ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ

ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ ಅಸೋಸಿಯೇಟ್ ಪಾರ್ಟ್ನರ್ ನೆಟ್ವರ್ಕ್ ನಲ್ಲಿ ತಿಳಿಸಲಾಗಿದೆ.

FTA ಸ್ವತಂತ್ರ ತಂತ್ರಾಂಶ (free software) ಮತ್ತು ಸ್ವತಂತ್ರ ಮಾನದಂಡ(free standards) ವಿಷಯಗಳನ್ನು ಸಂಪೂರ್ಣವಾಗಿ ಇಂಟರ್ನೆಟ್ ನಲ್ಲಿ, ಸ್ವತಂತ್ರ ಪರವಾನಗಿ (free license) ಅಡಿಯಲ್ಲಿರುವ ಪುಸ್ತಕಗಳ ಸಹಾಯದಿಂದ ಭೋದಿಸುತ್ತದೆ.

ಫ್ರೀಸಾಟ್ವೇರ್ ಫೌಂಡೇಶನ್ ವಿಶೇಷ ವಿಡಿಯೋ ಭೋದನೆಯನ್ನ್ನು FTA ಪಠ್ಯಕ್ರಮಕ್ಕೆ ಒದಗಿಸಲಿದ್ದು, ಸ್ವಯಂಸೇವಕರನ್ನು ಪಠ್ಯಕ್ರಮದ ನಿರ್ವಹಣೆ ಮತ್ತು ಅಭಿವೃದ್ದಿಗೆ ಹುರಿದುಂಬಿಸಲಿದೆ. FSF ನ ಅಸೋಷಿಯೇಟ್ ಸದಸ್ಯತ್ವ ಹೊಂದಿರುವವರಿಗೆ FTA ೩೦ ಡಿಸ್ಕೌಂಟ್ ವೋಚರ್ ಗಳನ್ನೂ ನೀಡಲಿದೆ.

ಹೆಚ್ಚಿನ ವಿಷಯಗಳಿಗೆ ಈ ಕೊಂಡಿ ನೋಡಿ. https://www.fsf.org/news/free-technology-academy

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This