ಗ್ನು/ಲಿನಕ್ಸ್ ಸುರಕ್ಷತೆಯ ಹಿಂದೆ iptables
ಎಂಬ ಸಣ್ಣದೊಂದು ತಂತ್ರಾಂಶದ ಪಾತ್ರ ಬಹಳ ಮಹತ್ವದ್ದು. ನಿಮ್ಮ ಕಂಪ್ಯೂಟರಿನ ನೆಟ್ವರ್ಕ್ ಕಾರ್ಡು ನಿಮ್ಮನ್ನು ಲೋಕದ ಇನ್ಯಾವುದೋ ಕಂಪ್ಯೂಟರನ್ನು ನಿಮ್ಮ ಸಂಪರ್ಕಜಾಲಕ್ಕೆ ತರುವಾಗ ಯಾವ ಸಂದೇಶ ನುಸುಳಬೇಕು, ಯಾವುದು ಬೇಡ, ಕಂಪ್ಯೂಟರಿನ ಯಾವ ಪೋರ್ಟ್ ಎತ್ತಕ್ಕೆ ಸಂದೇಶ ರವಾನಿಸ ಬೇಕು ಎಂಬುದೆಲ್ಲವನ್ನು ನಿರ್ಧರಿಸಿ ಬೇಡದ ಸಂಪರ್ಕವನ್ನು ಕಡಿಯಲು ಐ.ಪಿ.ಟೇಬಲ್ (iptable) ಸಹಾಯ ಮಾಡುತ್ತದೆ.
ಕಂಪ್ಯೂಟರಿನ ಸಂದೇಶಗಳು ನೆಟ್ವರ್ಕ್ ಕೇಬಲುಗಳ ಮಧ್ಯೆ ಹರಿದಾಡುವಾಗ ಎಲ್ಲಿಗೆ, ಹೇಗೆ, ಯಾರಿಂದ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಗ್ನು/ಲಿನಕ್ಸ್ ನ ಕರ್ನೆಲ್ ತನ್ನ ನೆಟ್ವರ್ಕ್ ಲೇಯರಿನ ಸಂವಾದ ನೆಡೆಸುವಾಗ iptables ತನ್ನ ಪಟ್ಟಿಯಲ್ಲಿ ಬರೆದಿಟ್ಟುಕೊಂಡ ಮಾಹಿತಿಯನ್ನು ಓದಿ ಮುಂದಿನ ಹೆಜ್ಜೆ ಇಡಲು ಆಜ್ಞೆ ನೀಡುತ್ತದೆ. ಹೊಸದೊಂದು ಸೂಚನೆಯನ್ನು iptables ಗೆ ಸೇರಿಸುವುದು ನಿಮ್ಮ ಸಿಸ್ಟಂ ಅಡ್ಮಿನಿಸ್ಟ್ರೇಟರಿನ ಕೆಲಸ. ನೀವೇ ಆ ಕೆಲಸ ನಿರ್ವಹಿಸುತ್ತಿದ್ದೀರಾದರೆ ಮತ್ತದೇ iptables ಕಮ್ಯಾಂಡು ನಿಮ್ಮ ಸಹಾಯಕ್ಕೆ ಬರುತ್ತದೆ. ಸೂಚನೆಗಳನ್ನು ತೆಗೆದು ಹಾಕಲು ಕೂಡ.
ಪ್ರತಿಯೊಮ್ಮೆ ಹೀಗೆ ಸೂಚನೆಗಳನ್ನು ತೆಗೆಯುವುದು, ಹಾಕುವುದು ಮಾಡುವಾಗ iptables ಸೇವೆಯನ್ನು ರಿಸ್ಟಾರ್ಟ್ ಮಾಡಬೇಕು. ಇದು ಒಮ್ಮೊಮ್ಮೆ ದೊಡ್ಡ ಸರ್ವರುಗಳನ್ನು ನೋಡಿಕೊಳ್ಳುವ ಅಡ್ಮಿನಿಸ್ಟ್ರೇಟರುಗಳಿಗೆ ತಲೆನೋವಿನ ಸಮಸ್ಯೆಗಾಯುತ್ತಿತ್ತು. ಅಥವಾ ರೀಸ್ಟಾರ್ಟ್ ಮಾಡದೇ, ಹೊಸ ಸೂಚನೆ ಸೇರಿಸಿಯೂ ಪ್ರಯೋಜನವಿಲ್ಲದಂತಾಗುತ್ತಿತ್ತು.
ಈ ತೊಂದರೆಯನ್ನು ನಿವಾರಿಸಲು ಗ್ನು/ಲಿನಕ್ಸ್ ವಿತರಣೆ ಫೆಡೋರಾ ತನ್ನ ೧೫ ನೇ ಆವೃತ್ತಿಯಲ್ಲಿ ಡೈನಾಮಿಕ್ ಫೈರ್ವಾಲ್ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಮೇ ೨೪ ರಂದು ಫೆಡೋರಾ ೧೫ ಬಿಡುಗಡೆಗೊಳ್ಳಲಿದೆ.
ನಿಮ್ಮ ಪ್ರತಿಕ್ರಿಯೆಗಳು