ಮೊನ್ನೆ ಒಮ್ಮೆ ಹೀಗಾಯ್ತು…
itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ.kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ.(“rh” “ಱ್”) ; not in ITRANS Kannada tableಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ ಮಾಡುತ್ತಿದೆ.
ಹೀಗೆ ಯಾವಾಗಲೋ ಒಮ್ಮೆ ವರ್ಷಾನುವರ್ಷಗಳಿಂದ ಲಿನಕ್ಸ್ ಬಳಸುತ್ತಿರುವ ನಮಗೇ ಹೊಸ ತೊಂದರೆ ತಾಪತ್ರಯಗಳು ಕಾಡುತ್ತಲೇ ಇರುತ್ತವೆ. ಹಾಗೆಂದು ಎಲ್ಲವೂ ಕೆಲಸ ಮಾಡುವುದೇ ಇಲ್ಲ ಎಂದೇನಲ್ಲವಲ್ಲ. ಮೇಲಿನ ಸಾಲುಗಳನ್ನೇ ನೋಡಿ. ನನ್ನ ತಿಳಿವಿಗೆ ಬಂದಿದ್ದ ಒಂದೆರಡು ವಿಷಯಗಳನ್ನು ಜಾಲಾಡಿ ನೋಡಿ ತೊಂದರೆಯನ್ನೂ ದೂರ ಮಾಡಿಕೊಂಡದ್ದಾಗಿದೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ನನಗೆ ಇಂತದ್ದೊಂದು ಶಕ್ತಿಯನ್ನು ಕೊಟ್ಟಿದೆ. ನಾನು ಬಳಸುತ್ತಿರುವ ತಂತ್ರಾಂಶ ಮತ್ತ್ಯಾವುದೋ ಖಾಸಗಿ ಸಂಸ್ಥೆಯದ್ದಾಗಿದ್ದರೆ, ನಾವು ಅವರ ತಂತ್ರಜ್ಞರ ತಂಡ ಪರಿಹಾರ ಸೂಚಿಸುವವರೆಗೂ ಯೋಚಿಸುತ್ತಾ ಕುಳಿತಿರಬೇಕಿತ್ತೋ ಏನೋ ಅಲ್ವೇ? ಜೊತೆಗೆ ತಂತ್ರಾಂಶ ಕೆಲಸ ಮಾಡುವುದರ ಬಗ್ಗೆ ಹೆಚ್ಚಿನ ಅರಿವನ್ನು ನಾವೇ ಬೆಳೆಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
ಲಿನಕ್ಸ್ ನಲ್ಲಿ ಕನ್ನಡ ಮತ್ತು ಅದರ ಸುತ್ತಲಿನ ತೊಂದರೆ ನಿವಾರಣೆಗಳ ಬಗ್ಗೆ ನಮ್ಮ ಹಳ್ಳಿಮನೆ ಅರವಿಂದ ಬರೆದಿರುವ ಲೇಖನವನ್ನೂ ಓದಿ.
ನಿಮ್ಮ ಪ್ರತಿಕ್ರಿಯೆಗಳು