ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಬ್ರೌಸರ್ ಗಳಿಗೆ

ಜರ್ಮನಿಯ ರಿಕ್ಯುರಿಟಿ ಲ್ಯಾಬ್ಸ್ ನ ಅನ್ವೇಷಕರು ಜಾವಾಸ್ಕ್ರಿಪ್ಟ್ ಆಧಾರಿತ ಓಪನ್ ಪಿ.ಜಿ.ಪಿ ಎನ್ಕ್ರಿಪ್ಷನ್ ತಂತ್ರಾಂಶವನ್ನು ಬಳಕೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಇಂಟರ್ನೆಟ್ ನ ವೆಬ್‌ಮೈಲ್ ಬಳಕೆಯ ಸಮಯದಲ್ಲಿ ತಮ್ಮ ಸಂದೇಶವನ್ನು ಓಪನ್ ಪಿ.ಜಿ.ಪಿ ತಂತ್ರಜ್ಞಾನ ಬಳಸಿ ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಬಹುದು. GPG4Browsers ಎಂಬ ಈ ತಂತ್ರಾಂಶ https://gpg4browsers.recurity.com ನಲ್ಲಿ ಲಭ್ಯವಿದೆ. ಈ ತಂತ್ರಾಂಶದ ಪ್ಲಗಿನ್ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಕೆಲಸ ಮಾಡಲಿಕ್ಕೆ ಈಗಾಗಲೇ ಅಣಿಯಾಗಿದೆ ಹಾಗೂ ನೀವು ಇದನ್ನು ಜಿ-ಮೈಲ್ ನೊಂದಿಗೆ ಬಳಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This