ಉಬುಂಟು ೧೨.೦೪ – ಬದಲಾವಣೆಗಳೇಕೆ?

ಉಬುಂಟು ೧೧.೧೦ ಈಗಾಗಲೇ ನಮ್ಮಲ್ಲನೇಕರ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳನ್ನೇರಿರಬಹುದು. ಹಿಂದಿನ ಉಬುಂಟುಗಳಿಗಿಂದ ಇದರಲ್ಲಿ ಭಿನ್ನವಾಗಿದ್ದದ್ದು ಉಬುಂಟು ಯುನಿಟಿ ಡೆಸ್ಕ್ಟಾಪ್ ಮತ್ತು ಜಿನೋಮ್ -೩ ನ ಹೊಸ ಆವೃತ್ತಿ . ಇದರಲ್ಲಿ ಕನ್ನಡ ಓದಲಿಕ್ಕೆ ನಾವೇನೂ ಮಾಡಬೇಕಿಲ್ಲ. ಇನ್ಟಾಲ್ ಆದ ತಕ್ಷಣದಿಂದಲೇ ಕನ್ನಡ ಓದಲಿಕ್ಕೆ ಪ್ರಾರಂಭಿಸಬಹುದು. ಕನ್ನಡದಲ್ಲಿ ಟೈಪಿಸಲಿಕ್ಕೆ ಐ-ಬಸ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. Settings -> System Settings -> Language Support ಅಥವಾ ವಿಂಡೋಸ್ ಕೀ ಪ್ರೆಸ್ ಮಾಡಿ ಯುನಿಟಿಯ ಸರ್ಚ್ ನಲ್ಲಿ Language Support ಟೈಪಿಸಿದರಾಯ್ತು. ಲ್ಯಾಂಗ್ವೇಜ್ ಸಪೋರ್ಟ್ ನಲ್ಲಿ ibus ಅನ್ನು “Keyboard Input Method System” ಆಗಿ ಆಯ್ಕೆ ಮಾಡಿಕೊಂಡು ibus-m17n ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಐ-ಬಸ್ ನಲ್ಲಿ ಕನ್ನಡದ ಕೀ-ಬೋರ್ಡ್ ಲೇಔಟ್ ಗಳನ್ನು ಸೇರಿಸಿಕೊಂಡರಾಯ್ತು. ಕನ್ನಡ ಟೈಪಿಸಲಿಕ್ಕೆ ಪ್ರಾರಂಭಿಸಬಹುದು.

ನೆನಪಿರಲಿ:- ಸಿನ್ಯಾಪ್ಟೆಕ್ ಬದಲಿಗೆ ಈಗ ಉಬುಂಟು ಸಾಫ್ಟ್ವೇರ್ ಸೆಂಟರ್ ಇದೆ. ಸಿನ್ಯಾಪ್ಟೆಕ್ ನಿಮಗೆ ಬೇಕಿದ್ದರೆ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.

ಈಗ ಮುಂಬರುವ ಉಬುಂಟುವಿನಲ್ಲಿ ಆಗಲಿರುವ ಕೆಲವು ಮುಖ್ಯ ಬದಲಾವಣೆಗಳನ್ನು ನೋಡೋಣ.

ಇತ್ತೀಚಿನವರೆಗೂ ನೊಡಿದ (ಕಳೆದ ಎರಡು- ಮೂರು ಆವೃತ್ತಿಗಳಲ್ಲಿ) ಬ್ಯಾನ್‌ಶೀ ಮ್ಯೂಸಿಕ್ ಪ್ಲೇಯರ್ ಅನ್ನು ರಿಥಮ್ ಬಾಕ್ಸ್ ಹೊರದಬ್ಬಲಿದೆ. ಹಾಗು ನೋಟ್ಸ್ ಬರೆಯಲಿಕ್ಕಿದ್ದ ಟಾಮ್ ‌ಬಾಯ್ ತಂತ್ರಾಂಶವನ್ನೂ ಕೂಡ ಕೈ-ಬಿಡಲಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ, ಈ ಎರಡೂ ತಂತ್ರಾಂಶಗಳು ಮೂಲತ: Mono ಲೈಬ್ರರಿಗಳಿಂದ ಕೆಲಸ ನಿರ್ವಹಿಸುತ್ತವೆ. ಉಬುಂಟು ಸಿ.ಡಿ ಜೊತೆ ಬರುವ ಬೇರೆ ಯಾವುದೇ ತಂತ್ರಾಂಶಗಳು Mono ಬಳಸದೆ ಕೆಲಸ ನಿರ್ವಹಿಸುತ್ತವೆ. ಈ ಎರಡು ತಂತ್ರಾಂಶಗಳ ಜೊತೆ ಮೊನೋ ಲೈಬ್ರರಿಯನ್ನು ತೆಗೆದು ಹಾಕುವುದರಿಂದ ಸಿ.ಡಿ ಜೊತೆಗೆ ಇನ್ನೂ ಹೆಚ್ಚಿನ ಉತ್ತಮ ತಂತ್ರಾಂಶಗಳನ್ನು ಜನರಿಗೆ ಪಸರಿಸುವಲ್ಲಿ ಸಹಾಯವಾಗುತ್ತದೆ ಎಂಬುದು ಉಬುಂಟು ಅಭಿವೃದ್ದಿ ತಂಡದ ಅಭಿಪ್ರಾಯ.

ಉಬುಂಟು ತಂಡ ಪ್ರತಿ ಬಾರಿಯೂ ಹೀಗೆ ಒಂದಿಲ್ಲಾ ಒಂದು ಬದಲಾವಣೆಗಳನ್ನು ತನ್ನ ಆವೃತ್ತಿಗಳಲ್ಲಿ ಅಳವಡಿಸಿಕೊಳ್ಳುತ್ತಲೇ ಇರುವುದು ಕೆಲವರಿಗೆ ಬೇಜಾರು ತರಿಸಿದರೂ, ಕಾಲಕಾಲಕ್ಕೆ ಅತ್ಯುತ್ತಮ ಮತ್ತು ಸದೃಡ ತಂತ್ರಾಂಶಗಳನ್ನು ಎಲ್ಲರಿಗೂ ಹಿತವಾಗುವ ರೂಪದಲ್ಲಿ ಅಭಿವೃದ್ದಿ ಪಡಿಸುವ ಯೋಜನೆ ಇಟ್ಟುಕೊಂಡು ಕೆಲಸ ಮಾಡುತ್ತಿರುವುದರಿಂದ ಉಬುಂಟು ಇನ್ನೂ ಜನಪ್ರಿಯವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಭಿವೃದ್ದಿ ಯೋಜನೆಗಳು ಸಮುದಾಯದ ಜೊತೆಗೆ ಬೆಳೆಯುತ್ತಾ ಬರುವುದರಿಂದ ಕೆಲವು ತಂತ್ರಾಂಶಗಳ ಅಭಿವೃದ್ದಿಯ ಕಾಲಘಟ್ಟದಲ್ಲಿ ಕೆಲವೊಮ್ಮೆ ಏರುಪೇರುಗಳಾಗುವುದುಂಟು. ಇವುಗಳೂ ಕೂಡ ಉಬುಂಟುವಿನಂತಹ ಯೋಜನೆಗಳ ಏರು ಪೇರಿಗೂ ಕಾರಣವಾಗುತ್ತವೆ. ಜೊತೆಗೆ ಯೋಜನೆಯ ಮುಖ್ಯಸ್ಥರು, ಸಮುದಾಯದ ಸದಸ್ಯರುಗಳೂ ಕೂಡ ಇಂತಹ ಬದಲಾವಣೆಗಳಿಗೆ ಮುನ್ನುಡಿ ಇಡುತ್ತಾರೆ. ಒಟ್ಟಿನಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಒಳ್ಳೆಯ ತಂತ್ರಾಂಶ ಬೇಕಿರುವುದು ಸಾಮಾನ್ಯ ಬಳಕೆದಾರನಿಗೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This