ಲಿನಕ್ಸಾಯಣ – ೪೬ – ಏನಿದು ಗ್ನೂ?

ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ.

ಗ್ನೂ ಕರ್ನೆಲ್ ಪರಿಪೂರ್ಣವಾಗಿರಲಿಲ್ಲವಾದ ಕಾರಣ ಅದನ್ನು ಲಿನಕ್ಸ್ ಕರ್ನೆಲ್ನೊಂದಿಗೆ ಬಳಸಲಾಯ್ತು. ಗ್ನೂ ಮತ್ತು ಲಿನಕ್ಸ್ ನ ಜೋಡಿಯೇ ಇಂದು ಲಕ್ಷಾಂತರ ಜನ ಬಳಸುತ್ತಿರುವ ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಂ, (ಕೆಲವೂಮ್ಮೆ ಇದನ್ನ ತಪ್ಪಾಗಿ ಲಿನಕ್ಸ್ ಎಂದು ಕರೆದದ್ದಿದೆ.)

ಗ್ನೂ/ಲಿನಕ್ಸ್ ನ ಬಹಳಷ್ಟು ಆಕರಗಳು ಅಥವಾ “ವಿತರಣೆಗಳು” ಉಪಲಬ್ಧವಿದೆ. ನಾವು ನೂರು ಪ್ರತಿಶತ ಸ್ವತಂತ್ರವಾದ; ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಗೌರವಿಸುವ ಗ್ನೂ/ಲಿನಕ್ಸ್ ವಿತರಣೆಗಳನ್ನ ಶಿಫಾರಸು ಮಾಡುತ್ತೇವೆ.

“ಗ್ನೂ” “GNU’s Not Unix”; ಎಂಬುದರ ಸಂಕ್ಷಿಪ್ತ ರೂಪವಾಗಿದೆ; ಇದನ್ನು ಗ್ನೂ (g-noo) ಎಂದು ಉಚ್ಚರಿಸಲಾಗುತ್ತದೆ.

ಗ್ನೂ ಯೋಜನೆ ಎಫ್ ಎಸ್ ಎಫ್ ನ ಕಾರ್ಯಚಟುವಟಿಕೆಗಳನ್ನು ಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೋಗ, ಅಧ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಚಾರಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೋರಾಡುತ್ತದೆ. ಇದಲ್ಲದೆ ಅಂತರ್ಜಾಲದಲ್ಲಿ
ಸಂವಾದ ,ಮುದ್ರಣ,ಮತ್ತು ಸಂಘಟನೆಯ
ಸ್ವಾತಂತ್ರ್ಯಗಳನ್ನು
, ಖಾಸಗಿ ಸಂಪರ್ಕ ಮಾಧ್ಯಮಕ್ಕೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು,ಮತ್ತು ಖಾಸಗಿ ಏಕಸ್ವಾಮ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಾಂಶ ಬರೆಯುವ ಹಕ್ಕನ್ನು ಬೆಂಬಲಿಸುತ್ತದೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ , ಸ್ವತಂತ್ರ ಸಮಾಜ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This