ಮಕ್ಕಳೆ ಎಡುಬಂಟು ೧೧.೦೪ ಬಿಡುಗಡೆಗೊಂಡಿದೆ

ಎಡುಬಂಟು, ಉಬುಂಟು ಗ್ನು/ಲಿನಕ್ಸ್ ನ ಮೂಲ ಮಂತವನ್ನೇ ಆಧರಿಸಿ ಶಾಲೆಗಳು, ಮನೆಗೆ ಮತ್ತು ಸಮುದಾಯಗಳಿಗೆಂದೇ ತಯಾರಾದ ಆಪರೇಟಿಂಗ್ ಸಿಸ್ಟಂ. ಬಳಕೆದಾರರಿಗೆ ಇನ್ಸ್ಟಾಲ್ ಮಾಡಲು, ಬಳಸಲು ಸುಲಭವಾಗುವಂತೆ ಇದನ್ನು ಪ್ಯಾಕೇಜ್ ಮಾಡಲಾಗಿದೆ.

‘ನಾವು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಹ್ಯಾಕರ್ಗಳು. ಕಲಿಕೆ ಮತ್ತು ಜ್ಞಾನ. ತಮ್ಮನ್ನು ತಾವು ಅಭಿವೃದ್ದಿಪಡಿಸಿಕೊಳ್ಳುವ ಮತ್ತು ತಮ್ಮ ಸುತ್ತಲಿನ ಪ್ರಪಂಚವನ್ನು ಸುಂದರಗೊಳಿಸುವ ಕನಸು ಕಾಣುವ ಎಲ್ಲರಿಗೂ ಮುಕ್ತವಾಗಿ ಸಿಗಬೇಕು.’ ಇದು ಎಡುಬಂಟು ಬಳಗದ ಸಂದೇಶ.

ಲಭ್ಯವಿರುವ ಎಲ್ಲ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಎಲ್ಲವನ್ನೂ  ಸುಂದರವಾಗಿ ಕೆಲಸ ಮಾಡುವಂತೆ ಪ್ಯಾಕ್ ಮಾಡಿ ಎಲ್ಲರಿಗೂ ತಲುಪಿಸುವುದೇ ಎಡುಬಂಟುವಿನ ಮುಖ್ಯಗುರಿ.

ಎಡುಬಂಟು ನಿಮಗೆ edubuntu.org ನಲ್ಲಿ ದೊರೆಯುತ್ತದೆ.

ವಿಶೇಷ ಸೂಚನೆ:- ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇದ್ದರೆ ಎಡುಬಂಟುವನ್ನು ಇಂಟರ್ನೆಟ್ ನಲ್ಲಿಯೇ “Weblive” ತಂತ್ರಜ್ಞಾನದ ಮೂಲಕ ಬಳಸಿ ನೋಡಬಹುದು. ಎಡುಬಂಟು ವೆಬ್ಸೈಟ್ ನಲ್ಲಿರುವ ವೆಬ್ ಲೈವ್ ಲಿಂಕ್ ಬಳಸಿ ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This