ವೈದ್ಯರಿಗಾಗಿ ಓಪನ್ ಸುಸೆ-ಮೆಡಿಕಲ್ ೧೧.೪

ನೀವು ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮದೇ ಕ್ಲಿನಿಕ್ ನೆಡೆಸುತ್ತಿದ್ದರೆ ಅಥವಾ ವೈದ್ಯಕೀಯ ಅಧ್ಯಯನದಲ್ಲಿ ತೊಡಗಿದ್ದರೆ ನಿಮಗೂ ಕೂಡ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಅನೇಕ ತಂತ್ರಾಂಶಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈಗ ಅದನ್ನು ನಿಮ್ಮ ಕಂಪ್ಯೂಟರ್, ಲ್ಯಾಪ್ಟಾಪ್ ಅಥವಾ ನೆಟ್‌ಬುಕ್ ನಲ್ಲಿ ಸವಿಯುವ ಭಾಗ್ಯ ನಿಮ್ಮದಾಗಿದೆ. ಓಪನ್‌ಸುಸೆ ಮೆಡಿಕಲ್‌ನ ಆವೃತ್ತಿ ೧೧.೪ ಈಗ ಲಭ್ಯವಿದೆ.

ಓಪನ್‌ಸುಸೆ ಮೆಡಿಕಲ್‌ ಯೋಜನೆ ವೈದ್ಯಕೀಯದಲ್ಲಿ ತೊಡಗಿರುವವರಿಗೆ ವರದಾನವೇ ಸರಿ. ವೃತ್ತಿ ಸಂಬಂದಿತ ಎಲ್ಲ ತಂತ್ರಾಂಶಗಳನ್ನು ಒಂದೆಡೆ ಕಲೆ ಹಾಕಿ, ಅವನ್ನು ಕಾಲಕಾಲಕ್ಕೆ ಅಭಿವೃದ್ದಿ ಪಡಿಸುತ್ತ ವೈದ್ಯರು ಸುಲಭವಾಗಿ ಅದನ್ನು ಬಳಸುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಿಂದ ಪಡೆಯಬಹುದು.

* https://en.opensuse.org/Portal:Medical

ಹೊಸ ಆವೃತ್ತಿ ಈ ಕೆಳಕಂಡ ಬದಲಾವಣೆಗಳನ್ನು ಒಳಗೊಂಡಿದೆ:

*openSUSE 11.4 Updates remove
*openSUSE 11.4 OSS,
*education 11.4,
*Nvidia 11.4,
*Libre Office Stable 11.4,
*11.4 Wireless,
*Medical 11.4,
*non-ossd

ಮತ್ತು ಹೊಸ ಬದಲಾವಣೆಗಳು ನಿಮ್ಮನ್ನು ಚಕಿತಗೊಳಿಸಲಿವೆ.

ಓಪನ್‌ಸುಸೆ ಮೆಡಿಕಲ್‌ನ ಆವೃತ್ತಿ ಡೌನ್ಲೋಡ್ ಮಾಡಿಕೊಳ್ಳಲು ಈ ಕೊಂಡಿ ಬಳಸಿ

* https://susegallery.com/a/UbPYJM/opensuse-medical-114

* OVF image , VMware Image , Live CD/DVD ರೂಪದಲ್ಲಿ ಓಪನ್‌ಸುಸೆ ಮೆಡಿಕಲ್‌ ಲಭ್ಯವಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This