ಫೆಡೋರ ೧೫ – ಗ್ನೋಮ್ ಶಲ್ ನೊಂದಿಗೆ

ಈ ಮೊದಲೇ ಲಿನಕ್ಸಾಯಣದಲ್ಲಿ ಪ್ರಕಟಿಸಿದಂತೆ ಫೆಡೋರದ ೧೫ನೇ ಆವೃತ್ತಿ ಬಿಡುಗಡೆಗೊಂಡಿದೆ. ಯುನಿಟಿ ೩ಡಿ ಯನ್ನು ಉಬುಂಟು ನೆಚ್ಚಿಕೊಂಡಿದ್ದರೆ, ಫೆಡೋರ ತನ್ನ ಬಳಕೆದಾರರಿಗೆ ಮೋಡಿ ಮಾಡಲು ಗ್ನ್ನೋಮ್ ಶಲ್ (Gnome Shell) ನ ಮೊರೆ ಹೋಗಿದೆ.


Watch this video on YouTube

ಗ್ನೋಮ್ ೩ — ಫೆಡೋರ ೧೫ ರಲ್ಲಿ ಕಂಡತೆ

ಇಂದಿನ ಲ್ಯಾಪ್ಟಾಪ್, ನೆಟ್ಬುಕ್ ಬಳಕೆದಾರರಿಗೆ ಗ್ನೋಮ್ ಶೆಲ್ ಹೇಳಿಮಾಡಿಸಿದಂತಿದೆ. ಇದು ಗ್ನೋಮ್ ನ ಪ್ರಮುಖ ಆವೃತ್ತಿ ೩ರ ಅವಿಭಾಜ್ಯ ಅಂಗವಾಗಿದ್ದು, ಮೊದಲಿಗೆ ಇದನ್ನು ಆಧರಿಸಿ ಅಭಿವೃದ್ದಿ ಪಡಿಸಿದ ಮೊದಲನೆ ಗ್ನು/ಲಿನಕ್ಸ್ ವಿತರಣೆ ಎಂಬ ಖ್ಯಾತಿಯನ್ನು ಫೆಡೋರ ೧೫ ಈ ಮೂಲಕ ಪಡೆದುಕೊಂಡಿದೆ. GNOME 3 ರೆಡ್‌ಹ್ಯಾಟ್ ಮತ್ತು ಫೆಡೋರ ಸಮುದಾಯದ ಉತ್ಸುಕ ಸ್ವಯಂಸೇವಕರ ವ್ಯಾಪಕ ಕೊಡುಗೆಯಾಗಿದೆ.

ಗ್ನೋಮ್ ಅಳವಡಿಕೆಯ ಜೊತೆಗೆ ಫೆಡೋರ ಇನ್ನೂ ಅನೇಕ ಹೊಸ ತಂತ್ರಾಂಶಗಳನ್ನು, ತಂತ್ರಜ್ಞಾನವನ್ನು ತನ್ನ ಜೊತೆ ಹೊತ್ತು ತಂದಿದೆ. Btrfs ಫೈಲ್ ಸಿಸ್ಟಂ, ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪಿಸಲು ಸಾಧ್ಯವಾಗುವಂತೆ indic typing booster, ಸುರಕ್ಷತೆಗಾಗಿ ಮರುವಿನ್ಯಾಸಗೊಂಡ SELinux troubleshooter, ಉತ್ತಮ ಪವರ್ ಮ್ಯಾನೇಜ್ಮೆಂಟ್ , ಓಪನ್ ಆಫೀಸ್ ಬದಲಾಗಿ ಲಿಬ್ರೆ ಆಫೀಸ್ ಗಳನ್ನು ಫೆಡೋರ ಒಳಗೊಂಡಿದೆ.

ಯುನಿಕೋಡ್ ಅನುಮೋದಿಸಿರುವ ರುಪಾಯಿ ಚಿನ್ಹೆಯನ್ನೂ (U+20B9) ಕೂಡ ಈಗ ಫೆಡೋರ ಟೈಪಿಸಲು ಬಿಡುತ್ತದೆ. Qwerty ಕೀಬೋರ್ಡ್ ನಲ್ಲಿ AltGr+4 (Right Alt Key)ಇದಕ್ಕೆಂತಲೇ ಮೀಸಲಿಡಲಾಗಿದೆ. ಕೆಲವು ಹೊಸ ಫಾಂಟುಗಳ ಜೊತೆ ಕಾಶ್ಮೀರಿ , ಸಿಂಧಿ ಭಾಷೆಗಳ ಅಳವಡಿಕೆ, ಫಾಂಟ್ ರೆಂಡರಿಂಗ್ ಎಂಜಿನ್‌ಗಳಾದ ಪ್ಯಾಂಗೋ, ಹರ್ಫ್ ಬಜ್ ಇತ್ಯಾದಿಗಳ ಕೆಲವು ಲೋಪದೋಷಗಳನ್ನು ಸರಿಪಡಿಸಲಾಗಿರುವುದು ಮತ್ತೆ ಕೆಲವು ವಿಶೇಷ. ಫಾಂಟ್ ಡೆವೆಲಪರ್ಗಳು glyphtracer ನೋಡುವುದು ಮರೆಯದಿರಿ. ಇಬಸ್ (iBus) ನ ಹೊಸ ಆವೃತ್ತಿಯೂ ಇದರಲ್ಲಿ ಸೇರಿದೆ.


Watch this video on YouTube

Indic Typing Booster

ಫೆಡೋರ ಡೌನ್ಲೋಡ್ ಮಾಡಿಕೊಳ್ಳಲಿಕ್ಕೆ — https://fedoraproject.org

ಬೇರೆ ಬೇರೆ ಡೆಸ್ಕ್ಟಾಪ್ ಮ್ಯಾನೇಜ್ಮೆಂಟ್ ಸಿಸ್ಟಂಗಳನ್ನು ಬಳಸುವವರಿಗೆ, ಗ್ನು/ಲಿನಕ್ಸ್ ಅನ್ನು ಶಾಲೆಗಳಲ್ಲಿ, ಲ್ಯಾಬೋರೇಟರಿಗಳಲ್ಲಿ, ಕಂಪ್ಯೂಟರ್ ಗೇಮ್, ಗ್ರಾಫಿಕ್ಸ್ ಹೀಗೆ ಹತ್ತು ಹಲವಾರು ವಿಧಾನಗಳಲ್ಲಿ ಬಳಸುವವರಿಗೆ ಫೆಡೋರ ‘ಸ್ಪಿನ್’ ಹೊರತಂದಿದೆ. ಸ್ಪಿನ್ ಬಳಕೆದಾರನ ಆಯ್ಕೆಗೆ ತಕ್ಕಂತೆ ಫೆಡೋರ ಮತ್ತು ಇತರೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ತನ್ನಲ್ಲಿ ಹೊತ್ತು ತರುತ್ತದೆ. — ಫೆಡೋರ ಸ್ಪಿನ್ ನಿಮಗೆ ಇಲ್ಲಿ ಸಿಗುತ್ತದೆ -https://spins.fedoraproject.org/

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This