ಸೆಲ್ಟೆಕ್ಸ್ (Celtx) – ಮೀಡಿಯಾ ಆಸಕ್ತರಿಗಾಗಿ

ಸೆಲ್ಟೆಕ್ಸ್ (Celtx) ಪ್ರಪಂಚದ ಮೊದಲ ಆಲ್-ಇನ್-ಒನ್ ಮೀಡಿಯಾ ಪ್ರೀ-ಪ್ರೊಡಕ್ಷನ್ ಸಾಫ್ಟ್ವೇರ್. ಪೇಪರು, ಬೈಂಡರ್, ಪೆನ್ನು ಹಿಡಿದು ಚಲನಚಿತ್ರ, ಸಂಭಾಷಣೆ, ಸ್ಟೇಜ್ ಪ್ಲೇ, ಆಡಿಯೋ ವಿಷುಯಲ್ ಸ್ಕ್ರಿಪ್ಟ್, ಆಡಿಯೋ ಪ್ಲೇ, ಕಾಮಿಕ್ ಬುಕ್, ನಾವೆಲ್ ಇತ್ಯಾದಿ ಬರೆಯುವುದನ್ನು ಸೆಲ್ಟೆಕ್ಸ್ ಸಂಪೂರ್ಣವಾಗಿ ಡಿಸಿಟೈಸ್ ಮಾಡುತ್ತದೆ. ಈ ಕಂಪ್ಯೂಟರಿಕರಣದಿಂದಾಗಿ ಮೀಡಿಯಾ ಕೆಲಸ ಸುಲಭವಾಗುವುದಲ್ಲದೆ, ನಮ್ಮೊಡನೆ ಕೈಗೂಡಿಸುವ ಅನೇಕರೊಂದಿಗೆ ಸುಲಭವಾಗಿ ಕಾರ್ಯವನ್ನು ಹಂಚಿಕೊಳ್ಳಬಹುದು.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ಸೆಲ್ಟೆಕ್ಸ್ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಕೊಡುಗೆ ಎಂಬುದನ್ನು ಗಮನಿಸಬೇಕಾದ ಅಂಶ.

ಮುಕ್ತವಾಗಿರುವುದರ ಜೊತೆಗೆ, ಇನ್ನೂ ಹೆಚ್ಚಿನ ಸೇವೆಯನ್ನು ಸೆಲ್ಟೆಕ್ಸ್ ಕಂಪೆನಿ ಖರೀದಿಗೂ ತನ್ನ ಸೇವೆಗಳನ್ನು ತೆರೆದಿದೆ. ಹೆಚ್ಚಿನ ಮಾಹಿತಿಗೆ – https://www.celtx.com ನೋಡಿ.

ಇದರ ಇತರೆ ಮುಖ್ಯಾಂಶಗಳು ಇಂತಿವೆ.

  • ಮಲ್ಟಿಮೀಡಿಯಾ ಗೆಳೆಯ :– ಫಿಲ್ಮ್, ವಿಡಿಯೋ, ಡಾಕ್ಯುಮೆಂಟರಿ, ಥಿಯೇಟರ್, ನಾವೆಲ್, ಮಶಿನಿಮಾ, ಕಾಮಿಕ್ಸ್, ಜಾಹಿರಾತು, ವಿಡಿಯೋ ಗೇಮ್, ದೃಶ್ಯ ಸಂಗೀತ, ರೇಡಿಯೋ, ಪಾಡ್ಕಾಸ್ಟ್ ಹೀಗೆ ಹತ್ತು ಹಲವು ಮೀಡಿಯಾ ವಿಧಾನಗಳಿಂದ ನೀವು ನಿಮ್ಮ ಕಥೆಯನ್ನು ಹೆಣೆಯಬಹುದು.
  • ಒಂದೇ ತಂತ್ರಾಂಶ – ಹಲವು ಕಾರ್ಯ :- ಸ್ಕ್ರಿಪ್ಟ್ ಬರೆಯಲು, ಕಥೆಯ ಭಾಗ ಬರೆಯಲು, ಪಾತ್ರಗಳನ್ನು ಹೆಣೆಯಲು, ಸ್ಕೆಚ್ ಮಾಡಲು, ಸಾರಾಂಶ, ಸ್ಕೆಡ್ಯೂಲ್, ಪ್ರೊಡಕ್ಷನ್, ಪಾತ್ರ ಮತ್ತು ತಾಂತ್ರಿಕವರ್ಗದ ರಿಪೋರ್ಟ್ ತಯಾರಿಕೆ ಹೀಗೆ ಹತ್ತು ಹಲವು ಪ್ರೊಡಕ್ಷನ್ ಕಾರ್ಯಗಳನ್ನು ನೀವು ಸೆಲ್ಟೆಕ್ಸ್ ನೊಂದಿಗೆ ಮಾಡಬಹುದು.
  • ಇಂಟಿಗ್ರೇಟೆಡ್ ಸೊಲ್ಯೂಷನ್ :- ಹತ್ತಾರು ಕಾಗದದಲ್ಲಿ ನಮ್ಮ ಕಥೆ ಹರಿದು ಹಂಚಿಹೋಗಿ ಪ್ರೊಡಕ್ಷನ್ ಸಮಯದಲ್ಲಿ ಕಿರಿಕಿರಿಯಾಗದಂತೆ, ಯುನಿಟ್ ನ ಎಲ್ಲಾ ಜನರೊಂದಿಗೆ ಒಟ್ಟಾಗಿ ಕೆಲಸಮಾಡಲು ಸೆಲ್ಟೆಕ್ಸ್ ತಂತ್ರಾಂಶ ಸಹಾಯ ಮಾಡುತ್ತದೆ. ಒಂದು ಕಥೆಗೆ ಒಂದು ಪ್ರಾಜೆಕ್ಟ್ ಮಾದರಿಯಲ್ಲಿ ಇದು ಪೇಪರ್ ಮತ್ತು ಬೈಂಡರ್ ರೂಪದಲ್ಲಿ ಕೆಲಸ ಮಾಡುತ್ತದೆ.
  • ಸಂಪೂರ್ಣ ಮೀಡಿಯಾ ಪ್ರಿ-ಪ್ರೊಡಕ್ಷನ್ ಸಿಸ್ಟಂ :-  ಕಥೆಯೊಂದನ್ನು ಬರೀಲಿಕ್ಕೆ ಕೂತ್ರೆ ಮತ್ತೆ ತಾಪತ್ರಯವಾಗದಂತೆ, ನಿಮ್ಮ ಬೆರಳುಗಳು ಹೆಚ್ಚಿನ ವೇಗದಲ್ಲಿ ಕೆಲಸ ಮಾಡುವಂತೆ ವರ್ಕ್‌ಪ್ಲ್ಹೋ, ಪ್ರಾಜೆಕ್ಟ್ ಇತರರೊಡನೆ ಹಂಚಿಕೊಳ್ಳುವ ವ್ಯವಸ್ಥೆಯನ್ನು  ಸೆಕ್ಯೂರಿಟಿಯ ಅಂಶಗಳ ಜೊತೆ  ಸೆಲ್ಟೆಕ್ಸ್ ನಿಮ್ಮ ಮುಂದಿಡುತ್ತದೆ. ಹೀಗಾಗಿ ನಿಮ್ಮ ಗಮನ ಕ್ರೀಯಾಶೀಲ ಕೆಲಸದಿಂದ ಹೊರಗೆ ಬಂದು ಗಲಿಬಿಲಿಗೊಳ್ಳದೆ ಇನ್ನೂ ಹೆಚ್ಚಿನ ಉತ್ತಮ ಸಾಹಿತ್ಯ ನಿಮ್ಮಿಂದ ಬರಲು ಸಹಾಯವಾಗುತ್ತದೆ. ಐಪೋನ್ ಅಥವಾ ಐಪ್ಯಾಡ್ ಬಳಕೆದಾರರಾಗಿದ್ದರಂತೂ, ನೀವು ನೆಡೆದಾಡುವಾಗ ಕೂಡ ಸೆಲ್ಟೆಕ್ಸ್ ಬಳಸಿ ನಿಮ್ಮ ಮೀಡಿಯಾ ಕೆಲಸ ಮುಂದುವರೆಸಬಹುದು. ಮನೆಗೆ ಬಂದಾಗ ಅದನ್ನು ಮತ್ತೆ ನಿಮ್ಮ ಕಂಪ್ಯೂಟರಿಗೆ ಸಿಂಕ್ ಮಾಡುವ ವ್ಯವಸ್ಥೆಯೂ ಇದೆ. ಒಟ್ಟಾರೆ ಇದೊಂದು ಕಂಪ್ಲೀಟ್ ಮೀಡಿಯಾ ಸ್ಟುಡಿಯೋ.
  • ನಾನ್-ಲೀನಿಯರ್ ಪ್ರಾಜೆಕ್ಟ್ ಡೆವೆಲಪ್ಮೆಂಟ್ :- ನಿಮ್ಮ ಕಥೆ ಯಾವ ದಿಕ್ಕಿನಿಂದಾದರೂ ರೂಪುಗೊಳ್ಳಲಿಕ್ಕೆ ಸುಲಭವಾಗುವಂತೆ ಸೆಲ್ಟೆಕ್ಸ್ ನ ಇಂಟಿಗ್ರೇಟೆಡ್ ಡೆವೆಲಪ್ಮೆಂಟ್ ಟೂಲ್ ಸಹಾಯ ಮಾಡುತ್ತದೆ.
  • ಮೀಡಿಯಾ ಸೃಷ್ಟಿಕರ್ತರ ವಿಶ್ವ ಸಮುದಾಯ :- ಒಂದು ಮಿಲಿಯನ್ಗೂ ಮಿಗಿಲಾದ ೧೭೦ ದೇಶಗಳ , ೩೦ಕ್ಕೂ ಹೆಚ್ಚಿನ ಭಾಷೆಯ ಮೀಡಿಯಾ ಸೃಷ್ಟಿಕರ್ತರು ಇಂದು ಸೆಲ್ಟೆಕ್ಸ್ ಬಳಸುತ್ತಿದ್ದಾರೆ. ಸ್ವತಂತ್ರ ಚಲನಚಿತ್ರ ನಿರ್ಮಾಪಕರು, ಸ್ಟುಡಿಯೋ ವೃತ್ತಿಪರರು, ೧೮೦೦ಕ್ಕೂ ಹೆಚ್ಚಿನ ಯುನಿವರ್ಸಿಟಿಯ  ಹಾಗೂ ಪಿಲ್ಮ್ ಸ್ಕೂಲ್‌ಗಳ ವಿದ್ಯಾರ್ಥಿಗಳು ಸೆಲ್ಟೆಕ್ಸ್ ಉಪಯೋಗವನ್ನು  ಕಲಿಕೆಗಾಗಿ ಮತ್ತು ಕೆಲಸಕ್ಕೆ ಅಳವಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಸೆಲ್ಟೆಕ್ಸ್ ನ  ಸಾಧ್ಯಾಸಾಧ್ಯತೆಗಳನ್ನು ಉಪಯೋಗಿಸಿಯೇ ನೋಡಬೇಕು. ಇಲ್ಲಿ ಅದರ ಒಂದು ಸಣ್ಣ ಪಟ್ಟಿ ನೋಡಿ.

ಸೆಲ್ಟೆಕ್ಸ್ ಬಳಕೆ ಸುಲಭವಾಗಿ ಕಲಿಯಲು ‘ಮಾಸ್ಟರಿಂಗ್ ಸೆಲ್ಟೆಕ್ಸ್’ ಎಂಬ ಪುಸ್ತಕ ಕೂಡ ಅಮೆಜಾನ್ ನಲಿ ಲಭ್ಯವಿದೆ.

 

 

ಮೀಡಿಯಾ ಗೆಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಾರೆ ಹಾಗೂ ಇತರರೊಂದಿಗೂ  ಇದರ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ನಂಬುತ್ತಾ…

ಲಿನಕ್ಸಾಯಣ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This