ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು ಲ್ಯಾಪ್ಟಾಪ್‌ಗಳಲ್ಲಿ ಬಳಸುವ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಉಬುಂಟು ಹಾಗೂ ಲಿನಕ್ಸ್ ಮಿಂಟ್‌ನ ನಂತರ ಅತ್ಯಂತ ಜನಪ್ರಿಯ ಗ್ನು/ಲಿನಕ್ಸ್ ಆವೃತ್ತಿ ಫೆಡೋರ.

Fedora 16 ನಲ್ಲಿ ಹೊಸತೇನಿದೆ?

ಹೊಸ ಕರ್ನೆಲ್ v3.1.0, ಜಿನೋಮ್ ಡೆಸ್ಕ್ಟಾಪ್ ನ ಹೊಸ ಆವೃತ್ತಿ v3.2.1, KDE ನ ಹೊಸ ಆವೃತ್ತಿ v4.7.2 , Grub 2.0 ಅವಲಬ್ದತೆಯ ಜೊತೆಗೆ, ಕಂಪ್ಯೂಟರ್ ಅಡ್ಮಿನ್‌ಗಳಿಗಾಗಿ ಅಪಾಚೆಯ ಹೊಸ ಆವೃತ್ತಿ ಸೇರಿಸಲಾಗಿದೆ. ಬಳಕೆದಾರರ ಐಡಿ (UID/GID) ಗಳ ಪ್ರಾರಂಭಿಕ ಸಂಖ್ಯೆಯನ್ನು ಹೆಚ್ಚಿಸಲಾಗಿದೆ , ಹಳೆಯ ext2/ext3 ಫೈಲ್ ಸಿಸ್ಟಂಗಳನ್ನು ext4 ಕರ್ನೆಲ್ ಡ್ರೈವರ್ ಮೂಲಕವೇ ಓದುವಂತೆ ಮಾಡಲಾಗಿದೆ. ವರ್ಚುಅಲೈಸೇಷನ್ ನಲ್ಲಿ ಓಪನ್ ಸ್ಟ್ಯಾಕ್ ಮತ್ತು ಅಯಿಲಸ್ ಕಂಡಕ್ಟರ್ ಗಳನ್ನೂ ಸೇರಿಸಲಾಗಿದೆ. ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆಯಲ್ಲಿ ಬೇಕಿದ್ದ HAL ಡೀಮನ್ ಮತ್ತು libhal ಬದಲಿಗೆ udisks, upower ಮತ್ತು libudev ಗಳನ್ನು ಸೇರಿಸಲಾಗಿದೆ.

ಈ ಎಲ್ಲ ಬದಲಾವಣೆಗಳು, ಫೆಡೋರ ಲಿನಕ್ಸ್‌ ಕಂಪ್ಯೂಟರಿನಲ್ಲಿ ಮೊದಲಿಗಿಂತ ಚೆನ್ನಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತವೆ. ಹಾಗೂ ಇತ್ತೀಚೆಗೆ ಬಂದ ಜಿನೋಮ್ ಮತ್ತು ಕೆಡಿಯಿ ಗಳ ಸವಿ ಸವಿಯಲು ಅನುವು ಮಾಡಿಕೊಡುತ್ತದೆ. ಹೊಸ ಕರ್ನೆಲ್ ಲಿನಕ್ಸ್ ಕಾರ್ಯಶಕ್ತಿಯನ್ನು ಹೆಚ್ಚಿಸಿದೆ ಹಾಗೂ ಇತ್ತೀಚೆಗೆ ಸುದ್ದಿಯಲ್ಲಿದ್ದ ಲಿನಕ್ಸ್ ಪವರ್ ಬಗ್ ತೊಂದರೆಯನ್ನು ಕೂಡ ಹೊಸ ಕರ್ನೆಲ್ ಮೂಲಕ ನಿವಾರಿಸಿಕೊಂಡಿದೆ.

ಫೆಡೋರ ಡೌನ್ಲೋಡ್ ಮಾಡಿಕೊಳ್ಳಲು – https://fedoraproject.org ಗೆ ಭೇಟಿಕೊಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This