ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ

by | Nov 12, 2011 | ಸುದ್ದಿ | 0 comments

ಮುಕ್ತ ತಂತ್ರಾಂಶದ ಬಳಕೆ ಐ.ಟಿ ಕಂಪೆನಿಗಳ ಜೊತೆಗೆ ಶಾಲೆಗಳು, ಕಾಲೇಜು ಮತ್ತು ಸರ್ಕಾರೀ ಒಡೆತನದ ನಿಗಮಗಳಿಗೂ ಹಬ್ಬಿರುವುದು ಇತ್ತೀಚೆಗೆ ಸಾಮಾನ್ಯ ಸುದ್ದಿ. ಜೊತೆಗೆ ಸರ್ಕಾರವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸಿದ್ದವಾಗಿರುವ ಆಕಾಶ್ ಕಡಿಮೆ ಬೆಲೆಯ ಟ್ಯಾಬ್ಲೆಟ್ ಕೂಡ ಬಿಡುಗಡೆ ಮಾಡಿದ್ದನ್ನು ಕೇಳಿದ್ದೀರಲ್ಲವೆ. ಇದರ ಲಾಭವಾದರೂ ಏನು ಎಂದು ಕೇಳಿದರೆ, ಉತ್ತರವೂ ತಟ್ಟನೆ ಸಿಕ್ಕೀತು. ಸ್ವಾತಂತ್ರ್ಯದ ಜೊತೆಗೆ ತೆರಿಗೆದಾರರ ಹಣ ಉಳಿತಾಯ. ಈಗ ಅಂತಹದ್ದೇ ಒಂದು ವಿಷಯ ನಿಮ್ಮ ಮುಂದೆ… ಕೇರಳದಿಂದ.

ಕೇರಳ ರಾಜ್ಯ ವಿದ್ಯುತ್ ನಿಗಮ (KSEB) ಕೆಲವೇ ಕೆಲವು ವರ್ಷಗಳ ಹಿಂದೆ ಮುಕ್ತ ತಂತ್ರಾಂಶಗಳ ಮೊರೆ ಹೋಗಿತ್ತು. ಕೇರಳದಾದ್ಯಂತ ತನ್ನ ಗ್ರಾಹಕರ ವ್ಯವಹಾರ, ಲೆಕ್ಕಾಚಾರಗಳನ್ನು ನೋಡಿಕೊಳ್ಳುವುದಲ್ಲದೇ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಿಂದ ವರ್ಷಾನುವರ್ಷ ಕೆ.ಎಸ್.ಇ.ಬಿ ಕೋಟ್ಯಂತರ ರೂಪಾಯಿ ಉಳಿಸುತ್ತಿದೆ.

ಓರುಮ ಹೆಸರಿನ ಬಿಲ್ಲಿಂಗ್ ತಂತ್ರಾಂಶವನ್ನು ೨೦೦೬ ರಲ್ಲಿ ಪರಿಚಯಿಸಿದ ಕೆ.ಎಸ್.ಇ.ಬಿ, ಇದುವರೆಗೆ ಹಿಂತಿರುಗಿ ನೋಡಿದ್ದಿಲ್ಲ. ಒರುಮಾದ ಪರಿಚಯದ ನಂತರ ಸರಸ್ ಅಕೌಂಟಿಂಗ್ ತಂತ್ರಾಂಶ ಕೂಡ ಪರಿಚಯವಾಯ್ತು. ಇದರ ಫಲಿತಾಂಶವೇ ೭-೮ ಕೋಟಿ ರೂಪಾಯಿಗಳ ಉಳಿತಾಯ.

ಡೆಬಿಯನ್ ಸರ್ವರ್‌ಗಳು, ಉಬುಂಟು ಡೆಸ್ಕ್ತಾಪ್‌ಗಳು. ಪೋಸ್ಟ್‌ಗ್ರೆಸ್ ಎಸ್.ಕ್ಯೂ.ಎಲ್ , ಪಿ.ಎಚ್.ಪಿ, ಜೆ-ಬಾಸ್ , ಅಪಾಚೆ ವೆಬ್‌ಸರ್ವರ್ ಹೀಗೆ ಹತ್ತು ಹಲವು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸಿ, ತನ್ನದೇ ಸ್ವಂತ ಡೆವೆಲಪರ್‌ಗಳ ಸಹಾಯದಿಂದ ಕೆ.ಎಸ್.ಇ.ಬಿ ಈ ಸಾಧನೆಯನ್ನು ಮಾಡಿದೆ. ನಿಗಮಕ್ಕೆ ನಿಜಕ್ಕೂ ಖರ್ಚಾದ ಹೆಚ್ಚುವರಿ ಮೊತ್ತವೆಂದರೆ ೩೫೦೦೦ ರೂಪಾಯಿಗಳು, ತನ್ನ ನೌಕರರಿಗೆ ಈ ತಂತ್ರಾಂಶ ಉಪಯೋಗಿಸುವುದನ್ನು ಕಲಿಸಲು ಮಾತ್ರ.

ಈ ತಂತ್ರಾಂಶಗಳಿಗೆ ಬೇಕಾದ ಹೆಚ್ಚುವರಿ ಇ-ಬಿಲ್ಲಿಂಗ್ ಗೆ ತಂತ್ರಾಂಶವನ್ನು ಟಿ.ಸಿ.ಎಸ್ ಅಭಿವೃದ್ದಿ ಪಡಿಸಿ ಸರಸ್ ನೊಂದಿಗೆ ಜೋಡಿಸಿದೆ. ವ್ಯಾವಹಾರಿಕ ತಂತ್ರಾಂಶ (ಸಪ್ಲೈ-ಚೈನ್-ಮ್ಯಾನೇಜ್‌ಮೆಂಟ್) ಅನ್ನು ಡೆಲ್ಲಾಯ್ಟ್ ಅವಭಿವೃದ್ದಿ ಪಡಿಸಿದೆ.

www.kseb.in ಕೂಡ ಮುಕ್ತ ತಂತ್ರಾಂಶ ಜೂಮ್ಲಾ (Joomla) ದ ಮೇಲೆ ಅಭಿವೃದ್ದಿ ಪಡಿಸಲಾಗಿದ್ದು, ಕಳೆದ ವರ್ಷವಷ್ಟೇ ಬಿಡುಗಡೆಯಾಗಿದೆ.

ಇದರ ಹೆಚ್ಚುವರಿ ಮಾಹಿತಿಯನ್ನು ಲಿನಕ್ಸ್ ಫಾರ್ ಯು ಮ್ಯಾಗಜೀನ್‌ನ ಈ ವರದಿಯಲ್ಲಿ ಕಾಣಬಹುದು.

ಇಂತಹ ಮಾದರಿಗಳು ಕರ್ನಾಟಕದ ವಿದ್ಯುತ್ ಮಂಡಲಿಗೆ ಯಾಕೆ ತಲುಪುವುದಿಲ್ಲ? ಕೋಟಿಗಟ್ಟಲೆ ಹಣವನ್ನು ಯಾವುದೋ ವಿದೇಶ ಪ್ರವಾಸಕ್ಕೆ ಗುಂಪುಗೂಡಿಕೊಂಡು ಹೋಗುವುದರ ಬದಲು, ಇಂತಹ ವಿಚಾರಗಳಲ್ಲಿ ಮನಸ್ಸಿಟ್ಟು ಕೆಲಸ ಮಾಡಿದರೆ ಇಲಾಖೆಗೆ ಹಣದ ಉಳಿತಾಯವಾಗುವುದರ ಜೊತೆಗೆ, ಉಳಿಸಿದ ಹಣದಲ್ಲಿ ತಮ್ಮದೇ ಸದೃಡ ತಂತ್ರಜ್ಞರ ತಂಡ ಕಟ್ಟಬಹುದಲ್ಲವೇ? ನಮ್ಮ ವಿದ್ಯುತ್ ತೊಂದರೆಗಳಿಗೆ ಪರ್ಯಾಯ ವ್ಯವಸ್ಥೆಗಳ ಅನ್ವೇಷಣೆ ಮಾಡಬಹುದಲ್ಲವೇ?

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator) ಲಭ್ಯ

ಕನ್ನಡ ವಿಕಿಪೀಡಿಯಕ್ಕೆ (https://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ...

read more

ಕನ್ನಡ ಪುಸ್ತಕಗಳ ಹುಡುಕಿ ಬನ್ನಿ – ಸಮೂಹ ಸಂಚಯ

ಕನ್ನಡ ಪುಸ್ತಕಗಳನ್ನು ಸುಲಭವಾಗಿ ಇಂಟರ್ನೆಟ್‌ನಲ್ಲಿ ಮತ್ತು ವಿಕಿಪೀಡಿಯದಲ್ಲಿ ಹುಡುಕುವಂತೆ ಮಾಡಲು ಹೊರಟಿರುವ ಸಮೂಹ ಸಂಚಯ - ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳ ಹೆಸರು, ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಕಂಗ್ಲೀಷ್‌ನಿಂದ ಕನ್ನಡೀಕರಿಸುತ್ತಿದೆ. ೫೦೦೦ದಷ್ಟು ಪುಟಗಳನ್ನು...

read more

ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿರಂಜನರ ಬಹುಪಾಲು ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆಯೆಂದು ಸಿಐಎಸ್-ಎ೨ಕೆಯ ಸಹಯೋಗದೊಂದಿಗೆ ಕನ್ನಡ ವಿಕಿಪೀಡಿಯ ಬಳಗವು ಹಂಚಿಕೊಳ್ಳಲು ಹರ್ಷಿಸುತ್ತದೆ. ನಿರಂಜನ (೧೯೨೪-೧೯೯೨) ,  ಇದು ಕುಳಕುಂದ ಶಿವರಾವ್ ಅವರ ಲೇಖನಾಮ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು...

read more
Share This