ಓಪನ್ ಹಾರ್ಡ್ವೇರ್ ಜರ್ನಲ್

 

ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’ ಈಗ ಬಂದಿದೆ. ಈ ಒಪನ್ ಜರ್ನಲ್ ಅಥವಾ ಮುಕ್ತ ಪತ್ರಿಕೆ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿ ಲಭ್ಯವಿದೆ.

ತನ್ನ ಮೊದಲ ಆವೃತ್ತಿಯಲ್ಲಿ ‘Producing Lenses With 3D Printers,’ ‘Teaching with Open Hardware Submarines,’ ‘An Open Hardware Platform for USB Firmware Updates and General USB Development,’ ಮುಂತಾದ ಲೇಖನಗಳು ಲಭ್ಯವಿವೆ. ಕಂಪ್ಯೂಟರ್ ಹಾರ್ಡ್ವೇರ್ ಅನ್ನು ಅರ್ಥಮಾಡಿಕೊಳ್ಳುವ ಇಚ್ಚೆಯಿರುವವರು, ಎಂಜಿನಿಯರಿಂಗ್ ವಿಧ್ಯಾರ್ಥಿಗಳು ಬಹುಮುಖ್ಯವಾಗಿ ಉನ್ನತ ಶಿಕ್ಷಣದ ಪ್ರಾಧ್ಯಾಪಕರು ಇದರ ಉಪಯೋಗ ಪಡೆದುಕೊಳ್ಳಬಹುದು.

ಈ ಜರ್ನಲ್ ನ ಮೊದಲ ಬಿಡುಗಡೆಯನ್ನು ಈ ಕೊಂಡಿಯ ಮೂಲಕ ಪಡೆದುಕೊಳ್ಳಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This