ಉಬುಂಟು ೯.೦೪ ನಲ್ಲಿ ಕನ್ನಡ -ಭಾಗ ೧

ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ ಬೇಕು. ಇನ್ಸ್ಟಾಲ್ ಮಾಡ್ಕೊಂಡ್ರೆ ಸಂಪದ ಹ್ಯಾಗೆ ಅದರಲ್ಲಿ ಓದೋದು, ಕಾಮೆಂಟ್ ಹಾಕೋದ್ ಹ್ಯಾಗೆ ಅನ್ನೋದನ್ನ ತಿಳಿದುಕೊಂಡಿರಬೇಕಲ್ವಾ? ಅದಕ್ಕೇ ಈ ಲೇಖನ ಸಂಪದದಲ್ಲಿರಲಿ ಅಂತ ಫೋಟೋಗಳ ಜೊತೆ ಬರೀತಿದೀನಿ. ಪ್ರಶ್ನೆ ಇದ್ರೆ, ಮರೆಯದೆ ಕೇಳ್ತೀರಲ್ವಾ? (ನಾಚಿಕೊಳ್ಬೇಡಿ ಪ್ಲೀಸ್!)

ಉಬುಂಟು ೯.೦೪-೧

ಉಬುಂಟು ಇನ್ಸ್ಟಾಲ್ ಮಾಡಿ ಕೊಂಡ ನಂತರ ಮೊದಲು ಕಾಣೋ ಚಿತ್ರ ಲಾಗಿನ್ ಸ್ಕ್ರೀನ್. ಲಾಗಿನ್ ಆಗ್ತಿದ್ದ ಹಾಗೆ ಕಾಣುತ್ತೆ ನೀಟಾಗಿ ಕಾಣುವ ಡೆಸ್ಕ್ ಟಾಪ್. ಕೆಳಗಿನ ಚಿತ್ರ ನೋಡಿ.

ಉಬುಂಟು ೯.೦೪-೨

ಡೆಸ್ಕ್ಟಾಪ್ ಮೇಲಿನ ಮೊದಲ್ ಬಾರ್ ನಲ್ಲಿ ಕಾಣುವ ಫೈರ್ ಫಾಕ್ಸ್ ಐಕಾನ್ ನೋಡಿ. ಮೊದಲನೆಯದು. ನಿಮ್ಮ ಕಂಪ್ಯೂಟರ್ ಇಂಟರ್ನೆಟ್ಗೆ ಕನೆಕ್ಟ್ ಆಗಿದ್ರೆ (ಅಲ್ಲೇ ಕಾಣುವ ಕಂಪ್ಯೂಟರ್ ಐಕಾನ್ ಹೇಳತ್ತೆ ನಾನು ಸಧ್ಯಕ್ಕೆ ನೆಟ್ವರ್ಕ್ ನಲ್ಲಿದ್ದೇನೆ ಅಂತ) ಬ್ರೌಸರ್ನಲ್ಲಿ (firefox) ಸಂಪದ ಬ್ರೌಸ್ ಮಾಡಿ.

ಉಬುಂಟು ೯.೦೪-೩

ಅಯ್ಯೋ! ಏನಿದು ಎಲ್ಲಾ ಗಜಿಬಿಜಿ ಆಗಿ ಬರ್ತಿದೆ. ಯಾಕೆ ಹೀಗೆ?  ಯೋಚನೆ ಮಾಡ್ಬೇಡಿ. ಅದು ಒಂದು ಫಾಂಟ್ ಪ್ರಾಬ್ಲಮ್. ಸರಿಯಾದ ಫಾಂಟ್ ಹಾಕಿಕೊಂಡ್ರೆ ಸರಿ ಹೋಗತ್ತೆ.  System ಮೆನುಗೆ ಹೋಗಿ ಮುಂದಿನ ಚಿತ್ರದಲ್ಲಿ ತೋರಿಸಿರುವ ಹಾಗೆ.

ಉಬುಂಟು ೯.೦೪-೪

ಅಲ್ಲಿ Administration ನಲ್ಲಿ Language Support ಸೆಲೆಕ್ಟ್ ಮಾಡಿಕೊಳ್ಳಿ. ಮುಂಬರುವ ವಿಂಡೋದಲ್ಲಿ ನಾವು ಎರಡು ಕೆಲಸ ಮಾಡಬೇಕು. ಮೊದಲನೆಯದು ಫಾಂಟ್ ಇನ್ಸ್ಟಾಲ್ ಮಾಡಿಕೊಂಡು ಕನ್ನಡ ಓದುವಂತಾಗಲು, ಮತ್ತೊಂದು ಕನ್ನಡ ಟೈಪಿಸಲು ಬರಹ IME ತರಹದ ಟೂಲ್ ಇನ್ಸ್ಟಾಲ್ ಮಾಡ್ಕೊಳ್ಳೋದು.

ಉಬುಂಟು ೯.೦೪-೫

ಇಲ್ಲಿ ಮೊದಲು “Use input method enginees (IME) to enter complex characters” ಅನ್ನೋ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ನಂತರ install/remove Lanaguages ಬಟನ್ ಮೇಲೆ ಕ್ಲಿಕ್ ಮಾಡಿ.

ಉಬುಂಟು ೯.೦೪-೬

ಈ ವಿಂಡೋದಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಂಡು Apply Changes ಪ್ರೆಸ್ ಮಾಡಿ.

ಉಬುಂಟು ೯.೦೪-೭

ಮಾಡಿ ಆದ್ಮೇಲೆ ಸ್ವಲ್ಪ ನೀವು ಕೈಕಟ್ಟಿ ಕುಳಿತರೆ ಕನ್ನಡ ಫಾಂಟ್ಸ್ ಇತ್ಯಾದಿಗಳು ಇನ್ಸ್ಟಾಲ್ ಆಗೋದನ್ನು ನೋಡಬಹುದು. ಏನಾಗ್ತಿದೆ ಅಂತ ಗೊತ್ತಾಗ್ತಿಲ್ವಾ? ಅಲ್ಲೇ Details ಅಂತಿದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ.

ಉಬುಂಟು ೯.೦೪-೮

ಈಗ ಗೊತ್ತಾಯ್ತಾ? ttf-kannada-fonts, scim ಇತ್ಯಾದಿಗಳು ಇನ್ಸ್ಟಾಲ್ ಆಗ್ತಿವೆ.

ಉಬುಂಟು ೯.೦೪-೯

ಅಬ್ಬಾ ಕಡೆಗೂ ಮುಗೀತು. ಸೂಪರ್! ಡೆಸ್ಕ್ ಟಾಪ್ ನಲ್ಲಿ ಏನು ಚೇಂಗ್ ಆಗಿದೆ ನೋಡ್ಬೇಕಾ? ಅದಕ್ಕಿಂತ ಮೊದಲು ಒಂದು ಕೆಲ್ಸ ಮಾಡಿ, ಲಾಗ್ ಔಟ್ ಆಗಿ ಮತ್ತೆ ಲಾಗಿನ್ ಆಗಿ. ಆದ ತಕ್ಷಣ, ಕೆಳಗಿನ ಚಿತ್ರದಲ್ಲಿ ಮೌಸ್ ಪಾಯಿಂಟರ್ ತೋರಿಸುತ್ತಿರೋ ಐಕಾನ್ ನೋಡಿ. ಅದೇನು ಗೊತ್ತಾ? ಹೌದು ಕೀಲಿಮಣೆ ತರ ಕಾಣುತ್ತೆ ಅದು.

ಉಬುಂಟು ೯.೦೪-೧೦

ಬರಹ IME ಯ “ಕ” ಅನ್ನೋ ಐಕಾನ್ ನಿಮ್ಮ ವಿಂಡೋಸ್  ಸಿಸ್ಟಂ ನ ಟಾಕ್ಸ್ ಬಾರ್ ನಲ್ಲಿ ಕಾಣುತ್ತಲ್ವಾ, ಅದೇ ತರ ಲಿನಕ್ಸ್ ನಲ್ಲಿ SCIM ಅನ್ನೋ ಟೂಲ್. ಇದರ ಉಪಯೋಗದಿಂದಲೇ ನಾನು ಈ ಲೇಖನವನ್ನು ಕೂಡ ನನ್ನ ಉಬುಂಟುವಿನ ಮುಖೇನ ಬರೀತಿರೋದು.  ಅದರ ಮೇಲೆ left – right ಕ್ಲಿಕ್ ಎಲ್ಲಾ ಮಾಡಿ ಏನಿದೆ ಅಂತ ಒಮ್ಮೆ ನೋಡಿ. ಅದರ ಬಗ್ಗೆ ಮತ್ತೆ ಹೇಳ್ತೇನೆ. ಈಗ ಸಂಪದ ಸರಿಯಾಗಿ ಕಾಣುತ್ತಾ ನೋಡೋಣ್ವಾ? ಸರಿ ಹಾಗಿದ್ರೆ ಫೈರ್ ಫಾಕ್ಸ್ ಐಕಾನ್ ಕ್ಲಿಕ್ ಮಾಡಿ ಸಂಪದ ಬ್ರೌಸ್ ಮಾಡೇ ಬಿಡಿ.

ಉಬುಂಟು ೯.೦೪-೧೧

ಸಕತ್ ಅಲ್ವಾ? ಸಂಪದ ಸುಂದರವಾಗಿ ಕಾಣ್ತಿದೆ.  ಸುಲಭ ಅಲ್ವಾ? ಹಾಗಿದ್ರೆ ಈ ಲೇಖನಕ್ಕೆ ಕಾಮೆಂಟ್ ಹಾಕ್ತೀರಿ ಅಂದುಕೊಳ್ಳೂತ್ತೀನಿ. ಹೇಗೆ ಅಂದ್ರಾ? ಸರಿ ಅದನ್ನೂ ಹೇಳಿ ಬಿಡ್ತೇನೆ. SCIM ಐಕಾನ್ ಹೇಳಿದ್ದೆ ಅಲ್ವಾ?  ಅದರ ಮೇಲೆ ಕ್ಲಿಕ್ ಮಾಡಿ ಕನ್ನಡದ ಕಡೆಗೆ ನಿಮ್ಮ ಮೌಸ್ ಪಾಯಿಂಟರ್ ಮೂವ್ ಮಾಡಿ. inscript  ಮತ್ತೆ KGP ಕಾಣ್ತಿದಿಯಾ? ನಿಮಗೆ ಯಾವ ಕೀಬೋರ್ಡ್ ಲೇಔಟ್ ಬೇಕೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಉಬುಂಟು ೯.೦೪-೧೨

ನಾನು KGP ಲೇಔಟ್ ಸೆಲೆಕ್ಟ್ ಮಾಡ್ಕೊಳ್ತೀನಿ ಸಧ್ಯಕ್ಕೆ.    ಆಮೇಲೆ Applications -> Accessories -> Text Editor ಸೆಲೆಕ್ಟ್ ಮಾಡಿಕೊಳ್ಳಿ ಸ್ವಲ್ಪ ಟೈಪ್ ಮಾಡಿ ನೋಡೇ ಬಿಡೋಣ.

ಉಬುಂಟು ೯.೦೪-೧೩

ಹಾ! ಅಲ್ನೋಡಿ. ಅ, ಆ, ಇ, ಈ….

ಮೇಲೆ ಕಾಣ್ತಿರೋ SCIM ನ ವಿಂಡೋವನ್ನು+ಕೀ ಬಳಕೆ (shortcut key) ಬಳಸುವುದರ ಮೂಲಕವೂ ಪಡೆಯಬಹುದು. ಇದನ್ನೇ ಸಂಪದದಲ್ಲಿ ಹೊಸ ಲೇಖನ ಬರೀಲಿಕ್ಕೋ, ಕಾಮೆಂಟ್ ಹಾಕ್ಲಿಕ್ಕೋ, ಇಲ್ಲಾ ನಿಮ್ಮ ಗೆಳೆಯ/ಗೆಳತಿಯ ಜೊತೆ ಚಾಟ್ ಮಾಡಲೋ ಬಳಸಬಹುದು. ಹಾದು, ಕನ್ನಡದಲ್ಲೇ ಚಾಟ್ ಮಾಡಿ.

ಇನ್ನೂ ಸ್ವಲ್ಪ ಪ್ರಶ್ನೆಗಳಿರಬೇಕಲ್ವಾ? ಎರಡನೆ ಭಾಗದಲ್ಲಿ ಬರಹದಲ್ಲಿ ಟೈಪ್ ಮಾಡೋತರ ಇಲ್ಲಿ ಮಾಡೋದ್ ಹ್ಯಾಗೆ, ಉಬುಂಟುವಿನಲ್ಲಿ ಎಲ್ಲವನ್ನೂ ಕನ್ನಡಮಯ ಮಾಡೋದಕ್ಕೆ ಸಾಧ್ಯವೇ ಅಂತ ತಿಳಿದುಕೊಳ್ಳೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This