ಲಿನಕ್ಸಾಯಣ – ೧೬ – ಉಬುಂಟು ನನ್ನ ಭಾಷೆಯಲ್ಲಿ?

ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?

ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ ಮಾಡಿಕೊಳ್ಳಿ.

ಈಗ ಕನ್ನಡ ಭಾಷಾ ಬೆಂಬಲವನ್ನ ನೀವು ಪಡೆದು ಕೊಳ್ಳೋದಕ್ಕೆ “ಕನ್ನಡ” ವನ್ನ ಸೆಲೆಕ್ಟ್ ಮಾಡಿಕೊಳ್ಳಿ.

ನೀವು ಓಕೆ ಎಂದಾಕ್ಷಣ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಲಿಕ್ಕೆ ಉಬುಂಟು ಇನ್ಸ್ಟಾಲರ್ ಶುರುಮಾಡ್ತದೆ. ಹೊಸ ಲಿನಕ್ಸ್ ಇನ್ಸ್ಟಾಲೇಷನ್ ಆಗಿದ್ರೆ ಉಬುಂಟುವಿನ ಸಿ.ಡಿ ಯನ್ನ ಸಿ.ಡಿ ಡ್ರೈವ್ ನಲ್ಲಿಟ್ಟಿರಿ. ಇಲ್ಲ ಅಂದ್ರೆ, ನಿಮ್ಮ ಕಂಪ್ಯೂಟರ್ ಇಂಟರ್ನೆಟ್ಗೆ ಕನೆಕ್ಟ್ ಆಗಿರಬೇಕು.

ಸರಿ, ಇದು ಮುಗಿದ ನಂತರ ನಿಮ್ಮ ಕಂಪ್ಯೂಟರ್ ಅನ್ನ ಒಮ್ಮೆ ರಿಸ್ಟಾರ್ಟ್ ಮಾಡಿ. ಲಾಗಿನ್ ಸ್ಕ್ರೀನ್ ಬಂದಾಗ ಅದರಲ್ಲಿನ ಎಡ ಮೂಲೆಯಲ್ಲಿ “Options” ಕ್ಲಿಕ್ಕಿಸಿ “Select Language” ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಡೆಸ್ಕ್ಟಾಪ್ಗೆ ಉಪಯೋಗಿಸ ಬೇಕಿರುವ ಭಾಷೆಯನ್ನ ಆಯ್ಕೆಮಾಡಿಕೊಳ್ಳಲಿಕ್ಕೆ ಸಹಾಯ ಮಾಡುತ್ತದೆ. ಕನ್ನಡವನ್ನ ಇಲ್ಲಿ ಸೂಚಿಸಿದ ನಂತರ ನಿಮ್ಮ ಡೆಸ್ಕ್ಟಾಪ್ ಮಾತ್ರ ಮತ್ತೊಮ್ಮೆ ಪ್ರಾರಂಬವಾಗುತ್ತದೆ.

ಈಗ ನೋಡಿ, ಲಾಗಿನ್ ಸ್ಕ್ರೀನ್ ಕೂಡ ಕನ್ನಡದಲ್ಲಿ ಬರುತ್ತದೆ. ಮುಂದೆ, ಲಾಗಿನ್ ಆದ ನಂತರ ಗಣಕತೆರೆ ಅಂದ್ರೆ ಡೆಸ್ಕ್ಟಾಪ್ ನಲ್ಲಿನ ಮೆನು ಇತರೆ ಕನ್ನಡದಲ್ಲಿ ಮೂಡಿ ಬರ್ಲಿಕ್ಕೆ ಶುರುವಾಗ್ತದೆ. ಉಬುಂಟುವನ್ನ ಕನ್ನಡಕ್ಕೆ ಅನುವಾದ ಆಗಿರುವಷ್ಟು ಮಟ್ಟಿಗೆ ಕೆಲವೊಂದು ಸಲಹೆ ಸೂಚನೆಗಳು ಕೂಡ ಕನ್ನಡದಲ್ಲಿ ಬರ್ತವೆ. ಕೆಲ ತಂತ್ರಾಶಗಳು ಕೂಡ ತಮ್ಮ ಮೆನು ಇತ್ಯಾದಿಗಳನ್ನ ಕನ್ನಡದಲ್ಲಿ ಮೂಡಿಸ್ತಾವೆ. ಕೆಳಗಿನ ಚಿತ್ರ  ನೋಡಿ. ನನ್ನ ಡೆಸ್ಕ್ಟಾಪ್ ಕನ್ನಡದಲ್ಲಿ ಹ್ಯಾಗೆ ಕಾಣಿಸ್ತದೆ ಅಂತ. ನಮ್ಮ ಹಬ್ಬದ ವಾಲ್ಪೇಪರ್ ಕೂಡ ಹಾಕಿದ್ದೇನೆ :) ಹಬ್ಬದ ವಿಶೇಷ.

ನೀವೂ ಟ್ರೈ ಮಾಡ್ತೀರಾ ತಾನೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This