ಲಿನಕ್ಸ್ ಆಧಾರಿತ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್ ಚೈನಾದಲ್ಲಿ

ಸೂಪರ್ ಕಂಪ್ಯೂಟರುಗಳು ವಿಶ್ವದ ನಾನಾ ಭಾಗದ ವಿಜ್ಞಾನಿಗಳು ತಮ್ಮದೇ ಆದ ಹಾರ್ಡ್ವೇರ್ ಆರ್ಕಿಟೆಕ್ಚರ್ ಗಳನ್ನು ಬಳಸಿ ತಯಾರಿಸಿದಂತಹವು. ಅತಿವೇಗದ, ಸಂಕೀರ್ಣ, ಕ್ಲಿಕ್ಷ್ಟಕರ ಲೆಕ್ಕಾಚಾರಗಳನ್ನು ಹಾಕಲು ಇವುಗಳ ಬಳಕೆ ವಿಶ್ವದಾದ್ಯಂತ ಆಗುತ್ತಿದೆ. ದೇಶದೇಶಗಳ ನಡುವೆ ಅತಿವೇಗದ ಸೂಪರ್ ಕಂಪ್ಯೂಟರ್ ಗಳನ್ನು ತಯಾರಿಸುವ ಸ್ಪರ್ಧೆ ಏರ್ಪಟ್ಟಿದೆ. ವಿಶ್ವದ ಎಲ್ಲ ಸೂಪರ್ ಕಂಪ್ಯೂಟರ್ಗಳು ಸಾಮಾನ್ಯವಾಗಿ ಗ್ನು/ಲಿನಕ್ಸ್ ಕೆಲಸ ಮಾಡಲು ಶಕ್ತವಾಗಿವೆ. ಡೆಬಿಯನ್ ಗ್ನು/ಲಿನಕ್ಸ್ ಯಾವುದೇ ಹಾರ್ಡ್ವೇರ್ ಆರ್ಕಿಟೆಕ್ಚರ್ ನ ಮೇಲೆ ಕೆಲಸ ಮಾಡುವುದರಿಂದ ಅದನ್ನು “ಯುನಿವರ್ಸಲ್ ಆಪರೇಟಿಂಗ್ ಸಿಸ್ಟಂ” ಎಂದು ಕರೆಯುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈಗ ಅತಿವೇಗದ ಸೂಪರ್ ಕಂಪ್ಯೂಟರ್ ಖ್ಯಾತಿ ಚೀನಾದ Tianjin ನಲ್ಲಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿ (NUDT) ಹೊಂದಿರುವ Tianhe-1A ಸೂಪರ್ ಕಂಪ್ಯೂಟರ್ ನದ್ದಾಗಲಿದೆ. Tianhe-1A ನ ಅರ್ಥ “ಮಿಲ್ಕಿ ವೇ” ಅಥವಾ “ಕ್ಷೀರ ಪಥ“. ಇದನ್ನು ಸಶಕ್ತವಾಗಿ ನೆಡೆಸುವ ಹೊಣೆ ಗ್ನು/ಲಿನಕ್ಸ್ ನದ್ದು.

https://www.top500.org/ ವಿಶ್ವದ ಅತಿ ವೇಗದ ೫೦೦ ಸೂಪರ್ ಕಂಪ್ಯೂಟರ್ ಗಳ ಪಟ್ಟಿಯನ್ನು ಪ್ರತಿ ನವೆಂಬರ್ ನಲ್ಲಿ ಹೊರತರುತ್ತದೆ. ಯುನಿವರ್ಸಿಟಿ ಆಫ್ ಟೆನಿಸ್ಸೆ ನ ಕಂಪ್ಯೂಟರ್ ವಿಜ್ಞಾನಿ Jack Dongarra ಈ ಪಟ್ಟಿಯನ್ನು ನಿರ್ವಹಿಸುವವರು. ಇವರೇ ಹೇಳಿದಂತೆ, ಈಗಿನ Cray XT5 Jaguar ಸೂಪರ್ ಕಂಪ್ಯೂಟರಿಗಿಂತ  ೧.೪ ಪಟ್ಟು ಹೆಚ್ಚಿನ ವೇಗವನ್ನು Tianhe-1A ಹೊಂದಿದೆ ಎಂದು NUDT ಹೇಳಿಕೊಂಡಿದೆ.

೧ ಚದರ ಕಿಲೋಮೀಟರ್ ವ್ಯಾಪಿಸಿರುವ Tianhe-1A, ೧೫೫ ಟನ್ ತೂಕವಿದ್ದು, ೧೪,೩೩೬ ಇಂಟೆಲ್ ಕ್ಸಿಯಾನ್ ಪ್ರಾಸೆಸರ್ ಗಳನ್ನೂ, ೭೧೬೮ ಎನ್-ವಿಡಿಯಾ ಟೆಸ್ಲಾ ಜಿ.ಪಿ.ಯೂ ಗಳನ್ನೂ ಬಳಸಿಕೊಂಡು ೧೨೦೬ ಪೆಟಾಪ್ಲಾಪ್ (petaflops) ತುತ್ತತುದಿಯ ಕಾರ್ಯಕ್ಷಮತೆಯನ್ನು ದಾಖಲಿಸ ಬಲ್ಲದ್ದಾಗಿದೆ ಅಲ್ಲದೆ, ೫೬೩.೧ ಟೆರಾಪ್ಲಾಪ್ (teraflops) ಗಳವರೆಗೂ ತೆವಳುತ್ತಾ ಸಾಗಬಲ್ಲದು ಎಂದು NUDT ಹೇಳಿಕೊಳ್ಳುತ್ತದೆ.

ಸಧ್ಯಕ್ಕೆ ಇದರಲ್ಲಿ ಉಪಯೋಗಿಸುತ್ತಿರುವ ಲಿನಕ್ಸ್ ಯಾವುದು ಎಂದು ಬಹಿರಂಗಗೊಂಡಿಲ್ಲವಾದರೂ, ಚೀನಾದ ತನ್ನದೇ ಕೆಂಪು ಧ್ವಜದ ಲಿನಕ್ಸ್  Red Flag Linux ಅನ್ನು ಇದರಲ್ಲಿ ಬಳಸಿರಬಹುದು ಎಂದು ತಿಳಿಯಲಾಗಿದೆ.

ಬರೀ ಸೂಪರ್ ಕಂಪ್ಯೂಟರ್ ಗಳಷ್ಟೇ ಅಲ್ಲದೆ ಕಿಂಚಿತ್ತೂ ಕಾರ್ಯಲೋಪವಿಲ್ಲದೆ ಮಾಡಬೇಕಾದ ಎಲ್ಲ ಕೆಲಸಗಳಿಗೆ ಲಿನಕ್ಸ್ ಬಳಸುತ್ತಿರುವುದು ಇಂದು ಸಾಮಾನ್ಯವಾಗಿದೆ. ಲಿನಕ್ಸಾಯಣದಲ್ಲಿ ಹಿಂದೆ ಬರೆದಿದ್ದ ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನ ವರದಿ ನೆನಪಿದೆಯಲ್ಲವೆ?.

ವೇಗ, ಕಾರ್ಯಕ್ಷಮತೆ, ಸದೃಡ, ಸಾಮಾರ್ಥ ಇವು ಲಿನಕ್ಸ್ ನ ಹೆಚ್ಚುತ್ತಿರುವ ಬಳಕೆಯ ಹಿಂದಿರುವ ಗುಟ್ಟು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This