Grub – ರಿಇನ್ಸ್ಟಾಲ್ ಮಾಡ್ಬೇಕಾದ್ರೆ…

by | May 28, 2011 | ಇನ್ಸ್ಟಾಲೇಷನ್, ತಂತ್ರಾಂಶಗಳು, ನುರಿತ ಬಳಕೆದಾರರಿಗೆ | 0 comments

ನಿಮ್ಮಲ್ಲನೇಕರು ಗ್ನು/ಲಿನಕ್ಸ್ ಜೊತೆಗೆ ವಿಂಡೋಸ್ ಬಳಸ್ತೀರ. ಕೆಲವೊಮ್ಮೆ ವಿಂಡೋಸ್ ರಿಇನ್ಸ್ಟಾಲ್ ಮಾಡ್ಬೇಕಾದಾಗ ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಬೂಟ್ ಲೋಡರ್ (Grub) ಮತ್ತೆ ಬೂಟ್ ಸಮಯದಲ್ಲಿ ಬರದೆ ವಿಂಡೋಸ್ ಸೀದಾ ಬೂಟ್ ಆಗುವುದುಂಟು. ಇದಕ್ಕೆ ಕಾರಣ, ವಿಂಡೋಸ್ ನ ಇನ್ಸ್ಟಾಲರ್ ನಿಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನಲ್ಲಿರುವ ಮೊದಲನೆ ಬೂಟ್ ಸೆಕ್ಟರ್ ಅಥವಾ ಹಾರ್ಡಿಸ್ಕ್ ನ ಟ್ರಾಕ್ ಶುರುವಾಗುವ ಮೊದಲನೆ ಮೆಮೊರಿ ಲೊಕೇಷನ್ ಎಂದು ಕರೆಸಿಕೊಳ್ಳುವ ಎಂ.ಬಿ.ಆರ್ ಅನ್ನು ಹೊಸದಾಗಿ ಬರೆಯುವುದೇ ಆಗಿದೆ.

ಮತ್ತೆ ಮೊದಲಿನಂತೆ ವಿಂಡೋಸ್ ಮತ್ತು ಲಿನಕ್ಸ್ ಎರಡನ್ನೂ ಬೂಟ್ ಮಾಡುವ ಅವಕಾಶ ಕೊಡುವ ಬೂಟ್ ಲೋಡರ್ ಇನ್ಸ್ಟಾಲ್ ಮಾಡಲು ನೀವು ಗ್ರಬ್ ರೀಇನ್ಸ್ಟಾಲ್ ಮಾಡಬೇಕು. ಅದನ್ನು ಈ ಕೆಳಕಂಡಂತೆ ಮಾಡಬಹುದು.

೧. ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ಲೈವ್ ಸಿ.ಡಿ ಅಥವಾ ಲೈವ್ ಯು.ಎಸ್.ಬಿ ಇಂದ ಉಬುಂಟು ಬೂಟ್ ಮಾಡಿ
೨. ಉಬುಂಟು ಬೂಟ್ ಆದ ನಂತರ Applications -> Accessories -> Terminal ತೆರೆಯಿರಿ
೩. ನಿಮ್ಮ ಸಿಸ್ಟಂನಲ್ಲಿನ ಲಿನಕ್ಸ್ ಪಾರ್ಟೀಷನ್‌ಗಳನ್ನು ಕಂಡುಕೊಳ್ಳಲು sudo fdisk -l ( ಇಲ್ಲಿ ಎಲ್ ಲೊಅರ್ ಕೇಸ್ ನಲ್ಲಿರಲಿ). ಇದರ ಔಟ್‌ಪುಟ್ ನಿಮಗೆ ಅರ್ಥವಾಗದಿದ್ದಲ್ಲಿ, df -Th ರನ್ ಮಾಡಿ ನಿಮ್ಮ ಹಾರ್ಡಿಸ್ಕ್‌ನಲ್ಲಿ ext3/ext4 ಪಾರ್ಟೀಷನ್‌ಗಳ ಸೈಜ್ ಚೆಕ್ ಮಾಡುವುದರ ಮೂಲಕ ಹಿಂದೆ ಇನ್ಸ್ಟಾಲ್ ಆಗಿದ್ದ ಲಿನಕ್ಸ್ ಪಾರ್ಟೀಷನ್‌ನ ಡಿವೈಸ್ ಹೆಸರನ್ನು ಕಂಡುಕೊಳ್ಳಬಹುದು.

೪. ಈಗ ನಿಮ್ಮ ಸಿಸ್ಟಂ ಪಾರ್ಟೀಷನ್ ಅನ್ನು ಮೌಂಟ್ ಮಾಡಿಕೊಳ್ಳಿ.

  • ಸಾಮಾನ್ಯವಾಗಿ ಮೊದಲನೆ ಹಾರ್ಡಿಸ್ಕ್ ನಲ್ಲಿ ಲಿನಕ್ಸ್ ಇದ್ದರೆ ಅದರ ಡಿವೈಸ್ ಫೈಲ್ ಹೆಸರು sda1 ಅಥವಾ ಎರಡನೆ ಹಾರ್ಡಿಸ್ಕ್ ನಲ್ಲಿದ್ದರೆ sdb1 ಎಂದು ನಿಮಗೆ ಮೇಲಿನ ಕಮ್ಯಾಂಡಿನ ಮೂಲಕ ಕಂಡುಬರುತ್ತದೆ. ಸರಿಯಾದ ಡಿವೈಸ್ ಫೈಲ್ ಹೆಸರನ್ನು ಕಂಡುಕೊಂಡ ನಂತರ ಅದನ್ನು ಮುಂದಿನ ಕಮ್ಯಾಂಡಿನಲ್ಲಿ ಬಳಸಿಕೊಳ್ಳಿ
  • ಗ್ರಬ್ ೨ ನಿಮ್ಮ ಡ್ರೈವ್ ಅನ್ನು ‘೦’ ಎಂದು ಎಣಿಸಿದರೂ, ಮೊದಲನೆ ಪಾರ್ಟಿಷನ್ ೧ ಎಂದು ಎಣಿಸಲ್ಪಡುತ್ತದೆ.

sudo mount /dev/sdXX /mnt

೫. ನಿಮ್ಮ ಗ್ನು/ಲಿನಕ್ಸ್ ಇನ್ಸ್ಟಾಲೇಷನ್‌ನಲ್ಲಿ ನೀವು boot ಗೆ ಅಂತಲೇ ಬೇರೆ ಪಾರ್ಟೀಷನ್ ಸೆಲೆಕ್ಟ್ ಮಾಡಿಕೊಂಡಿದ್ದರೆ ಅದನ್ನು ಗುರುತಿಸಿಕೊಳ್ಳಿ:

  • fdisk ರನ್ ಮಾಡಿದಾಗ sdYY ಪಾರ್ಟೀಷನ್ /boot partition ಆಗಿರುವುದನ್ನು ಕಾಣಬಹುದು (ಉದಾಹರಣೆಗೆ sdb3)

sudo mount /dev/sdYY /mnt/boot

೬. dev ಫೈಲ್ ಸಿಸ್ಟಂ ಅನ್ನು ಮೌಂಟ್ ಮಾಡಿಕೊಳ್ಳಿ :

sudo mount –bind /dev/ /mnt/dev

೭. ಈ ಮೇಲೆ ಮೌಂಟ್ ಮಾಡಿದ ನಿಮ್ಮ ಹಳೆಯ ಲಿನಕ್ಸ್ ಇನ್ಸ್ಟಾಲೇಷನ್ ಪಾರ್ಟೀಷನ್ ಅನ್ನು chroot ಮಾಡಿ

sudo chroot /mnt

೮. ಗ್ರಬ್ ರೀನ್ಸ್ಟಾಲೇಷನ್ ರನ್ ಮಾಡಿ:

  • ಸರಿಯಾದ ಡಿವೈಸ್ ಹೆಸರನ್ನು ಸೂಚಿಸಿ – sda, sdb ಇತ್ಯಾದಿ. ಪಾರ್ಟೀಷನ್ ನಂಬರ್ ಸೇರಿಸುವ ಅವಶ್ಯಕತೆಯಿಲ್ಲ.

sudo grub-install /dev/sdX

೯. ಗ್ರಬ್ ಸರಿಯಾಗಿ ಇನ್ಸ್ಟಾಲ್ ಆಗಿದೆಯೇ ಪರೀಕ್ಷಿಸಿಕೊಳ್ಳಿ (ಸರಿಯಾದ ಡಿವೈಸ್ ಹೆಸರನ್ನು ಬಳಸಿ, ಪಾರ್ಟೀಷನ್ ನಂ. ಬೇಡ)

sudo grub-install –recheck /dev/sdX

೧೦. chroot ನಿಂದ CTRL+D ಕೀ ಬಳಸಿ ಹೊರಬನ್ನಿ.

೧೧. ಡಿವೈಸಸ್ ಅನ್ನು ಅನ್‌ಮೌಂಟ್ ಮಾಡಿ:

sudo umount /mnt/dev

೧೨. ಬೂಟ್ ಪಾರ್ಟೀಷನ್ ಬೇರೆಯಾಗಿ ಮೌಂಟ್ ಮಾಡಿದ್ದರೆ ಅದನ್ನೂ ಅನ್‌ಮೌಂಟ್ ಮಾಡಿ:

sudo umount /mnt/boot

೧೩. ಕೊನೆಗೆ ನಿಮ್ಮ ಡಿವೈಸ್ ಅನ್ನು ಕೂಡ ಅನ್‌ಮೌಂಟ್ ಮಾಡಿ:

sudo umount /mnt

೧೪. ರೀಬೂಟ್ ಮಾಡಿ – ಗ್ರಬ್ ಮತ್ತೆ ಮರುಕಳಿಸಿರುವುದನ್ನು ನೋಡಿ.

reboot

ಸೂಚನೆ:- ಇದು Grab ಆವೃತ್ತಿ ೨ ಕ್ಕೆ ಮಾತ್ರ ಅನ್ವಯವಾಗುತ್ತದೆ. ನೀವು ತುಂಬಾ ಹಳೆಯ ಗ್ನು/ಲಿನಕ್ಸ್ ಆವೃತ್ತಿ ಬಳಸುತ್ತಿದ್ದರೆ ಅದು ಗ್ರಬ್ ೧ / ಗ್ರಬ್ ೨ ಬಳಸುತ್ತಿದೆಯೇ ಖಚಿತ ಪಡಿಸಿಕೊಳ್ಳಿ.

ಗ್ರಬ್ ೨ ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಲ್ಲಿ ಪಡೆಯಬಹುದು. https://help.ubuntu.com/community/Grub2

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This