನೆಟ್‌ನಿಂದ ನೇರವಾಗಿ ಅಪ್‌ಡೇಟ್ ಮಾಡ್ತಿನಿ.

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

smurthygr's picture
Submitted by smurthygr on February 19, 2010 – 4:54pm.

ಬಹುಶಃ ಮಾಮೂಲು ಸಿಡಿ ಯಿಂದ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ. ಸಿಡಿ ಬಳಸಬೇಕಾದರೆ ’alternate’ ಸಿಡಿ ಅಂತ ಬೇರೆ ಒಂದು ಆವೃತ್ತಿ ಬಳಸಬೇಕು ಅಂತ ಎಲ್ಲೋ ಓದಿದ ನೆನಪು. ಇದನ್ನೇ ಓಂ ಶಿವಪ್ರಕಾಶ್ ಅವರೂ ಹೇಳಿದ್ದಾರೆ, ಇಲ್ಲಿ ನೋಡಿ:

https://sampada.net/b…

<

* ಬದಲಿ ಇನ್ಸ್ಟಾಲೇಷನ್ ಸಿ.ಡಿ ಡೌನ್ಲೋಡ್ ಮಾಡಿಕೊಳ್ಳಿ

* ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಅನ್ನು ಸಿ.ಡಿಗೆ ಬರೆದು ಕೊಂಡ ನಂತರ ಅದನ್ನು ಅಪ್ಗ್ರೇಡ್ ಮಾಡಬೇಕಿರುವ ಕಂಪ್ಯೂಟರ್ ನ ಸಿ.ಡಿ ರೊಮ್ ಗೆ ಹಾಕಿ.

o ಅಪ್ಗ್ರೇಡ್ ಮಾಡುವ ಕಂಪ್ಯೂಟರ್ ನಲ್ಲೇ ಡೌನ್ಲೋಡ್ ಮಾಡಿಕೊಂಡ ಐ.ಎಸ್.ಓ ಫೈಲ್ ಇದ್ದರೆ, ಕೆಳಗಿನ ಕಮ್ಯಾಂಡ್ ಬಳಸಿ ಉಬುಂಟು ಅಪ್ಗ್ರೇಡ್ ಮಾಡಿಕೊಳ್ಳ ಬಹುದಾದ್ದರಿಂದ ನೀವು ಒಂದು ಸಿ.ಡಿ ಕೂಡ ಉಳಿಸಬಹುದು:

sudo mount -o loop ~/Desktop/ubuntu-9.10-alternate-i386.iso /media/cdrom0>>

(ubuntu-9.10-alternate-i386.iso ಇದನ್ನು ಗಮನಿಸಿ)

ಅಂತರ್ಜಾಲದಿಂದ ನೇರವಾಗಿ ಅಪ್‌ಗ್ರೇಡ್ ಮಾಡುವ ನಿಮ್ಮ ಯತ್ನ ಸಫಲವಾಗಿರಬಹುದು ಅಂದುಕೊಂಡಿದ್ದೇನೆ – ದಯವಿಟ್ಟು ತಿಳಿಸಿ..

ಉ: ಲಿನಕ್ಸಾಯಣ – ೬೦ – ಉಬುಂಟು ಆವೃತ್ತಿ ಅಪ್ಡೇಟ್ ಮಾಡೋದ್ ಹ್ಯಾಗೆ?

ಶ್ರೀನಿವಾಸ ವೀ. ಬ೦ಗೋಡಿ's picture
Submitted by ಶ್ರೀನಿವಾಸ ವೀ. ಬ೦ಗೋಡಿ on February 19, 2010 – 7:21pm.

ಧನ್ಯವಾದ smurthygr. ನಾನು ಮಾಮೂಲು ಸಿಡಿಯಿಂದ ಪ್ರಯತ್ನಿಸ್ತಾ ಇದ್ದೆ.

ಇನ್ನೊಂದು ಹೇಳೋಕೆ ಮರೆತಿದ್ದೆ. ನಾನು ಉಬುಂಟುನಲ್ಲಿ KDE ಇನ್‌ಸ್ಟಾಲ್ ಮಾಡಿದ್ದಿನಿ. ಈಗ ಉಬುಂಟು ಅಪ್‌ಗ್ರೇಡ್ ಮಾಡ್ಬೇಕೋ? ಕುಬುಂಟು ಅಪ್‌ಗ್ರೇಡ್ ಮಾಡ್ಬೇಕೋ?

ಇತ್ತೀಚಿನ ಪ್ರತಿಕ್ರಿಯೆಗಳು

ಈಗಿನಂತೆ 4 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This