ಲಿನಕ್ಸ್ – ಹೆಸರು ಬಂದದ್ದೇತಕ್ಕೆ?

ಲಿನುಸ್ ಟೋರ್ವಾಲ್ಡ್ಸ್ ಮೊದಲು ತನ್ನ ಅವಿಷ್ಕಾರವನ್ನು Freax ಎಂದು ಕರೆಯಬೇಕೆಂದಿದ್ದ. Free ಮತ್ತು X ಎಂಬ ಪದಗಳಿಂದ ಬಂದ ಈ ಪದ ಯುನಿಕ್ಸ್ ನ ಬದಲಿ ಎಂದು ತನ್ನನ್ನು ತಾನು ಸಾರಿ ಹೇಳುತ್ತಿತ್ತು. ಲಿನಕ್ಸ್ ಯೋಜನೆ ಪ್ರಾರಂಭವಾದ ಮೊದಲ ದಿನಗಳಲ್ಲಿ ಅದಕ್ಕೆ ಸಂಬಂದಪಟ್ಟ ಎಲ್ಲ ಕಡತಗಳನ್ನು ಲಿನುಸ್ Freax ಎಂಬ ಪೋಲ್ಡರ್ ನಲ್ಲಿ ಇಟ್ಟಿದ್ದ. ಟೋರ್ವಾಲ್ಡ್ಸ್ ತನ್ನ ಯೋಜನೆಗೆ Linux ಎಂಬ ಹೆಸರನ್ನು ಮೊದಲೇ ಯೋಚಿಸಿದ್ದನಾದರೂ, ಅದು ತನ್ನ ಅಹಂಭಾವವನ್ನು ಸೂಚಿಸಬಹುದೆಂದು ಅದನ್ನು ಬಳಸಿರಲಿಲ್ಲ.

Freax ಹೆಸರಿನಲ್ಲಿ ಕರ್ನೆಲ್ ಸೋರ್ಸ್ ಕೋಡ್ ಇದ್ದ ಫ್ಲಾಪಿಗಳು, ಚಿತ್ರ ಕೃಪೆ: ವಿಕಿಪೀಡಿಯಾ

ಲಿನಕ್ಸ್ ನ ಅಭಿವೃದ್ದಿಯ ಸಲುವಾಗಿ ಅದರ ಕಡತಗಳನ್ನು FUNET ನ FTP serrer (ftp.funet.fi) ನಲ್ಲಿ ಸೆಪ್ಟೆಂಬರ್ ೧೯೯೧ರಲಿ ಸೇರಿಸಲಾಯಿತು. Ari Lemmke ಎಂಬ ಲಿನುಸ್ ನ University of Helsinki ಯ ಸಹವರ್ತಿ , FTP ಸರ್ವರ್ ನ ಮೇಲ್ವಿಚಾರಕನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಆ ಸಮಯದಲ್ಲಿ Freax ಎಂಬ ಹೆಸರು ಚೆನ್ನಾಗಿಲ್ಲವೆಂದು, ಯೋಜನೆಯನ್ನು ತಾನಾಗಿಯೇ Linux ಎಂಬ ಪೋಲ್ಡರ್ ನಲ್ಲಿ ಸೇರಿಸುತ್ತಾನೆ ಅದೂ ಲಿನುಸ್ ಟೋರ್ವಾಲ್ಡ್ಸ್ ನನ್ನು ವಿಚಾರಿಸದೇ. ನಂತರ ಟೋರ್ವಾಲ್ಡ್ಸ್ ’Linux’ ಎಂಬ ಹೆಸರನ್ನು ತನ್ನ ಯೋಜನೆಗೆ ಒಪ್ಪಿಕೊಳ್ಳುತ್ತಾನೆ.

ಲಿನಕ್ಸ್ ಅನ್ನು ಹೇಗೆ ಹೇಳುವುದು ಎಂಬುದನ್ನು ತೋರಿಸಲು ಟೋರ್ವಾಲ್ಡ್ಸ್ ಅದಕ್ಕೊಂದು ಶ್ರಾವ್ಯ ಸಂದೇಶವನ್ನು ಕೂಡ ತನ್ನ ಲಿನಕ್ಸ್ ಕರ್ನೆಲ್ ನ ಸೋರ್ಸ್ ಕೋಡ್ ನೊಂದಿಗೆ ಹಾಕಿದ್ದಾನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This