ಲಿನಕ್ಸಾಯಣ – ೯ – ಸ್ಮೈಲ್ ಪ್ಲೀಸ್

ಸಾಮಾನ್ಯ ಜ್ಞಾನ | 0 comments

Written By Omshivaprakash H L

September 19, 2010

ಅರಮನೆ ಚಿತ್ರದಲ್ಲಿ ಗಣೇಶ್ “ಸೈಲ್ ಪ್ಲೀಸ್” ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು.

ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು “ಔಟ್-ಆಫ್-ಬಾಕ್ಸ್” ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿ ಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ.

ಉಬುಂಟುವಿನಲ್ಲಿ  ಪ್ರೊಗ್ರಾಮ್ ಗಳನ್ನ ಹೇಗೆ ಇನ್ಸ್ಟಾಲ್ ಮಾಡೋದು ಅಂತ ಹೇಳಿದ್ದೆನಲ್ಲಾ. ಅದನ್ನ ಉಪಯೋಗಿಸಿ ಕೊಂಡು “Cheese” ಅನ್ನುವ ತಂತ್ರಾಂಶವನ್ನ ಇನ್ಸ್ಟಾಲ್ ಮಾಡಿಕೊಳ್ಳಿ.

ಇದು Applications -> Graphics ಈ ಮೆನುವಿನಲ್ಲಿ ನಿಮಗೆ ಮುಂದೆ ಸಿಗುತ್ತದೆ. ಇದನ್ನ ಕ್ಲಿಕ್ಕಿಸಿದಾಕ್ಷಣ ನಿಮ್ಮ ವೆಬ್ ಕ್ಯಾಮೆರದ ದೃಷ್ಟಿಪಟಲ ನಿಮ್ಮ ಭಾವಚಿತ್ರವನ್ನ ನಿಮ್ಮ ಪರದೆಯ ಮುಂದೆ ತರಲಾರಂಬಿಸುತ್ತದೆ.
ಕೆಳಗಿನ ಚಿತ್ರದಲ್ಲಿ, ಕಚೇರಿಯಿಂದ ಮನೆಗೆ ವಾಪಸ್ ಬರುವಾಗ ನನ್ನ ಲ್ಯಾಪ್ ಟಾಪ್ ನಲ್ಲಿದ್ದ ವೆಬ್ ಕ್ಯಾಮ್ ಉಪಯೋಗಿಸಿ ತೆಗೆದ ರಸ್ತೆಯ ಚಿತ್ರವಿದೆ. ಕೆಳಗೆ ಮೊದಲು ತೆಗೆದ ಬಾವಚಿತ್ರಗಳೂ ಕಾಣ್ತವೆ.
ನನ್ನ ಕ್ಯಾಮೆರಾವನ್ನ ೧೮೦ ಡಿಗ್ರಿ ತಿರುಗಿಸ ಬಹುದಾದ್ದರಿಂದ ನಾನು ರಸ್ತೆಯ ವಿಡಿಯೋ ಕೂಡ ತಗೀಲಿಕ್ಕೆ ತಕರಾರಿಲ್ಲ. ಹೌದು ಇದೇ “ಚೀಸ್” ಉಪಯೋಗಿಸಿ.
ಮತ್ತೆ ” ಸೈಲ್ ಪ್ಲೀಸ್”

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು...

read more