ಸ್ಲಾಕ್ವೇರ್ ಆವೃತ್ತಿ ೧೩.೩೭ ಬಿಡುಗಡೆ

ಮೊದಲಿಗೆ ಇದ್ದದ್ದು ಸ್ಲಾಕ್ವೇರ್ – ೧೮ ವರ್ಷಗಳ ನಂತರವೂ ಇದೊಂದು ಬಲಿಷ್ಟ ಗ್ನು/ಲಿನಕ್ಸ್ ವಿತರಣೆ.

ಸ್ಲಾಕ್ವೇರ್ (Slackware), ೧೯೯೩ ರಲ್ಲಿ ಬಿಡುಗಡೆಯಾದ ಪ್ರಥಮ ಗ್ನು/ಲಿನಕ್ಸ್ ವಿತರಣೆ. ಪ್ಯಾಟ್ರಿಕ್ ವೋಲ್ಕರ್ಡಿಂಗ್ (Patrick Volkerding) ಎಂಬಾತ ಹೊರತಂದ ಈ ವಿತರಣೆ ಈಗ ೧೩.೩೭ ಆವೃತ್ತಿಯ ಬಿಡುಗಡೆ ಕಂಡಿದೆ. ಎಂದಿನಂತೆ ವಾಲ್ಕರ್ಡಿಂಗ್ ಈ ಆವೃತ್ತಿಗೆ ಹೊಸ ಬದಲಾವಣೆಗಳನ್ನು, ಹೊಸ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು, ಹೊಸ ಕರ್ನೆಲ್ ಅನ್ನು ಸ್ಕ್ಲಾಕ್ವೇರ್ ಗೆ ಸೇರಿಸಿ ನಮ್ಮೆದುರಿಗಿಟ್ಟಿದ್ದಾರೆ.

ಸ್ಲಾಕ್ವೇರ್ ಇತರೆ ಆಪರೇಟಿಂಗ್ ಸಿಸ್ಟಂಗಳಂತೆ ಡೆಸ್ಕ್ಟಾಪ್ ಪರಿಸರವನ್ನು ಬದಲಿಸುವ ಗೋಜಿಗೆ ಹೋಗದೆ, KDE 4.5.5 ಅನ್ನೇ ತನ್ನಲ್ಲಿ ಉಳಿಸಿಕೊಂಡಿದೆ. ಈಗಾಗಲೇ ಸ್ಲಾಕ್ವೇರ್ ಬಳಸುತ್ತಿರುವವರಿಗೆ ಹೊಸ ತಂತ್ರಾಂಶಗಳು, ಬದಲಾವಣೆಗಳು ಬಂದಾಗ್ಯೂ ಹೊಸದೊಂದು ತಂತ್ರಾಂಶಕ್ಕೆ ಒಗ್ಗಿಕೊಂಡು ಕೆಲಸಮಾಡುವ ಪ್ರಮೇಯವನ್ನು ಇದು ತಪ್ಪಿಸುತ್ತದೆ.

ವಾಲ್ಕರ್ಡಿಂಗ್ ನ ಸ್ಲಾಕ್ವೇರ್ ವಿತರಣೆಯನ್ನು ಹಿಂಬಾಲಿಸಿ ಬಂದ ಅನೇಕ ಗ್ನು/ಲಿನಕ್ಸ್ ವಿತರಣೆಗಳು ಇಂದು ಲಭ್ಯವಿದ್ದರೂ, ಸ್ಲಾಕ್ವೇರ್ ಇಂದಿಗೂ ಸದೃಡ ಹಾಗೂ ಸ್ಪಂದನ ಶೀಲತೆಯಿಂದ ತುಂಬಿರುವುದು ಆಶ್ಚರ್ಯಕರ. ಸ್ಲಾಕ್ವೇರ್ ನ ಈ ಬೆಳವಣಿಗೆ ಯಾವುದೇ ದೊಡ್ಡ ಹಣಕಾಸು ಉದ್ಯಮದ ಹೂಡಿಕೆ ಅಥವಾ ಆಕಾಂಕ್ಷೆಗಳಿಂದ ಆದದ್ದಲ್ಲ ಎಂಬುದು ಗಮನಿಸ ಬೇಕಾದ ಅಂಶ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This