ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೨

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ.

ಬರಹ ಕೀ ಬೋರ್ಡ್ ಲೇಔಟ್ ಬೇಕು ಅಂತಂದ್ರೆ scim-m17n ಅನ್ನೋ ಒಂದು ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಬೇಕು. ಅದಕ್ಕೆ ಮೊದಲು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಓಪನ್ ಮಾಡಿ.

ನಂತರ  m17n ಅಂತ ಸರ್ಚ್ ಮಾಡಿ. ಕೆಳಗೆ  Quick Search ನಲ್ಲಿ ಈ ಪದವನ್ನು ಹಾಕಿದ ತಕ್ಷಣ, ಇದಕ್ಕೆ ಸಂಬಂಧಪಟ್ಟ ಎಲ್ಲ ತಂತ್ರಾಂಶಗಳು ನಿಮ್ಮ ಮುಂದಿರುತ್ತವೆ.

ಆದರ ಮೇಲೆ ಕ್ಲಿಕ್ ಮಾಡಿ “Mark for Installation” ಮಾಡಿದ ನಂತರ Apply ಬಟನ್ ಪ್ರೆಸ್ ಮಾಡಿ.

ನನಗೆ ಇನ್ನೊಂದಿಷ್ಟು ತಂತ್ರಾಂಶಗಳು ಇದರೊಂದಿಗೆ ಬೇಕು ಅಂತ ಪ್ಯಾಕೇಜ್ ಮ್ಯಾನೇಜರ್ ಹಠ ಮಾಡೋದನ್ನ ನೀವು ಕಾಣಬಹುದು. Ok ಅಂತೇಳಿ.

ನಂತರ ಹೊಸದಾಗಿ ಏನನ್ನು ನಿಮ್ಮ ಸಿಸ್ಟಂಗೆ ಇನ್ಸ್ಟಾಲ್ ಮಾಡುತ್ತೆ, ಯಾವ ತಂತ್ರಾಂಶವನ್ನು ಕಿತ್ತು ಹಾಕುತ್ತೆ ಅಂತ ನಿಮಗೆ ಹೇಳುತ್ತೆ. Apply ಪ್ರೆಸ್ ಮಾಡಿ.

ಪ್ಯಾಕೆಜ್ಗಳು ಇನ್ಸ್ಟಾಲ್ ಆಗ್ಲಿಕ್ಕೆ ಶುರು ಮಾಡುತ್ತವೆ.

ಸ್ವಲ್ಪ ಹೊತ್ತಿನ ನಂತರ ಅದೆಲ್ಲ ಮುಗಿಯುತ್ತೆ. ಕೆಳಗಿನ ಸಂದೇಶ ಕಂಡ ನಂತರ Close ಪ್ರೆಸ್ ಮಾಡಿ, ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆಗಿ.

ಈಗ ಕನ್ನಡ ಟೈಪ್ ಮಾಡ್ಲಿಕ್ಕೆ ಪ್ರಯತ್ನ ಪಟ್ಟು ನೋಡಿ. SCIM ನಲ್ಲಿ ಮೊದಲು ನಿಮಗೆ Inscript ಮತ್ತು KGP  ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಈಗ ಅದರ ಜೊತೆ kn-inscript ಅನ್ನೊ ಹೊಸ ಕೀ-ಬೋರ್ಡ್ ಲೇಔಟ್ ಕಾಣಿಸುತ್ತೆ. ಅದನ್ನ ಉಪಯೋಗಿಸಿ ಬರಹ IME ನಲ್ಲಿ ಟೈಪ್ ಮಾಡಿದ ಹಾಗೇ ಟೈಪ್ ಮಾಡಬಹುದು.

ಇಲ್ನೋಡಿ, ನಾನು ಟೈಪ್ ಮಾಡಿದ ಮೊದಲ ಸಾಲು.

ಮುಂದಿನ ಭಾಗದಲ್ಲಿ, ನಿಮ್ಮ ಡೆಸ್ಕ್ಟಾಪ್ ಮೆನು, ಲಾಗಿನ್ ಸ್ಕ್ರೀನ್ ಇತ್ಯಾದಿಗಳನ್ನು ಕನ್ನಡದಲ್ಲಿ ಹೇಗೆ ನೋಡೋದು ಅನ್ನೊದನ್ನ ತಿಳಿದುಕೊಳ್ಳೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This