ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org ವೆಬ್‌ಸೈಟ್ ಮೂಲಕ ನಮಗೆಲ್ಲ ದೊರೆಯುತ್ತದೆ. ಸೆಕ್ಯೂರಿಟಿ ಪ್ರೊಫೆಷನಲ್‌ಗಳಿಗೆ ತಮ್ಮ ಪೆನಟ್ರೇಷನ್ ಟೆಸ್ಟ್‌ (ಸೆಕ್ಯೂರಿಟಿ ಲೋಪಗಳನ್ನು ಕಂಡುಹಿಡಿಯಲಿಕ್ಕೆಂದೇ ಇರುವ ಪರೀಕ್ಷೆಗಳು)ಗಳಿಗೆ ಬೇಕಿರುವ ಎಲ್ಲ ಆಯುಧಗಳನ್ನು, ಹ್ಯಾಕಿಂಗ್ ಇತ್ಯಾದಿಗಳ ಮೂಲಕ ಯಾವುದೇ ಕಂಪ್ಯೂಟರ್ ವ್ಯವಸ್ಥೆ, ತಂತ್ರಾಂಶ ಇತ್ಯಾದಿಗಳ ಸುರಕ್ಷಾ ನ್ಯೂನ್ಯತೆಗಳನ್ನು ಅಳೆದು ನೋಡಲಿಕ್ಕೆ ಬೇಕಿರುವ ಸೂಕ್ತ ಪರಿಸರವನ್ನು ಈ ಲಿನಕ್ಸ್ ವಿತರಣೆ ಕೊಡುತ್ತದೆ.

ಈ ವಿತರಣೆಯನ್ನು ನೀವು ಕಂಪ್ಯೂಟರಿನಲ್ಲಿ ಇನ್ಸ್ಟಾಲ್ ಮಾಡಿ ಇಲ್ಲವೇ ಲೈವ್ ಡಿವಿಡಿ ಅಥವಾ ಯು.ಎಸ್.ಬಿ ನಿಂದಲೇ ಉಪಯೋಗಿಸಿ, ಇದರಲ್ಲಿರುವ ಎಲ್ಲ ತಂತ್ರಾಂಶಗಳನ್ನು ಪೆನೆಟ್ರೇಷನ್‌ಗೆಂದೇ ಅಭಿವೃದ್ದಿಗೊಳಿಸಲಾಗಿದ್ದು, ಇದರಲ್ಲಿನ ಕರ್ನೆಲ್, ಸ್ಕ್ರಿಪ್ಟ್ ಮತ್ತು ತಂತ್ರಾಂಶದ ಪ್ಯಾಚ್‌ಗಳು ಪೆನಟ್ರೇಷನ್ ಟೆಸ್ಟರ್‌ನ ಉಪಯೋಗಕ್ಕೆ ತತ್ತಕ್ಷಣವೇ ದೊರೆಯುತ್ತವೆ.

ಬ್ಯಾಕ್‌ಟ್ರಾಕ್ ಹೊಸ ಮತ್ತು ಹಳೆಯ ತಲೆಮಾರಿನ ಎಲ್ಲ ನಿಪುಣ ಸೆಕ್ಯೂರಿಟಿ ಪ್ರೊಪೆಷನಲ್‌ಗಳಿಗೆಂದೇ ಇದೆ. ತಂತ್ರಾಂಶ ಜಗತ್ತಿನಲ್ಲಿ ಇತ್ತೀಚಿನವರೆಗೆ ಬಿಡುಗಡೆಯಾಗಿರುವ ಎಲ್ಲ ಸೆಕ್ಯೂರಿಟಿ ಟೂಲ್‌ಗಳನ್ನು ಮತ್ತದರ ಡೆಟಾಬೇಸ್‌ಗಳನ್ನು ಸುಲಭವಾಗಿ ಉಪಯೋಗಿಸಲು, ಅವುಗಳ ವಿಷಯ ಸಂಗ್ರಹಿಸಲು ಮತ್ತು ಅವುಗಳನ್ನು ಅಪ್ದೇಟ್ ಮಾಡಲು ಬ್ಯಾಕ್‌ಟ್ರಾಕ್ ಎಲ್ಲ ಬಳಕೆದಾರರನ್ನು ಉತ್ತೇಜಿಸುತ್ತದೆ. ಈ ವಿತರಣೆಯನ್ನು ಬಳಸುವ ಬಳಕೆದಾರರು ಐ.ಟಿ ಸೆಕ್ಯೂರಿಟಿ ಜಗತ್ತಿನ ಅಪ್ರತಿಮ ಪೆನಟ್ರೇಷನ್ ಟೆಸ್ಟರ್‌ಗಳು, ಸರ್ಕಾರಗಳ ಪ್ರತಿನಿಧಿಗಳು, ಐ.ಟಿ ಮತ್ತು ಸುರಕ್ಷತಾ ಕ್ಷೇತ್ರದಲ್ಲಿ ಆಸಕ್ತಿಯುಳ್ಳವದು ಮತ್ತು ಸೆಕ್ಯೂರಿಟಿ ಸಮುದಾಯಕ್ಕೆ ಬರುವ ಹೊಸಬರು ಕೂಡ ಆಗಿರುತ್ತಾರೆ.

ಉದ್ದಿಮೆಗಳು ಮತ್ತು ಎಲ್ಲ ತಾಂತ್ರಿಕ ಕುಶಲತೆಗಳ ವಿವಿಧ ಮಟ್ಟಗಳಿಂದ ಬರುವ ಅನಿಸಿಕೆಗಳು ಇತ್ಯಾದಿಗಳನ್ನು ಆಧರಿಸಿ ಮುಕ್ತವಾಗಿ ಹಾಗೂ ವಾಣಿಜ್ಯವಾಗಿ ಅಭಿವೃದ್ದಿಗೊಳಿಸಲ್ಪಟ್ಟ ಬೇರೆಲ್ಲ ತಂತ್ರಾಂಶಗಳಿಗಿಂತ ಉತ್ತಮವಾದದ್ದನ್ನು ಎಲ್ಲರಿಗೂ ಬೇಕಿರುವಂತೆ ಒದಗಿಸುವುದು ಬ್ಯಾಕ್‌ಟ್ರಾಕ್ ನ ಮುಖ್ಯ ಉದ್ದೇಶವಾಗಿದೆ. ಅಫೆನ್ಸೀವ್ ಸೆಕ್ಯೂರಿಟಿ ಈ ಯೋಜನೆಗೆ ಸಹಾಯ ಮಾಡುತ್ತಿದೆ. ವೈರ್‌ಲೆಸ್ ಹ್ಯಾಕ್ ಮಾಡುವಾಗ, ಸರ್ವರ್‌ಗಳ ಮತ್ತು ವೆಬ್‌ಅಪ್ಲಿಕೇಶನ್‌ಗಳ ಸುರಕ್ಷತೆಯನ್ನು ಪರೀಕ್ಷೆಗೆ ಒಡ್ಡುವಾಗ, ಒಬ್ಬ ಗ್ರಾಹಕನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವಾಗ ಬ್ಯಾಕ್‌ಟ್ರಾಕ್ ನಿಮಗೆ ಒಂದು ಸಾಲಿನ ಉತ್ತರವಾಗಬಲ್ಲದು.

BackTrack 5 – Penetration Testing Distribution from Offensive Security on Vimeo.

ಬ್ಯಾಕ್‌ಟ್ರಾಕ್ ಡೌನ್‌ಲೋಡ್ ಮಾಡಿಕೊಳ್ಳಲು Backtrack-Linux.org ಗೆ ಒಮ್ಮೆ ಭೇಟಿಕೊಡಿ.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ