ಲಿನಕ್ಸಾಯಣ – ೨೦ – ನೆಟ್ವರ್ಕ್ ನಲ್ಲಿ ಇಣುಕಿ ನೋಡು

ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿರ ಬೇಕಲ್ವಾ?

ಹೌದು ಅದು ಸಾಧ್ಯವಿದೆ. ಲಿನಕ್ಸ್ ಮತ್ತು ವಿಂಡೋಸ್ ಬೇಧವಿಲ್ಲದೆ ಎರಡೂ ನೆಟ್ವರ್ಕ್ ನ ಕಂಪ್ಯೂಟರ್ಗಳನ್ನ, ಪ್ರಿಂಟರ್ಗಳನ್ನ ಲಿನಕ್ಸ್ ನಲ್ಲಿ ನೀವು ಆಕ್ಸೆಸ್ ಮಾಡ ಬಹುದು.

ಸಾಂಬಾ (samba)  ಎನ್ನೋ ತಂತ್ರಾಂಶ ಪ್ಯಾಕೇಜ್ ನಿಮ್ಮ ಲಿನಕ್ಸ್ ಅನ್ನ ವಿಂಡೋಸ್ ನೆಟ್ವರ್ಕ್ ನೊಡನೆ ಮಾತಾಡೋ ಹಾಗೆ ಮಾಡತ್ತೆ. ಏನಕ್ಕೆ ಕಾಯ್ತಿದ್ದೀರಿ, ನಿಮ್ಮ ಲಿನಕ್ಸ್ ನ ಎಕ್ಸ್ಪ್ಲೋರರ್ ನಲ್ಲಿ ನೆಟ್ವರ್ಕ್ ಮೇಲೆ ಕ್ಲಿಕ್ ಮಾಡಿ ನೋಡಿ.

ಕೆಳಗಿನ ಚಿತ್ರ ನನ್ನ ಕಾರ್ಯಾಲಯದ ಒಂದು ನೆಟ್ವರ್ಕ್ ನ ಸಿಸ್ಟಂಗಳನ್ನ ತೋರಿಸ್ತಿದೆ. ವಿಂಡೋಸ್ ಸಿಸ್ಟಂಗಳನ್ನೂ ನೀವು ನೋಡಬಹುದು.

(ಹಿರಿದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This