ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

AdaptableGIMP  GNU Image Manipulation Program ಅಥವಾ GIMP ನ ಮತ್ತೊಂದು  ಅವತಾರ ಎಂತಲೇ ಹೇಳ ಬಹುದು. ಈಗಾಗಲೇ ಇರುವ ಗಿಂಪ್ ಉಪಯೋಗಿಸುವುದು ಸ್ವಲ್ಪ ಕಷ್ಟ , ಅದನ್ನು ಕಲಿಯೋದಕ್ಕೆ ಸಮಯ ಹಿಡಿಸುತ್ತೆ, ಅದರಲ್ಲಿನ ಟೂಲ್‌ಗಳನ್ನು ಉಪಯೋಗಿಸೋದು ಹೇಗೆ ಹೇಳುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಅಡ್ಯಾಪ್ಟಬಲ್ ಗಿಂಪ್.

ನಿಮ್ಮ ಚಿತ್ರವನ್ನು ಏನೆಲ್ಲಾ ಮಾಡಬೇಕು ಎಂಬ ಕೆಲಸದ ಪಟ್ಟಿಯನ್ನು ತಯಾರಿಸಿ ಕೊಟ್ಟರಾಯ್ತು. ನಿಮ್ಮ ಎಡಿಟಿಂಗ್ ಕೆಲಸ ಮುಗಿಯುತ್ತದೆ.

ಬೆಕ್ಕಿನ ಕಣ್ಣ ಬಣ್ಣ ಬದಲಾಯಿಸಲು ಏನು ಮಾಡಬೇಕು ಮತ್ತು ಅದನ್ನು ಅಡ್ಯಾಪ್ಟಬಲ್ ಗಿಂಪ್ ಬಳಸಿ ಮಾಡುವುದು ಹೇಗೆ ಅನ್ನೋದನ್ನು ಈ ಕೊಂಡಿಯಲ್ಲಿನ ಉದಾಹರಣೆಯನ್ನು ನೋಡಿ ಕಲಿಯಬಹುದು –  Change Eye Color.

ಅಡ್ಯಾಪ್ಟಬಲ್ ಗಿಂಪ್ ಟಾಸ್ಕ್ ಸೆಟ್ ಮಾಡುವುದು ಸುಲಭ. ಗಿಂಪ್‌ನ ಸರ್ಚ್ ಬಾಕ್ಸ್ ನಲ್ಲಿ ಕೆಲಸಗಳ ಪಟ್ಟಿ ಹುಡುಕಿ, ನಿಮಗಿಷ್ಟವಾದ ಕೆಲಸದ ಪಟ್ಟಿ ಆಯ್ದುಕೊಂಡು, ಆ ಕೆಲಸಗಳನ್ನೇ ಸ್ವಲ್ಪ ನಿಮ್ಮ ಆಯ್ಕೆಗೆ ಸರಿಹೊಂದುವಂತೆ ಬದಲಾಯಿಸಿ ಕೆಲಸವನ್ನು ಕೆಲವೇ ಕ್ಲಿಕ್‌ಗಳಲ್ಲಿ ಮುಗಿಸಬಹುದು. ನಿಮಗೆ ಯಾವುದೇ ಕೆಲಸದ ಪಟ್ಟಿಯ ಬಗ್ಗೆ ಹೆಚ್ಚು ವಿಷಯ ತಿಳಿಸಿಕೊಳ್ಳಲು ಅಲ್ಲೇ ಇರುವ ವಿಕಿ ಪುಟವನ್ನು ಓದಬಹುದು. ಇದೇ ಅಡ್ಯಾಪ್ಟಬಲ್ ಗಿಂಪ್‌ನಲ್ಲಿ ನನ್ನ ಆಸಕ್ತಿ ಕೆರಳಿಸಿದ ಅಂಶ.

ಅಡ್ಯಾಪ್ಟಬಲ್ ಗಿಂಪ್ ಬಗ್ಗೆ ತಿಳಿಯಲು ಈ ವಿಡಿಯೋ ಕೂಡ ನೋಡಬಹುದು.

ನೀವೂ ಒಮ್ಮೆ ಇದನ್ನು ಪ್ರಯತ್ನಿಸಿ ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This