ಲಿನಕ್ಸ್ ಗ್ನು ಜಿ.ಪಿ.ಎಲ್ ನಡಿ ಬಂದ ಬಗೆ

ಲಿನಸ್ ಟೋರ್ವಾಲ್ಡ್ಸ್ ಮೊದಲು ಲಿನಕ್ಸ್ ಕರ್ನೆಲ್ ಅನ್ನು ಅದರದ್ದೇ ಲೈಸೆನ್ಸ್ ನಡಿ ಬಿಡುಗಡೆ ಮಾಡಿದ. ಇದು ಲಿನಕ್ಸ್ ಕರ್ನೆಲ್ ಅನ್ನು ವ್ಯಾವಹಾರಿಕ ಉದ್ದೇಶಗಳಿಗೆ ಬಳಸುವುದನ್ನು ತಡೆಹಿಡಿದಿತ್ತು.

ಲಿನಕ್ಸ್ ಕರ್ನೆಲ್ ಜೊತೆ ಬಳಸ ಬೇಕಾದ ತಂತ್ರಾಂಶ ಗ್ನು ಯೋಜನೆಯ ಮೂಲಕ ಅಭಿವೃದ್ದಿಗೊಂಡ ತಂತ್ರಾಂಶಗಳಾಗಿದ್ದು, ಅವು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಎಂಬ ಮುಕ್ತ ಲೈಸನ್ಸ್ ನಡಿ ಬಿಡುಗಡೆಯಾದಂತಹವು. ಲಿನಕ್ಸ್ ಕರ್ನೆಲ್ ನ ಆವೃತ್ತಿ Linux 0.01 ತನ್ನಲ್ಲಿ Gnu Bash Shell ನ ತಂತ್ರಾಂಶವನ್ನು ತನ್ನಲ್ಲಿ ಇರಿಸಿಕೊಂಡಿತ್ತು.

Linux 0.01 ಆವೃತ್ತಿಯ ಟಿಪ್ಪಣಿಯಲ್ಲಿ ಟೋರ್ವಾಲ್ಡ್ಸ್ ಲಿನಕ್ಸ್ ಗೆ ಅಗತ್ಯವಿರುವ ಗ್ನು ತಂತ್ರಾಂಶಗಳ ಬಗ್ಗೆ ಹೀಗೆ ಬರೆಯುತ್ತಾನೆ.

Sadly, a kernel by itself gets you nowhere. To get a working system you need a shell, compilers, a library etc. These are separate parts and may be under a stricter (or even looser) copyright. Most of the tools used with linux are GNU software and are under the GNU copyleft. These tools aren’t in the distribution – ask me (or GNU) for more info.

ಇದರ ಕನ್ನಡ ಅನುವಾದ ಇಂತಿದೆ.

ಕರ್ನೆಲ್ ತನ್ನಂತಾನೇ ಕಾರ್ಯನಿರ್ವಹಿಸಲಾರದು. shell, compiler, library ಇತ್ಯಾದಿ ತಂತ್ರಾಂಶಗಳು ನಿಮಗೆ ಕರ್ನೆಲ್ ನೊಡನೆ ಬೇಕಾಗುತ್ತವೆ. ಇವು ಬೇರೆಯದೇ ಭಾಗಗಳಾಗಿ, ಬೇರೆಯದೇ ಪರವಾನಗಿಗಳಡಿಯಲ್ಲಿ ದೊರೆಯುತ್ತವೆ. ಲಿನಕ್ಸ್ ಜೊತೆ ಉಪಯೋಗಿಸುವ ಅನೇಕ ಟೂಲ್ ಗಳು ಗ್ನು ತಂತ್ರಾಂಶಗಳು ಮತ್ತು ಇವು ಗ್ನು ಲೈಸೆನ್ಸ್ ನಡಿಯಲ್ಲಿವೆ. ಇವು ಈ ಲಿನಕ್ಸ್ ಆವೃತ್ತಿಯ ಜೊತೆಯಲ್ಲಿ ಸಿಗುವುದಿಲ್ಲ – ಹೆಚ್ಚಿನ ಮಾಹಿತಿಗಾಗಿ ನನ್ನನ್ನು (ಅಥವಾ ಗ್ನುಅನ್ನು) ಸಂಪರ್ಕಿಸಿ.

ಮೂಲ:
Torvalds, Linus: Notes for linux release 0.01 kernel.org, 1991.

೧೯೯೨ ರಲ್ಲಿ ಲಿನುಸ್ ಕರ್ನೆಲ್ ಅನ್ನು GNU GPL ಲೈಸೆನ್ಸ್ ನಡಿಯಲ್ಲಿ ತರುವುದಾಗಿ ಘೋಷಿಸಿದ. ಇದು ಲಿನಕ್ಸ್ ನ ಆವೃತ್ತಿ 0.12 ನ ಟಿಪ್ಪಣಿಯಲ್ಲಿ ಮೊದಲು ನಮೂದಾಗಿದೆ. ೧೯೯೨, ಡಿಸೆಂಬರ್ ನ ಮಧ್ಯಭಾಗದಲ್ಲಿ ಬಿಡುಗಡೆಯಾದ ಲಿನಕ್ಸ್ ಆವೃತ್ತಿ ೦.೯೯ GNU GPL ನಡಿ ಬಂತು.

ಲಿನಕ್ಸ್ ಮತ್ತು ಗ್ನು ತಂತ್ರಜ್ಞರು ಗ್ನು ತಂತ್ರಾಂಶಗಳು ಮತ್ತು ಲಿನಕ್ಸ್ ಅನ್ನು ಜೊತೆಗೂಡಿಸಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವಂತಹ ಸ್ವತಂತ್ರವಾದ ಆಪರೇಟಿಂಗ್ ಸಿಸ್ಟಂ ತಂತ್ರಾಂಶ ರೂಪಿಸುವುದಕ್ಕೆ ಮುಂದಾದರು.

ಟೋರ್ವಾಲ್ಡ್ಸ್ ತನ್ನೊಂದು ಹೇಳಿಕೆಯಲ್ಲಿ ‘ ಲಿನಕ್ಸ್ ಅನ್ನು GPL ನಡಿ ತಂದಿದ್ದು ನಾ ಮಾಡಿದ ಅತ್ಯುತ್ತಮ ಕೆಲಸಗಳಲ್ಲೊಂದು” ಎಂದು ಹೇಳಿಕೊಂಡಿದ್ದಾನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This