ಉಬುಂಟು ೧೦.೧೦ ಗೆ ಅಪ್ಗ್ರೇಡ್ ಮಾಡ್ಕೊಳಿ

ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ.

sudo aptitude update sudo aptitude upgrade sudo do-release-upgrade -d

ನೆನಪಿರಲಿ: ಅಪ್ರ್ಗೇಡ್ ಮಾಡಿಕೊಳ್ಳುವಾಗ ಮಧ್ಯದಲ್ಲಿ ಯಾವುದೇ ಕಾರಣದಿಂದ ಏನಾದರೂ ತೊಡಕು ಉಂಟಾದರೆ ನಿಮ್ಮ ಉಬುಂಟು ಮತ್ತೆ ಬೂಟ್ ಆಗದಿರಬಹುದು. ಅಥವಾ ನಿಮಗೆ ತಂತ್ರಾಂಶಗಳಲ್ಲಿ ತೊಂದರೆ ಕಂಡುಬರಬಹುದು. ನಿಮಗೆ ಹೊಸ ಉಬುಂಟು ಆವೃತ್ತಿ ಬೇಡವೆನಿಸಿದಲ್ಲಿ, ಅಪ್ಗ್ರೇಡ್ ಮಾಡದಿರುವುದು ಒಳಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This