ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ

ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ?

ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ
ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್
ಸೈಟ್ಗಳು ಎಷ್ಟಿವೆ ಅಂತಂದ್ರೆ  ಎಲ್ಲರೂ ನೂರು ನೂರೈವತ್ತು ಕೊಂಡಿಗಳನ್ನ  ಬುಕ್
ಮಾರ್ಕನಲ್ಲಿ ಟ್ಟು ಕೊಂಡು ಪಿಳಿ ಪಿಳಿ ಕಣ್ಬಿಟ್ಟು ನೋಡ್ತಿರ್ತೀವಿ.ಇವುಗಳನ್ನ ನಿಜವಾಗಿ
ಮತ್ತೆ ತೆರೆದು ನೋಡುವುದು ಕನಸಿನಲ್ಲೇ ಮಾಡಬೇಕಾದ ಕಾರ್ಯ ಏಕೆಂದರೆ, ಯಾವ ವೆಬ್ ಸೈಟ್
ಅಪ್ಡೇಟ್ ಆಗಿದೆ , ಯಾವುದರಲ್ಲಿ ಹೊಸ ಬ್ಲಾಗ್  ಪೋಸ್ಟ ಹಾಕಿದಾರೆ ಅಂತ ನಮಗ್ಯಾರಾದ್ರೂ
ಅಪ್ಡೇಟ್ ಮಾಡಿದಾಗಲೇ ಗೊತ್ತಾಗೋದು,ಆಗಲೇ ನಾವು ಆ ವೆಬ್ ಸೈಟ್ ಮತ್ತೆ ನೋಡೋ ಗೋಜಿಗೆ
ಹೋಗೋದು. ಇಲ್ಲಾಂದ್ರೆ ಹೊಸ ತಾಣಗಳತ್ತ , ಚೆಂದವಾದ ಚಿತ್ರ ಪಟಗಳನ್ನ ಹೊತ್ತ ಪುಟಗಳತ್ತ
ನಮ್ಮ ಗಮನ ಹರಿಯೋದು ಮಾನವ ಸಹಜ ಗುಣತಾನೆ.

ಹೌದು, ಎಷ್ಟೋ ತಾಣಗಳು ಕೆಲವು ಸಲ ಹೇಳ ಹೆಸರಿಲ್ಲದಂತೆ ಕಾಣೆಯಾಗ್ತವೆ ಇಲ್ಲಾ ಹೊಸದೊಂದು
ವಿಷಯವನ್ನ ಹೊತ್ತು ಮರುಜನ್ಮ ಪಡೀತವೆ ಅಷ್ಟರಲ್ಲಿ ಮೇಲೆ ಹೇಳಿದ ಹಾಗೆ ನಮ್ಮ ಬುಕ್
ಮಾರ್ಕ ಬುಟ್ಟಿಯಲ್ಲಿ ಬೆಚ್ಚಗೆ ಹುದುಗಿ ಕೊಂಡಿರ್ತವೆ. ಇದನ್ನ ತಪ್ಪಿಸೋದ್ ಹ್ಯಾಗೆ?
ನಮ್ಮ ಗಮನ ಸೆಳೆದ, ದಿನವೂ ಒಮ್ಮೆ ಈ ಪುಟವನ್ನ ನೋಡಲೇ ಬೇಕೆಂದು ಕೊಂಡಿದ್ದ ಪುಟಗಳತ್ತ
ನಮಗೆ ಸಮಯ ಸಿಕ್ಕಾಗ ಕಣ್ಣಾಯಿಸಿ ಒಮ್ಮೆ ನೋಡೋದು ಹೇಗೆ? ಇದಕ್ಕೆಲ್ಲ ಉತ್ತರ  RSS Feed
Reader (ಆರೆಸ್ಸೆಸ್ ಫೀಡ್ ರೀಡರ್) ಉಪಯೋಗಿಸೋದು . ವಿ.ಸೂ:ರಾಷ್ಟೀಯ ಸ್ವಯಂ ಸೇವಕ
ಸಂಗಕ್ಕೂ ಇದಕ್ಕೂ ಎಳ್ಳಷ್ಟೂ ಸಂಬಂದವಿಲ್ಲ.

RSS (ರಿಯಲಿ ಸಿಂಪಲ್ ಸಿಂಡಿಕೇಷನ್ ) ಬ್ಲಾಗ್ ಗಳ, ವೆಬ್ ಸೈಟ್ ಪುಟಗಳ ಮಾಹಿತಿ
ಬದಲಾದಂತೆಲ್ಲ ಅದರ ತುಣುಕನ್ನ ಇಲ್ಲ ಬದಲಾದ ಭಾಗವನ್ನ ನಿಮ್ಮ ಮುಂದಿಡುವ ಕಾರ್ಯವನ್ನ
ಮಾಡುತ್ತದೆ.RSS ಫೀಡ್ ರೀಡರ್ ನಿಮ್ಮ ಕಂಪೂಟರಿನಲ್ಲಿ ಸ್ಥಾಪಿಸಿ ಕೊಂಡಿದ್ದರೆ
ಇಂಟರ್ನೆಟ್ ಲಭ್ಯವಿದ್ದಾಗ ಅದರಲ್ಲಿ ಸೇರಿಸಿದ ವೆಬ್ ಸೈಟ್ ಮತ್ತು ಬ್ಲಾಗುಗಳ
ಮಾಹಿತಿಯನ್ನ  RSS ಮೂಲಕ  ಸಂಗ್ರಹ ಮಾಡಿ ಕೊಳ್ತದೆ, ನೀವು ನಿಮಗಿಷ್ಟ ಬಂದಾಗ ಅದರೆಡೆ
ಗಮನ ನೀಡ ಬಹುದು. ಕೆಲ ವೆಬ್ ಸೈಟ್ ಗಳನ್ನ ನಾವು ದಿನ ನಿತ್ಯ ಓದದೆ  ಅದನ್ನ ಲೈಬ್ರರಿ
ಯಂತೆ ಉಪಯೋಗಿಸೋದಾದ್ರೆ ನೀವು ಫೀಡ್ ರೀಡರ್ನಲ್ಲಿ ಸಂಗ್ರಹಿಸಿಟ್ಟು ಕೊಂಡ ಮಾಹಿತಿಯನ್ನ
ಮುಂದೊಂದು ದಿನ ಸರ್ಚ್ ಮಾಡಬಹುದು ಇಂಟರ್ನೆಟ್ ಇಲ್ಲದಾಗ ಕೂಡ.

ಲೈಫ್ ರಿಯಾ ಇಂತದೇ ಒಂದು ಫೀಡ್ ರೀಡರ್. ಲಿನಕ್ಸ್ ನಲ್ಲಿ ಸಕತ್ತಾಗಿ ಕೆಲಸ ಮಾಡ್ತದೆ.
ಉಬುಂಟು ಹಾಕಿ ಕೊಂಡವರು ಸಿನಾಪ್ಟೆಕ್ ನಲ್ಲಿ ಇದನ್ನ ಹುಡುಕಿ ಇನ್ಸ್ಟಾಲ್
ಮಾಡಿಕೊಳ್ಳಬಹುದು. ಇಲ್ಲಾ, ಕೆಳಗಿನ ಸಾಲನ್ನ ನಿಮ್ಮ ಕನ್ಸೋಲಿನಲ್ಲಿ ಕೀಲಿಸಿ
(ಇಂಟರ್ನೆಟ್ ಕನೆಕ್ಷನ್ ಇರಬೇಕು).

sudo aptitude install liferea

ಹೇಗೆ ಸಂಪದವನ್ನ ಲೈಫ್ ರಿಯಾದಲ್ಲಿ ಹಾಕಿ ಕೊಳ್ಳೋದು ? ಅಥವಾ ಇತರೆ ಬ್ಲಾಗ್ ಗಳನ್ನ ಇದರಲ್ಲಿ ಹೇಗೆ ನೋಡೋದು ಅಂತೀರಾ?

ಕೆಳಗೆ ಕಾಣಿಸ್ತಿರೋ ಚಿತ್ರ ಯಾವುದೇ ವೆಬ್ ಸೈಟ್ ನಲ್ಲಿ RSS ಇರೋದನ್ನ ಸೂಚಿಸುತ್ತೆ.
ಸಂಪದದ ಎಲ್ಲ ಪುಟಗಳಲ್ಲೂ ಇದನ್ನ ನೋಡ ಬಹುದು. ಸಂಪದದಲ್ಲಿನ ನಿಮ್ಮ ಬ್ಲಾಗಿಗೆ ಕೂಡ
ಪ್ರತ್ಯೇಕವಾದ RSS ಕೊಂಡಿ ನೀಡಲಾಗಿದೆ. ಅದನ್ನೇ ನೀವು ನಿಮ್ಮ ಗೆಳೆಯರೊಂದಿಗೆ
ಹಂಚಿಕೊಳ್ಳಬಹುದು.

ಇದರೊಂದಿಗೆ, ನಿಮ್ಮ ಬ್ರೌಸರ್  ಕೂಡ RSS ಮಾಹಿತಿಯನ್ನ ಅಡ್ರೆಸ್ ಬಾರ್ ನಲ್ಲಿ ನೀಡತ್ತೆ. ಅದರ ಒಂದು ಉದಾಹರಣೆ ಇಲ್ಲಿದೆ.

ಈ ಕೊಂಡಿಯ ವಿಳಾಸವನ್ನ ನೀವು ಲೈಫ್ ರಿಯಾಗೆ ನೀಡಿದರಾಯಿತು. ಸಂಪದ ಮತ್ತು ಇತರೆ
ಬ್ಲಾಗುಗಳನ್ನ ನೀವು ಇದರಲ್ಲಿ ಓದ ಬಹುದು. (ಕಂಟೆಟ್ ನಿಮ್ಮ ಹಾರ್ಡಿಸ್ಕ್ ಗೆ ಸೇವ್
ಆಗುವುದರಿಂದ ಆಫ್ ಲೈನ್ ಕೂಡ ನೋಡಬಹುದು)

ನನ್ನ ಲೈಫ್ ರಿಯಾ ಇಲ್ಲಿದೆ ನೋಡಿ. ಸಂಪದದ ಪಾಡ್ಕಾಸ್ಟ್ ಅನ್ನ ಇಲ್ಲಿಂದಲೇ ಕೇಳೋದು,
ನೋಡೋದು. ಕಾಮೆಂಟ್ಗಳನ್ನ ಲೈಫ್ ರಿಯಾ ನಲ್ಲಿ ನೋಡೋದು ತುಂಬಾ ಸುಲಭ . ಬ್ಲಾಗ್ ಕಮೆಂಟ್
ನೋಡಿಕೊಳ್ಳುವವರಿಗೆ, ಕಂಟೆಟ್  ಮ್ಯಾನೇಜರಿಗೆ ಲೈಫ್ ರಿಯಾ ಪರ್ಸನಲ್ ಅಸಿಸ್ಟಂಟ್
ಇದ್ದಾಗೆ. ನಮ್ಮ ಹರಿಯನ್ನೇ ಕೇಳಿ ನೋಡಿ ;)

ಇದರ ಇನ್ನೊಂದು ಉಪಯೋಗ ನಿಮ್ಮ ಗಮನಕ್ಕೆ ಬಂತಾ?
ಬಂದಿರಲಿಕ್ಕಿಲ್ಲ ಬಹಳ ಜನರಿಗೆ. ನೀವು  ಪ್ರತಿಸಲ ಬ್ಲಾಗ್ ಅಥವಾ ವೆಬ್ ಸೈಟ್
ಸಂಪರ್ಕಿಸಿದಾಗ ಬೇಕು ಬೇಡವಾದ್ದೇಲ್ಲಾ ಅಂದರೆ ಜಾಹೀರಾತುಗಳೂ ನಿಮ್ಮ ಬ್ರೌಸರ್ ನಲ್ಲಿ
ಬಂತು ಕುಳಿತು ಬಿಡ್ತಾವೆ. ಅದಕ್ಕೂ ಬ್ಯಾಂಡ್ವಿಡ್ತ್ ಬೇಕಲ್ವಾ? ನಾವು ಎಲ್ಲದಕ್ಕೂ ಕಾಸು
ಖರ್ಚು ಮಾಡಬೇಕು. ;) ಆಫೀಸಿನಲ್ಲಿ ಬ್ರೌಸ್ ಮಾಡವರಿಗೆ ಈ ತೊಂದರೆ ಇಲ್ಲ ಬಿಡಿ. ಈ
ಬ್ಯಾಂಡ್ವಿಡ್ತ್ ಗೆ ನೀವು ತೆರುವ ಎಷ್ಟೋ  ಹಣವನ್ನ ನೀವು  ಇಲ್ಲಿ ಉಳಿಸ ಬಹುದು. ಮತ್ತೆ
ಇಂಟರ್ನೆಟ್ ಇಲ್ಲದಾಗ್ಲೂ ಕೂಡ ಕಂಟೆಂಟ್ ಉಪಯೋಗಕ್ಕೆ ಬರತ್ತೆ. ಪೇಜ್ಗಳನ್ನ ಕುದ್ದಾಗಿ
ಉಳಿಸಿಡಬೇಕಿಲ್ಲ.
ಹ! ಹೆಚ್.ಪಿ.ಎನ್ ಈ ಲೇಖನದ ಮೊದಲ ಆವೃತ್ತಿಯ ಕಾಮೆಂಟ್ ನಲ್ಲಿ ಹೇಳಿದ ಹಾಗೆ Dbus ಉಪಯೋಗಿಸಿ ನೇರವಾಗಿ RSS ಲಿಂಕ್ ಗಳನ್ನ ಲೈಫ್ ರಿಯಾಗೆ ಕಳಿಸಬಹುದು.

liferea-firefox

ಈಗ ಲಿನಕ್ಸಾಯಣವನ್ನ ನಿಮ್ಮ RSS ಬುಟ್ಟಿಗೆ ಹಾಕ್ಕೋ ಬೇಕೆ?

ಅದರ ಆರೆಸ್ಸೆಸ್ ಫೀಡ್ ನ ಲಿಂಕ್ ಇಲ್ಲಿದೆ ( https://sampada.net/taxonomy/term/1568/0/feed  )

ಆರೆಸ್ಸೆಸ್ ರೀಡರ್ ಗಳು ಬಹಳಷ್ಟಿವೆ. ಲೈಫ್ ರಿಯಾ ಒಮ್ಮೆ ಉಪಯೋಗಿಸಿ ನೋಡ್ರಲ್ಲ ಮತ್ತೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This