ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ

Stellarium – ಸ್ಟೆಲ್ಲೇರಿಯಂ  ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು, ಹೀಗೆ ಹತ್ತು ಹಲವಾರು ಖಗೋಳಶಾಸ್ತ್ರದ ವಿಷಯಗಳನ್ನ ಇದು ನಮಗೆ ತಿಳಿಸ್ತದೆ.

ಒಂದೆರಡು ಉದಾಹರಣೆಗಳನ್ನ ಕೊಡಲೆ?

ಶುಕ್ರ ಮತ್ತು ಗುರುವಿನ ಇಂಟರ್ವ್ಯೂ – ನೀವ್ ನೋಡಿದ್ರಾ? ಇದನ್ನ ನೋಡಿ ಇಲ್ಲಿ ಹೇಳಿರೋ ಗ್ರಹಗಳ ಮಿಲನವನ್ನ ಬಾನಂಗಳದಲ್ಲಿ ನೋಡ್ಲಿಕ್ಕಾಗ್ಲಿಲ್ವಲ್ಲ ಅಂತ ಕೂತಿರ್ಬೇಕಾದ್ರೆ, ಸ್ಟೆಲ್ಲೇರಿಯಂ ಯಾಕ್ ತಲೆ ಕೆಡಿಸ್ಕೊಳ್ತೀಯಂತ ಕೇಳ್ತು. ಇಲ್ಲಿದೆ ನೋಡಿ ಡಿಸೆಂಬರ್ ಒಂದರಂದು ಎಲ್ಲಿ ನಿಮಗೆ ಶುಕ್ರ ಮತ್ತು ಗುರು ಕಾಣಿಸ್ತಾರಂತ ರೋಡ್ ಮ್ಯಾಪು.

ಇದಿರಲಿ, ನಕ್ಷತ್ರ ಪುಂಜಗಳನ್ನ ತೋರಿಸ್ತಾ ಶಾರೂಕ್ ಖಾನ್ ಹಾಡೋ ಹಾಡು ಜ್ಞಾಪಕಕ್ಕೆ ಬಂತಾ? ಅದರಲ್ಲಿ ನೇಗಿಲನ್ನ ಮಕ್ಕಳಿಗೆ ಅವನು ತೋರಿಸ್ತಾನ ಅಲ್ವಾ? ಇರಲಿ, ಅದು ಕಪೋಲ ಕಲ್ಪಿತ ಇರಬಹುದು. ಆದ್ರೆ ನೀವು ನಿಜವಾದ ರಾಶಿ, ಮಂಡಲ ಅಥವಾ ಪುಂಜಗಳನ್ನ ಇತರರಿಗೆ ಕ್ಷಣಾರ್ಧದಲ್ಲಿ ತೋರಿಸಬಹುದು.

ಇಲ್ನೋಡಿ:

ನೀವೂ ಟ್ರೈ ಮಾಡ್ತೀರಾ? ಕೆಳಗೆ ಕೊಟ್ಟಿರೋ ಕಮ್ಯಾಂಡನ್ನ ನಿಮ್ಮ ಲಿನಕ್ಸ್ ಟರ್ಮಿನಲ್ ನಲ್ಲಿ ಟೈಪ್ ಮಾಡಿ ಸ್ಟೆಲ್ಲೇರಿಯಂ ಇನ್ಸ್ಟಾಲ್ ಮಾಡ್ಕೊಳ್ಳಿ

# sudo aptitude install stellarium stellarium-data

ಇದನ್ನ ನೀವು System -> Administration -> Synaptic Package Manager ನಿಂದ  ಕೂಡ ಇನ್ಸ್ಟಾಲ್ ಮಾಡ್ಕೋ ಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This