ಲಿನಕ್ಸ್ ನ ಉದಯ

೧೯೯೧ರಲ್ಲಿ ಹೆಲ್ಸಿನ್ಕಿ (Helsinki) ಯಲ್ಲಿದ್ದ ಲಿನುಸ್ ಟೋರ್ವಾಲ್ಡ್ಸ್ ಶುರುಮಾಡಿದ ಒಂದು ಯೋಜನೆ ನಂತರ ಲಿನಕ್ಸ್ ಕರ್ನೆಲ್ ಆಗಿ ಪರವರ್ತನೆಗೊಂಡಿತು. ತನ್ನ ಯುನಿವರ್ಸಿಟಿಯ ದೊಡ್ಡ ಯುನಿಕ್ಸ್ ಸರ್ವರುಗಳಿಗೆ ಪ್ರವೇಶ ಪಡೆಯಲು ಉಪಯೋಗಿಸುತ್ತಿದ್ದ ಟರ್ಮಿನಲ್ ಎಮ್ಯುಲೇಟರ್ (terminal emulator) ಆ ಯೋಜನೆ ಆಗಿತ್ತು. ತನ್ನಲ್ಲಿದ್ದ ಕಂಪ್ಯೂಟರ್ ಹಾರ್ಡ್ವೇರ್ ಗೆ ಹೊಂದುವಂತಹ ಪ್ರೋಗ್ರಾಮ್ ಒಂದನ್ನು ಬರೆದ ಅವನು, ಅದು ಯಾವುದೇ ಆಪರೇಟಿಂಗ್ ಸಿಸ್ಟಂ ಜೊತೆ ಅದು ಕೆಲಸ ಮಾಡುವಂತೆ ನೋಡಿಕೊಂಡ (Interoperability) ಏಕೆಂದರೆ ಅವನ ಬಳಿ ಇದ್ದದ್ದು 80386 ಪ್ರಾಸೆಸರ್ ಇದ್ದ ಹೊಸ ಪರ್ಸನಲ್ ಕಂಪ್ಯೂಟರ್. ಈ ಪ್ರೋಗ್ರಾಮ್ ನ ಅಭಿವೃದ್ದಿಯನ್ನು ಅವನು ಮಿನಿಕ್ಸ್ (Minix) ನಲ್ಲಿ GNU C compiler ಬಳಸಿ ಮಾಡಿದ್ದ. GNU C Compiler ಇಂದಿಗೂ ಲಿನಕ್ಸ್ ನ ಮೊದಲ ನೆಚ್ಚಿನ ಕಂಪೈಲರ್ ತಂತ್ರಾಂಶ.

ಲಿನುಸ್ ಟೋರ್ವಾಲ್ಡ್ ತನ್ನ ಪುಸ್ತಕ “Just for Fun” ನಲ್ಲಿ ಬರೆದಂತೆ, ತಾನು ಬರೆದ ಪ್ರೋಗ್ರಾಮ್ ತನ್ನ ಆಟಕ್ಕೆ ಎಂದು ಕೊಂಡರೂ, ನಂತರ ತಾನು ಬರೆದದ್ದು ’ಆಪರೇಟಿಂಗ್ ಸಿಸ್ಟಂ ಕರ್ನೆಲ್’ ಎಂದು ಅವನಿಗೆ ನಂತರ ಹೊಳೆಯಿತಂತೆ. ೧೯೯೧ ರ ೨೫ನೇ ಆಗಸ್ಟ್ ರಂದು ತನ್ನ ಈ ಆವಿಷ್ಕಾರವನ್ನು Usenet ನ “comp.os.minix.” ನ್ಯೂಸ್ ಗ್ರೂಪ್ ನಲ್ಲಿ ಹೀಗೆ ಪ್ರಕಟಿಸುತ್ತಾನೆ.

Hello everybody out there using minix –

I’m doing a (free) operating system (just a hobby, won’t be big and professional like gnu) for 386(486) AT clones. This has been brewing since april, and is starting to get ready. I’d like any feedback on things people like/dislike in minix, as my OS resembles it somewhat (same physical layout of the file-system (due to practical reasons) among other things).

I’ve currently ported bash(1.08) and gcc(1.40), and things seem to work. This implies that I’ll get something practical within a few months, and I’d like to know what features most people would want. Any suggestions are welcome, but I won’t promise I’ll implement them :-)

Linus ([email protected])

PS. Yes – it’s free of any minix code, and it has a multi-threaded fs. It is NOT portable (uses 386 task switching etc), and it probably never will support anything other than AT-harddisks, as that’s all I have :-( .
—Linus Torvalds

(Source: Torvalds, Linus: What would you like to see most in minix?Usenet group comp.os.minix, August 25, 1991.)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This