ಕನ್ನಡ ಓದು/ಬರೆ

ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ.

ಕನ್ನಡದಲ್ಲಿ ಟೈಪಿಸಲು ಈಗ ಸ್ಕಿಮ್ (SCIM) ಬದಲಿಗೆ ಐ-ಬಸ್ (ibus) ಎಂಬ ತಂತ್ರಾಂಶ ಲಭ್ಯವಿದ್ದು ಬಹಳ ಸಕ್ಷಮವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಮ್ಮ ಉಬುಂಟುವಿನಲ್ಲಿ ಸ್ಥಾಪಿಸಿಕೊಳ್ಳುವುದು ಸುಲಭ ಸಾಧ್ಯ. ಕೆಳಗೆ ಕೊಟ್ಟಿರುವ ಸಲಹೆಗಳನ್ನು ಅಂತೆಯೇ ಬಳಸಿ.

೧) ಭಾಷೆಯ ಆಯ್ಕೆ ಇತ್ಯಾದಿಗಳಿಗೆ ಸಹಕರಿಸುವ ತಂತ್ರಾಂಶವನ್ನು ಈ ಮೆನುವಿನಿಂದ ಪಡೆಯಬಹುದು  -> System -> Administration -> Language Support

ಅದು ಈ ಕೆಳಕಂಡಂತೆ ಕಾಣುತ್ತದೆ.

೨) ಇಲ್ಲಿ Install / Remove Languages ಕ್ಲಿಕ್ ಮಾಡಿ, ಮುಂದಿನ ವಿಂಡೋದಲ್ಲಿ ಕನ್ನಡ ಆಯ್ಕೆ ಮಾಡಿ, ಅಪ್ಲೈ ಕ್ಲಿಕ್ ಮಾಡಿ.

೩) ನಂತರ,  ಮೊದಲನೆ ವಿಂಡೋದಲ್ಲಿ “Keyboard Input Method System” ನಲ್ಲಿ “ibus” ಆಯ್ಕೆ ಮಾಡಿಕೊಳ್ಳಿ.

೪) ಇದಾದ ನಂತರ, ಬರಹದಂತೆ ಟೈಪಿಸಲು ನಿಮಗೆ scim-m17n ತಂತ್ರಾಂಶ ಬೇಕಾಗುತ್ತದೆ. ಇದನ್ನು ಸಿನಾಪ್ಟಿಕ್ ನಿಂದ ಪಡೆದು ಕೊಳ್ಳಬಹುದು.

System -> Administration -> Synaptic Package Manager

ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನಲ್ಲಿ scim-m17n ಹುಡುಕಿ ಇನ್ಸ್ಟಾಲ್ ಮಾಡೊಕೊಂಡರಾಯ್ತು.

(ತಂತ್ರಾಂಶಗಳನ್ನು ಹೇಗೆ ಇನ್ಸ್ಟಾಲ್ ಮಾಡಿಕೊಳ್ಳುವುದು ಎಂಬುದರ ಬಗೆಗಿನ ಈ ಹಿಂದಿನ ಲೇಖನ ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ)

೫) ಈಗ ಐ-ಬಸ್ ನಲ್ಲಿ ಕನ್ನಡ ಟೈಪ್ ಮಾಡಲು ಬೇಕಿರುವ ಕೀ-ಬೋರ್ಡ್ ಮಣೆಯನ್ನು ಅಳವಿಸುವುದು ಕೊನೆಯ ಕೆಲಸ.

ಮೆನು – System -> Preferences -> IBus Preferences  ಬಳಸಿ

೬) ಈಗ Input Method ಟ್ಯಾಬ್ ನಲ್ಲಿ “Select an Input Method” ಬಳಸಿ  Kannada itrans (m17n) ಆಯ್ದು ಅದನ್ನು ಆಡ್ ಮಾಡಿ. ಕೆಳಗಿನ ಚಿತ್ರದಲ್ಲಿ ಅದನ್ನು ತೋರಿಸಲಾಗಿದೆ.

ಈಗ ಲಾಗ್-ಔಟ್ ಮಾಡಿ, ಮತ್ತೆ ಲಾಗಿನ್ ಆಗಿ. ಈಗ ನಿಮ್ಮ ಸ್ಕ್ರೀನ್ ನ ಮೇಲ್ಬಾಗದಲ್ಲಿ ಐ-ಬಸ್ ನ ಕೀಬೋರ್ಡ್ ಕಾಣಲು ಸಿಗುವುದು.

೭) ಬ್ರೌಸರ್, ಇ-ಮೈಲ್, ಜಿ-ಎಡಿಟ್ , ಓಪನ್ ಆಫೀಸ್ ಇತ್ಯಾದಿಗಳಲ್ಲಿ ನೀವೀಗ ಕನ್ನಡ ಟೈಪಿಸ ಬಹುದು.

ctrl+space

ಕ್ಲಿಕ್ಕಿಸಿ ಕನ್ನಡದಲ್ಲಿ ಟೈಪಿಸಲು ಶುರುಮಾಡಿ.

ಇನ್ನೂ ಸಂದೇಹವಿದೆಯೇ? ನಮಗೊಂದು ಸಂದೇಶ ರವಾನಿಸಿ.

No Responses to “ಕನ್ನಡ ಓದು/ಬರೆ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This