ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ

ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ.

ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡು ಲಿನಕ್ಸ್ ಕರ್ನೆಲ್‌ನ ಮೂರನೇ ಆವೃತ್ತಿ Linux 3.0 ಗೆ ನಾಂದಿ ಆಡಿದ್ದಾನೆ. ಇದರ ಮೊದಲನೇ ರಿಲೀಸ್ ಭಾನುವಾರ ಕಂಡಿದೆ. ಲಿನಕ್ಸ್ ಆವೃತ್ತಿಯ ಸಂಖ್ಯೆ ಮೂರನ್ನು ಮುಟ್ಟಿರುವುದು ಎರಡು ದಶಕಗಳ ನಂತರ.

ಲಿನಕ್ಸ್‌ನ ಆವೃತ್ತಿ ಸಂಖ್ಯೆಯ ಬದಲಾವಣೆ ವಾರ ಪೂರ್ತಿ ನೆಡೆದ ಲಿನಕ್ಸ್ ಆವೃತ್ತಿಯ ಸಂಖ್ಯೆಯ ಚರ್ಚೆಯ ಫಲವಾಗಿದ್ದು, ಸಧ್ಯದ ಲಿನಕ್ಸ್ ೨.೬.೪೦ ಆವೃತ್ತಿಯಿಂದ ಲಿನಕ್ಸ್ ೨.೮ ಕ್ಕೆ ಸಂಖ್ಯೆ ಬದಲಿಸಲು ಬಯಸಿ ಟೋರ್ವಾಲ್ಡ್ಸ್ ಉಲ್ಲೇಖಿಸಿದ್ದು ಚರ್ಚೆಗೆ ಇಂಬು ನೀಡಿತ್ತು.

ಲಿನಕ್ಸ್ ಕರ್ನೆಲ್ ಮೈಲಿಂಗ್ ಲಿನ್ಸ್ಟ್ ನಲ್ಲಿ ಟೋರ್ವಾಲ್ಡ್ಸ್ ಬರೆದ ಸಾಲೊಂದು ಹೀಗಿದೆ:

“The voices in my head also tell me that the numbers are getting too big,”

ಲಿನಕ್ಸ್ ಆವೃತ್ತಿಯ ಸಂಖ್ಯೆ ದೊಡ್ಡದಾಗುತ್ತಿದೆ ಎಂದು ಲಿನಕ್ಸ್ ಟೋರ್ವಾಲ್ಡ್ಸ್ ಇದರ ಮೂಲಕ ಸೂಚಿಸಿದ್ದ.

ವಾರದ ಕೊನೆಯಲ್ಲಿ ಟೋರ್ವಾಲ್ಡ್ ಲಿನಕ್ಸ್ ನ ಮೂರನೇ ಆವೃತ್ತಿಯ ಪ್ರತಿಪಾದನೆ ಶುರುಮಾಡಿ ಆಗಿತ್ತು, ಕಾರಣ ಲಿನಕ್ಸ್ ತನ್ನ ಮೂರನೇ ದಶಕವನ್ನು ಪ್ರವೇಶಿಸುತ್ತಿರುವುದು.

ಯಾವುದೇ ಸಾಪ್ಟ್ವೇರ್ ನ ಆವೃತ್ತಿಯ ಸಂಖ್ಯೆಯ ದಶಮಾಂಶ ಸಂಖ್ಯೆ ಅಥವಾ ಮೊದಲನೇ ಸಂಖ್ಯೆಯ ಬದಲಾವಣೆ ಹೊಸ ಬೈನರಿ ಕಂಪ್ಯಾಟಿಬಿಲಿಟಿ ಅಥವಾ ಹೊಸ ಕಾರ್ಯಸ್ವರೂಪದ ಬದಲಾವಣೆಯನ್ನು ಸೂಚಿಸುತ್ತದೆ. ಆದರೆ ಲಿನಕ್ಸ್ ಯೋಜನೆ ಇದೆಲ್ಲದಕ್ಕಿಂತ ಭಿನ್ನವಾಗಿದೆ. ೩.೦ದ ನಾಮಫಲಕ ಲಿನಕ್ಸ್ ನೆಡೆದು ಬರುತ್ತಿರುವ ಕಾಲವನ್ನು ಸೂಚಿಸುತ್ತಿದೆ ಆದರೆ ಅದರಲ್ಲಿನ ಬದಲಾವಣೆಗಳನ್ನಲ್ಲ.

ಲಿನಕ್ಸ್ ೨.೦ ಆವೃತ್ತಿ ಸಂಖ್ಯೆ ಬಳಕೆಗೆ ಬಂದಿದ್ದು ೧೯೯೬ ರಲ್ಲಿ, ಹಾಗೂ ಇತ್ತೀಚಿಗಿನ ೨.೬ ಆವೃತ್ತಿಯ ಬಳಕೆ ೨೦೦೩ರಲ್ಲಿ ಶುರುವಾಗಿತ್ತು. ಹೀಗಾಗಿ ದೊಡ್ಡ ಸಂಖ್ಯೆಯ ಬೆಳವಣಿಗೆಗೆ ಲಿನಕ್ಸ್ ಬಹುಕಾಲ ಕಾದಿದೆ. ಇದಕ್ಕೆ ಹೋಲಿಸಿದಲ್ಲಿ, ಗೂಗಲ್ ಕ್ರೋಮ್ ತನ್ನ ತಂತ್ರಾಂಶದ ದಶಮಾಂಶ ಸಂಖ್ಯೆ (major version number) ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಿಸುತ್ತದೆ. ಲಿನಕ್ಸ್ 2.6.x ಅನ್ನು ೭ ವರ್ಷ ಬಳಸಿದೆ.

ಲಿನಕ್ಸ್ ಆವೃತ್ತಿ ಸಂಖ್ಯಾ ಬೆಳವಣಿಗೆ ಏಕ ಮುಖದ್ದು ಎಂದೆನಿಸಿದರೂ, ಸಧ್ಯಕ್ಕೆ ಅದು ಉತ್ತಮವೇ ಎಂದು ಮತ್ತೂ ಕೆಲವೊಂದು ದಿಕ್ಕುಗಳಿಂದ ಅನಿಸುತ್ತದೆ. ತಂತ್ರಜ್ಞಾನದ ಬೆಳವಣಿಗೆಯ ಜೊತೆ ಲಿನಕ್ಸ್ ಮೂರನೇ ದಶಕವನ್ನು ಪ್ರವೇಶಿಸುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This