೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್ ೨.೬೦

ತಂತ್ರಾಂಶಗಳು, ಸುದ್ದಿ | 0 comments

Written By Omshivaprakash H L

November 5, 2011

೩ಡಿ ಆಯಾಮದ ಚಿತ್ರಗಳನ್ನು ತಯಾರಿಸಲು ಉಪಯೋಗಿಸುವ ಮುಕ್ತ ತಂತ್ರಾಂಶ ಬ್ಲೆಂಡರ್‌ನ ಹೊಸ ಆವೃತ್ತಿ ೨.೬೦ ಬಿಡುಗಡೆಗೊಂಡಿದೆ. ಇದು ೩ಡಿ ಆಡಿಯೋವನು ೩ಡಿ ಬ್ಲೆಂಡರ್‌ನ ಚಿತ್ರದ ತುಣುಕುಗಳ ಮೇಲೆ ಇಡಲು ಈಗ ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ತನ್ನ ಗೇಮ್ ಎಂಜಿನ್‌ನ ಹೊರ ಮತ್ತು ಒಳ ಕಾರ್ಯತಂತ್ರಗಳಲ್ಲೂ ಕೂಡ ಕೆಲವೊಂದು ಹೊಸ ಬೆಳವಣಿಗೆಗಳನ್ನು ಅಳವಡಿಸಿಕೊಂಡಿದೆ, ಉದಾಹರಣೆಗೆ, ನ್ಯಾವಿಗೇಶನ್ ಮೆಶ್.

ಬ್ಲೆಂಡರ್ ಒಂದು ಅತ್ಯಾಧುನಿಕ ೩ಡಿ ಗ್ರಾಫಿಕ್ಸ್ ಮತ್ತು ಆನಿಮೇಷನ್ ಸಿಸ್ಟಂ ಆಗಿದ್ದು, ಮುಕ್ತ ತಂತ್ರಾಂಶವಾಗಿದೆ. ಇದರಲ್ಲಿ ೩ಡಿ ಆಬ್ಜೆಕ್ಟ್‌ಗಳನ್ನು , ಸೀನ್‌ಗಳನ್ನು, ಆನಿಮೇಷನ್‌ಗಳನ್ನು, ಸಿನೆಮಾ ಹಾಗೂ ಗೇಮ್‌ಗಳನ್ನು ಕೂಡ ಅಭಿವೃದ್ದಿ ಪಡಿಸಬಹುದು. ಚಿತ್ರದ ಬಿಂಬಗಳನ್ನು ಜೋಡಿಸುವುದರಿಂದ ಹಿಡಿದು, ಅವುಗಳ ಚಿತ್ರಣ, ಸಂಕಲನ ಇತ್ಯಾದಿಗಳನ್ನು ಇದರಲ್ಲಿ ಸುಲಲಿತವಾಗಿ ಮಾಡಬಹುದು. ಇದು ತನ್ನಲ್ಲಡಗಿಸಿಕೊಂಡಿರುವ ಪೈತಾನ್ ಎ.ಪಿ.‌ಐ ಗಳನ್ನು ಬಳಸಿಕೊಂಡು ಬ್ಲೆಂಡರ್ ನಲ್ಲಿ ಅಭಿವೃದ್ದಿಪಡಿಸಿದ ತುಣುಕುಗಳನ್ನು ಬೇರೆ ತಂತ್ರಾಂಶದಲ್ಲೂ ಬಳಸಬಹುದು.

ಬ್ಲೆಂಡರ್ ವೆಬ್ಸೈಟ್ ನಲ್ಲಿರುವ ವಿಡಿಯೋ ತುಣುಕುಗಳನ್ನು ನೋಡಿ ನಿಮಗೇ ಈ ತಂತ್ರಾಂಶದ ಕಾರ್ಯ ಬೆರಗುಗೊಳಿಸುತ್ತದೆ.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇತಿಹಾಸದ ಪುಟಗಳಿಂದ