ಗ್ನು/ಲಿನಕ್ಸ್ – ಈಗ ರಷ್ಯಾದ ಸರದಿ

ಇದುವರೆಗೂ ಲಂಡನ್, ಚೀನಾ ಇತ್ಯಾದಿಗಳ ಲಿನಕ್ಸ್ ಕಥೆಗಳನ್ನ ಕೇಳಿ ಓದಿದೆವು. ಈಗ ರಷ್ಯಾದ ಸರದಿ. ರಷ್ಯಾ ಸರ್ಕಾರ ಇತ್ತೀಚೆಗೆ ತನ್ನದೇ ಗ್ನು/ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಂ ಅನ್ನು ಹೊಂದುವುದಾಗಿ ತಿಳಿಸಿದೆ. ಇದು ಆಶ್ಚರ್ಯಕರ ಸಂಗತಿಯಾಗಿದ್ದರೂ ನಿಜ. ರಷ್ಯಾದ ಈ ಯೋಜನೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮೊದಲಿಗೆ ಬರುವ ಹೆಸರು ಮೈಕ್ರೋಸಾಫ್ಟ್ ನದ್ದು. ರೆಡ್ಮಂಡ್ ನ ಈ ಸಂಸ್ಥೆ ತನ್ನ ಮೈಕ್ರೋಸಾಪ್ಟ್ ವಿಂಡೋಸ್ ನಿಂದಾಗಿ ಮಾರುಕಟ್ಟೆಯಲ್ಲಿ ವರ್ಷಾನುಗಟ್ಟಲೆ ವಿಶ್ವದಾದ್ಯಂತ ಏಕಸಾಮೀಪ್ಯವನ್ನು ಹೊಂದಿದೆ. ರಷ್ಯಾ ಇದರಿಂದ ದೂರವಿರ ಬಯಸುತ್ತದೆ. ಏಕೆಂದರೆ ಅಗಾಧವಾದ ಹಣದ ಉಳಿತಾಯ ಮತ್ತು ತನ್ನ ಕಂಪ್ಯೂಟರ್ಗಳಲ್ಲಿ ಕೆಲಸಮಾಡುವ ತಂತ್ರಾಂಶಗಳ ಮೇಲಿನ ಸಂಪೂರ್ಣ ಹಿಡಿತ ಅದೂ ಸೋರ್ಸ್ ಕೋಡ್ ನ ಜೊತೆಗೆ. ಸೋರ್ಸ್ ಕೋಡ್ ಜೊತೆಗಿದ್ದರೆ ಯಾವುದೇ ತಂತ್ರಾಂಶ ನ್ಯೂನ್ಯತೆಗಳನ್ನು ಸುಲಭವಾಗಿ ಕಂಡು ಹಿಡಿದು ಸರಿಪಡಿಸಬಹುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಈ ಒಂದು ಅನುಕೂಲವನ್ನು ರಷ್ಯ ಚೀನಾದ ರೆಡ್ ಪ್ಲಾಗ್ ಲಿನಕ್ಸ್ ಅಭಿವೃದ್ದಿಯಿಂದ ಅರಿತಿರುವ ಹಾಗಿದೆ.

ಕೊಸರು: ವಿಶ್ವವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಕಡೆಗೆ ಮುಖಮಾಡಿ ಬಿಲಿಯ ಗಟ್ಟಲೆ ವ್ಯವಹಾರ, ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿರುವಾಗ, ಭಾರತ ತನ್ನ ಬಹುಕೋಟಿ ಯು.ಐ.ಡಿ ಯೋಜನೆಗೆ ಇನ್ನೂ ಮೈಕ್ರೋಸಾಪ್ಟ್ ನ ಮೊರೆ ಹೋಗುತ್ತಿದೆಯಲ್ಲ. ನಮ್ಮ ರಾಷ್ಟ್ರದ ಹಣ ನಮ್ಮಲ್ಲೇ ಹರಿದರೆ ಬಡತನವನ್ನು ದೂರ ಹರಿಸುವುದಿರಲಿ, ಜನ ಸಾಮಾನ್ಯನ ದಿನನಿತ್ಯದ ಗೊಡವೆಗಳನ್ನಾದರೂ ದೂರಪಡಿಸಬಹುದಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This