ಕಿಂದರಜೋಗಿಯೂ.. ನೋಡ್‌ಬಾಕ್ಸೂ

by | Jun 25, 2011 | ತಂತ್ರಾಂಶಗಳು, ವಿಶೇಷ | 0 comments

ಇತ್ತೀಚೆಗೆ ನಾವು ಕಿಂದರಜೋಗಿ‌.‌ಕಾಮ್ ನಲ್ಲಿ ಮಕ್ಕಳಿಗೆಂದೇ ಒಂದು ಚಿತ್ರಕಲಾ ಸ್ಪರ್ಧೆಯ ಬಗ್ಗೆ ಪ್ರಚಾರ ಶುರು ಮಾಡಿದೆವು. ಸ್ಪರ್ಧೆ ಅಂಚೆಕಚೇರಿಯ ಸುತ್ತ ಇದ್ದುದ್ದರಿಂದ ಆಹ್ವಾನ ಪತ್ರಿಕೆಯು ಕೂಡ ಅಂಚೆಕಾರ್ಡ್ ನಲ್ಲಿ ಇರಬೇಕೆಂದು ನಮ್ಮ ಒಕ್ಕೊರಲಿನ ತೀರ್ಮಾನವಾಗಿತ್ತು. ಸರಿ, ಒಂದು ಪೋಸ್ಟ್ ಕಾರ್ಡ್ ಸ್ಕ್ಯಾನ್ ಮಾಡಿ ತಂದದ್ದೂ ಆಯ್ತು. ಕೆಲಸದ ಕಾರಣ ಆಹ್ವಾನ ಪತ್ರಿಕೆಯ ನಿರ್ವಹಣಾ/ರಚನೆಯ ಜವಾಬ್ದಾರಿ ನಮ್ಮ ಹಳ್ಳಿಮನೆ ಅರವಿಂದನ ಕೈ‌ಸೇರಿತು.

ಅರೆರೆ ಇದೇನು ಬರೆ ಪೋಸ್ಟ್ ಕಾರ್ಡ್ ನ ಸ್ಕ್ಯಾನ್ ಚಿತ್ರ. ಮೂಲ ಪ್ತ್ರತಿ ಸಿಗಬಹುದೇ, ಕೈನಲ್ಲೇ ಬರೆದು ಬಿಡ್ತೀನಿ ಎಂದ ಅವನಿಗೆ ತಕ್ಷಣ ಕಾರ್ಡ್ ಕೈಸೇರಲಿಲ್ಲ. ವ್ಯಾಕೋಮ್ ಟ್ಯಾಬ್ಲೆಟ್ ಉಪಯೋಗಿಸಿನೋಡ್ತೇನೆ ಎಂದವ ಇದ್ದಕ್ಕಿದ್ದಂತೆ Python ಸ್ಕ್ರಿಪ್ಟ್ ಬರೆಯಲಿಕ್ಕೆ ಶುರುಮಾಡಿದ. ಆ ಸ್ಕ್ರಿಪ್ಟ್ ಮೂಲಕವೇ ಅಡ್ರೆಸ್ ಎಲ್ಲ ತುಂಬಿ ಅದರ ಪ್ರತಿಗಳನ್ನು .jpg, .png , .pdf ಮಾದರಿಗಳಲ್ಲಿ ನಮಗೆ ಸೇವ್ ಮಾಡಿಕೊಟ್ಟ.

ಇದಕ್ಕವನು ಉಪಯೋಗಿಸಿದ್ದು https://dev.nodebox.net/wiki/WikiStart ಎಂಬ ಮುಕ್ತ ತಂತ್ರಾಂಶ. ಸುಲಭವಾಗಿ ಪ್ರೊಗ್ರಾಮರುಗಳಿಗೆ ತಮ್ಮ ಕೋಡ್ ಅನ್ನು ಬರೆಯಲು, ಮತ್ತದನ್ನು ಸಮುದಾಯಕ್ಕೆ ಹಿಂತಿರುಗಿಸಲು ಸಹಾಯ ಮಾಡುತ್ತದೆ.  ಬಳಸುವುದೂ ಸುಲಭ (ಟೆಕಿಗಳಿಗೆ/ಪ್ರೋಗ್ರಾಮರುಗಳಿಗೆ)

ಇದನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಬಳಸಿ – https://dev.nodebox.net/wiki/Qt

ಕಿಂದರಜೋಗಿಯ ಆಹ್ವಾನ ಪತ್ರಿಕೆ ನೋಡ್ ಬಾಕ್ಸ್ ಮೂಲಕ ತಯಾರಾದ ಬಗೆಯನ್ನು ಈ ಕೆಳಕಂಡ ಚಿತ್ರದ ಮೂಲಕ ಕಾಣಬಹುದು.

ಇದರ ಬಗ್ಗೆ ಹೆಚ್ಚು ತಿಳಿಯಲು ನಮ್ಮ ಕಾಫಿಕಟ್ಟೆ ಕಾರ್ಯಕ್ರಮಕ್ಕೆ ಒಮ್ಮೆ ಭೇಟಿ ಕೊಡಿ. ಮುಂದಿನ ಕಾಫಿಕಟ್ಟೆ ಕಾರ್ಯಕ್ರಮದ ವಿವರಗಳನ್ನು ಇನ್ಮುಂದೆ ಲಿನಕ್ಸಾಯಣದಲ್ಲಿ ಪ್ರಕಟಿಸಲಾಗುವುದು.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

Share This