ಬ್ರೌಸರ್ ಅಪ್ಡೇಟ್

ಪ್ರತಿಯೊಬ್ಬ ಲಿನಕ್ಸ್ ಬಳಕೆದಾರ ತಾನು ಹೇಳಿಕೊಳ್ಳಲಿಚ್ಚಿಸುವುದಕ್ಕಿಂತ ಹೆಚ್ಚು ವೆಬ್ ಬ್ರೌಸರ್ ಬಳಸುತ್ತಾನೆ. ಇತ್ತೀಚೆಗೆ ಈ ಬ್ರೌಸರ್ ಗಳ ಲೋಕದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೋಡೋಣ.

ಕಳೆದ ವಾರಗಳಲ್ಲಿ ಗ್ನು/ಲಿನಕ್ಸ್ ನ ಎರಡು ಮುಖ್ಯ ಬ್ರೌಸರ್ ಗಳು ಅಪ್ಡೇಟ್ ಗಳನ್ನು ಪಡೆದುಕೊಂಡವು. ಮೊಜ್ಜಿಲಾ ಫೈರ್‌ಫಾಕ್ಸ್ ೪.೦.೧ ತನ್ನೊಡನೆ ೧೪ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಹೊತ್ತು ತಂದಿದೆ. ಆದರೂ ಫೈರ್‌ಫಾಕ್ಸ್ ಲಿನಕ್ಸ್‌ನಲ್ಲಿ ಸಂಪ್ಯೂರ್ಣವಾಗಿ ಕಾರ್ಯಕ್ಷಮತೆಯನ್ನು (Optimization) ಸಾಧಿಸಿಲ್ಲ.

ಮೊಜ್ಜಿಲಾ ಡೆವೆಲಪರ್ಗಳು ಫೈರ್‌ಫಾಕ್ಸ್ ಅನ್ನು GCC ಯ ೪.೫ ಆವೃತ್ತಿಯೊಂದಿಗೆ ಅಭಿವೃದ್ದಿಪಡಿಸಲು ಶುರು ಮಾಡಿದ್ದರೂ, ಇದು ಫೈರ್‌ಫಾಕ್ಸ್ ನ ೪ನೇ ಆವೃತ್ತಿಗೆ ಸಂಬಂದಿಸಿದ್ದಾಗಿರುವುದಿಲ್ಲ. GCC ಯ ಹೊಸ ಆವೃತ್ತಿ ಗ್ನು/ಲಿನಕ್ಸ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಅನೇಲ ಅಭಿವೃದ್ದಿಗಳನ್ನು ಕಂಡಿದೆ. ಫೈರ್‌ಫಾಕ್ಸ್ ನ ೬ ನೇ ಆವೃತ್ತಿ ಮಾತ್ರ ಸಧ್ಯಕ್ಕೆ ಇದರ ಉಪಯೋಗ ಪಡೆದುಕೊಳ್ಳಲಿದೆ. ಇದಕ್ಕೆ ನಾವು ಈ ವರ್ಷದ ಕೊನೆಯವರೆಗೂ ಕಾಯಬೇಕಿದೆ.

ಗೂಗಲ್ ಕೂಡ ಕ್ರೋಮ್ ಬ್ರೌಸರ್‌ಗೆ ಅಪ್ಡೇಟ್ ಬಿಡಿಗಡೆಗೊಳಿಸಿದೆ. ಕ್ರೋಮ್ ೧೧ ಸೆಕ್ಯೂರಿಟಿ ಅಪ್ಡೇಟ್‌ಗಳ ದೊಡ್ಡ ಪಟ್ಟಿಯೊಂದನ್ನು ಬಿಡಿಗಡೆ ಮಾಡಿವುದರ ಜೊತೆಗೆ HTML5 ನ ಸ್ಪೀಚ್ ಇನ್ಪುಟ್ ಎಪಿಐ ಬಳಕೆಯ ಸವಲತ್ತನ್ನು ಹೊತ್ತು ತಂದಿದೆ. ಬ್ರೌಸರ್ ನಲ್ಲಿ ಧ್ವನಿಯಿಂದ ಅಕ್ಷರ ಪಡೆಯುವ (voice-to-text capability) ಸವಲತ್ತನ್ನು ಇದು ಒದಗಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This