ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್‌ವೇರ್ ಸೆಂಟರ್

 ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್‌ವೇರ್‌ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ ಬಳಕೆಗೆ ಅನುಗುಣವಾಗಿ ಉಬುಂಟುವಿಗೆ ಹೊಸ ರೂಪಕೊಡಲು ಹೊರಟಿರುವ ಕೆನಾನಿಕಲ್ ಸಂಸ್ಥೆ ಇತ್ತೀಚಿಗಿನ ತನ್ನ ಉಬುಂಟು ಆವೃತ್ತಿ ೧೧.೦೪ ನಲ್ಲಿ ಗ್ನೋಮ್ ಅನ್ನು ಕೈಬಿಟ್ಟು ಯುನಿಟಿ ಯೂಸರ್ ಇಂಟರ್ಫೇಸ್ ಬಳಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದು ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಹಾಗೂ ಯುನಿಟಿ ಇನ್ನೂ ಬಳಕೆದಾರರಿಗೆ ಅಷ್ಟು ಸರಿಬರದಿರುವುದು ಅನೇಕರು ಬರೆದ ಬ್ಲಾಗ್, ಕಾಮೆಂಟುಗಳು ಇತ್ಯಾದಿಗಳಿಂದ ತಿಳಿದು ಬಂದಿದೆ.

ಉಬುಂಟು ಸಾಫ್ಟ್‌ವೇರ್ ಸೆಂಟರ್ ಇನ್ನೂ ಸಿನಾಪ್ಟಿಕ್‌ನಷ್ಟು ಅಭಿವೃದ್ದಿಗೊಂಡಿಲ್ಲ. ಪ್ಯಾಕೇಜ್ ಎರರ್ ಫಿಕ್ಸ್ ಮಾಡುವುದು, ಅಪ್‌ಗ್ರೇಡ್, ಡೌನ್‌ಗ್ರೇ‌ಡ್ ಸೌಲಭ್ಯ, ಕೆಲವು ತಂತ್ರಾಂಶಗಳನ್ನು ನಿರ್ದಿಷ್ಟ ಆವೃತ್ತಿಸಂಖ್ಯೆಯಲ್ಲಿ ಉಳಿಸಿಕೊಳ್ಳುವುದು , ನಮಗಿಷ್ಟ ಬಂದ ತಂತ್ರಾಂಶದ ಆವೃತ್ತಿಯನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಸೌಲಭ್ಯ ಇತ್ಯಾದಿ ಇನ್ನೂ ಇದರಲ್ಲಿ ಕಾಣಸಿಗುವುದಿಲ್ಲ. ಉಬುಂಟು ೧೧.೧೦ ಬರಲಿಕ್ಕೆ ಇನ್ನೂ ೪ ತಿಂಗಳುಗಳಿರುವುದರಿಂದ ಕೆನಾನಿಕಲ್ ಇದರ ಬಗ್ಗೆ ಏನು ಮಾಡುತ್ತದೆ ಎಂದು ಕಾದು ನೋಡಬೇಕಿದೆ.

ನಿಮಗೆ ಸಿನಾಪ್ಟಿಕ್ ಇಷ್ಟವಾದಲ್ಲಿ ಅದನ್ನು ಇಂಟರ್ನೆಟ್ ಮೂಲಕ ಇನ್ಸ್ತಾಲ್ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ.

sudo apt-get install synaptic

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This