ಲಿನಕ್ಸ್ ಉದಯಕ್ಕೆ ಕಾರಣವಾದ ಘಟನೆಗಳು

* UNIX ಆಪರೇಟಿಂಗ್ ಸಿಸ್ಟಂ ೧೯೬೦ ರಿಂದ ಬೆಲ್ ಲ್ಯಾಬ್ಸ್ ನಲ್ಲಿ ರೂಪ ಪಡೆದು ಉಪಯೋಗಕ್ಕೆ ಅಣಿಯಾಯಿತು. ೧೯೭೦ರಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಕೂಡ ಪರಿಚಯಿಸಲಾಯಿತು. ಇದರ ಲಭ್ಯತೆ ಮತ್ತು ಬಳಕೆಯ ಸುಲಭ ಸಾಧ್ಯತೆಯಿಂದಾಗಿ ಇದು ಯುನಿವರ್ಸಿಟಿಗಳು ಮತ್ತು ಉದ್ಯಮಗಳಲ್ಲಿ ಪ್ರಚುರವಾಗಿ, ಇದರ ಅಭಿವೃದಿ ಪಡಿಸಿದ ಆವೃತ್ತಿಗಳು ಎಲ್ಲೆಡೆ ಅಂಗೀಕೃತವಾಯಿತು. ಯುನಿಕ್ಸ್ ನ ರಚನೆಯ ವಿನ್ಯಾಸ ಇತರೆ ಆಪರೇಟಿಂಗ್ ಸಿಸ್ಟಂ ನಿರ್ಮಾತೃಗಳಿಗೆ ಪ್ರಭಾವ ಬೀರಿತು.

* ೧೯೮೩ ರಲ್ಲಿ Richard Stallman (ರಿಚರ್ಡ್ ಸ್ಟಾಲ್ಮನ್ ) ಗ್ನು ಪ್ರಾಜೆಕ್ಟ್ ಅನ್ನು ಮುಕ್ತವಾದ, ಸ್ವತಂತ್ರವಾದ ಯುನಿಕ್ಸ್ ಮಾದರಿಯ ಆಪರೇಟಿಂಗ್ ಸಿಸ್ಟಂ ಸೃಷ್ಟಿಸುವ ಉದ್ದೇಶದಿಂದ ಪ್ರಾರಂಭಿಸಿದ. ಇದೇ ಯೋಜನೆಯ ಒಂದು ಮುಖ್ಯಭಾಗವಾಗಿ GNU General Public License (GPL) ಪರವಾನಗಿ ಕೂಡ ಬಂತು. ೧೯೯೦ರ ಪ್ರಥಮಾರ್ಧದ ಹೊತ್ತಿಗೆ ಪೂರ್ಣ ಪ್ರಮಾಣದ ಆಪರೇಟಿಂಗ್ ಸಿಸ್ಟಂ ತಯಾರಿಸಲಿಕ್ಕೆ ಬೇಕಾದ ತಂತ್ರಾಂಶಗಳು ಲಭ್ಯವಿದ್ದವು. ಆದರೂ, GNU kernel ಎಂದೇ ಕರೆಯಲ್ಪಟ್ಟ್ Hurd, ತಂತ್ರಾಂಶ ಅಭಿವೃದ್ದಿಗಾರರನ್ನು (Developers) ಸೆಳೆಯುವಲ್ಲಿ ವಿಫಲವಾಗಿ GNU ಅಪೂರ್ಣವಾಗಿಯೇ ಉಳಿಯಿತು.

* ೧೯೮೦ ರಲ್ಲಿದ ಮತ್ತೊಂದು ಮುಕ್ತ ಆಪರೇಟಿಂಗ್ ಸಿಸ್ಟಂ Berkeley Software Distribution (BSD). ಇದನ್ನು AT&T ತಯಾರಿಸಿದ ಯುನಿಕ್ಸ್ ನ ೬ನೇ ಆವೃತ್ತಿಯಿಂದ ಯುನಿವರ್ಸಿಟ್ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲಿ ಅಭಿವೃದ್ದಿ ಪಡಿಸಿತು. BSD ಯಲ್ಲಿ AT&T ಅಭಿವೃದ್ದಿಪಡಿಸಿದ್ದ ತಂತ್ರಾಂಶದ ಭಾಗಗಳನ್ನು ಹೊಂದಿದ್ದರಿಂದ, AT&T ೧೯೯೦ರಲ್ಲಿ ಯುನಿವರ್ಸಿಟಿ ಅಫ್ ಕ್ಯಾಲಿಫೋರ್ನಿಯಾದ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಿತು. ಇದು BSD ಯ ಅಭಿವೃದ್ದಿ ಮತ್ತು ಬಳಕೆಯನ್ನು ಕುಂಠಿತಗೊಳಿಸಿತು.

* MINIX, ಶೈಕ್ಷಣಿಕ ಬಳಕೆಗೆಂದೇ ರೂಪಿತಗೊಂಡ ಯುನಿಕ್ಸ್ ಮಾಧರಿಯ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು Andrew S. Tanenbaum ೧೯೮೭ ರಲ್ಲಿ ಸಿದ್ದ ಪಡಿಸಿದ. ಸೋರ್ಸ್ ಕೋಡ್ ಲಭ್ಯವಿದ್ದರೂ, ಇದರ ಬದಲಾವಣೆ ಮತ್ತು ವಿತರಣೆಯನ್ನು ತಡೆಹಿಡಿಯಲಾಗಿತ್ತು. ಜೊತೆಗೆ ಮಿನಿಕ್ಸ್, 16-bit ಸಿಸ್ಟಂ ಗಳಿಗೆ ರೂಪಿತವಾಗಿದ್ದು, ಅತಿ ವೇಗವಾಗಿ ಮತ್ತು ಅಗ್ಗವಾಗಿ ಬೆಳೆಯುತ್ತಿದ್ದ ಇಂಟೆಲ್ ನ 386 ಆರ್ಕಿಟೆಕ್ಚರ್ ನ ಪರ್ಸನಲ್ ಕಂಪ್ಯೂಟರ್ ಸಿಸ್ಟಂ ಗಳ 32-bit ಲಕ್ಷಣಗಳಿಗೆ ಸರಿ ಹೊಂದಿಕೆ ಆಗುತ್ತಿರಲಿಲ್ಲ.

ಈ ಎಲ್ಲ ಘಟನೆಗಳು ಮತ್ತು ಸವಿಸ್ತಾರವಾಗಿ ಎಲ್ಲಡೆ ಮುಕ್ತವಾಗಿ ಬಳಕೆಗೆ ಬರದ ಕರ್ನೆಲ್ ನ ಅಭಾವ ಲಿನುಸ್ ಗೆ ಈ ಯೋಜನೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಲಿನಸ್ ತಾನೇ ಹೇಳುವಂತೆ GNU ಅಥವಾ 386BSD ಕರ್ನಲ್ ಗಳೇನಾದರೂ ಅಂದು ಲಭವಿದ್ದಿದ್ದರೆ, ಅವನು ಅಂದು ಲಿನಕ್ಸ್ ಕರ್ನೆಲ್ ಬರೆಯಲು ಕೂರುತ್ತಲೇ ಇರಲಿಲ್ಲವೇನೋ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This