ಸ್ವಲ್ಪ ನಗ್ತೀರಾ ಪ್ಲೀಸ್!

ಅರಮನೆ ಚಿತ್ರದಲ್ಲಿ ಗಣೇಶ್ “ಸೈಲ್ ಪ್ಲೀಸ್” ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು.

ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು “ಔಟ್-ಆಫ್-ಬಾಕ್ಸ್” ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ.

ಉಬುಂಟುವಿನಲ್ಲಿ  ಪ್ರೊಗ್ರಾಮ್ ಗಳನ್ನ ಹೇಗೆ ಇನ್ಸ್ಟಾಲ್ ಮಾಡೋದು ಅಂತ ಹೇಳಿದ್ದೆನಲ್ಲಾ. ಅದನ್ನ ಉಪಯೋಗಿಸಿ ಕೊಂಡು “Cheese” ಅನ್ನುವ ತಂತ್ರಾಂಶವನ್ನ ಇನ್ಸ್ಟಾಲ್ ಮಾಡಿಕೊಳ್ಳಿ.

ಇದು Applications -> Graphics ಈ ಮೆನುವಿನಲ್ಲಿ ನಿಮಗೆ ಮುಂದೆ ಸಿಗುತ್ತದೆ. ಇದನ್ನ ಕ್ಲಿಕ್ಕಿಸಿದಾಕ್ಷಣ ನಿಮ್ಮ ವೆಬ್ ಕ್ಯಾಮೆರದ ದೃಷ್ಟಿಪಟಲ ನಿಮ್ಮ ಭಾವಚಿತ್ರವನ್ನ ನಿಮ್ಮ ಪರದೆಯ ಮುಂದೆ ತರಲಾರಂಬಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This