ಇಮೇಜ್‌ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧

ImageMagick ಎಂಬ ತಂತ್ರಾಂಶ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಆಗಿದ್ರೆ, ಅದನ್ನು ಬಳಸಿ ನಿಮ್ಮ ಇಮೇಜ್ ಫೈಲುಗಳ ಬಗೆಯನ್ನು (File Format/Type) ಬದಲಿಸಬಹುದು.

ಅಂದರೆ, ನೀವು ಕ್ಯಾಮೆರಾದಲ್ಲಿ ತೆಗೆದ ಫೋಟೋ .JPEG ಫಾರ್ಮ್ಯಾಟ್‌ನಲ್ಲಿದ್ದರೆ, ಅದನ್ನು ಪ್ರಿಂಟ್ ಮಾಡುವಾಗ ನಿಮಗೆ .eps ಅಥವಾ .svg ಗೊ ಅದನ್ನುಬದಲಿಸಬೇಕಾಗುವುದು. ಇಂಟರ್ನೆಟ್‌ನಲ್ಲಿ ಅದನ್ನು ಬಳಸುವಾಗ .png ಅಥವಾ .gif ಗೆ ಬದಲಿಸಬೇಕಾಗಬಹುದು. ಅದಕ್ಕೆ ಸುಲಭಮಾರ್ಗ ImageMagick.

ನೀವು ಉಬುಂಟು/ಡೆಬಿಯನ್ ಬಳಸುತ್ತಿದ್ದಲ್ಲಿ ಉಬುಂಟು ಸಾಫ್ಟ್ವೇರ್ ಮ್ಯಾನೇಜರ್ ಅಥವಾ ಸಿನ್ಯಾಪ್ಟೆಕ್ ಬಳಸಿ ImageMagick ಇನ್ಸ್ಟಾಲ್ ಮಾಡಿಕೊಳ್ಳಬಹುದು. ಅಥವಾ ಈ ಕೆಳಗಿನ ಕಮ್ಯಾಂಡ್ ಅನ್ನು ನಿಮ್ಮ ಲಿನಕ್ಸ್ ಟರ್ಮಿನಲ್‌ನಲ್ಲಿ ಬಳಸಿ.

sudo apt-get install imagemagick

ರೆಡ್‌ಹ್ಯಾಟ್, ಫೆಡೋರ, CentOS ಬಳಸುತ್ತಿದ್ದಲ್ಲಿ

yum install imagemagick

ಈಗ image.jpg ಎಂದಿರುವ ಫೈಲ್ ಅನ್ನು .eps ಫಾರ್ಮ್ಯಾಟ್‌ಗೆ ಬದಲಿಸಲು ಈ ಕೆಳಗಿನ ಕಮ್ಯಾಂಡ್ ಬಳಸಬಹುದು.

# convert image.jpg image.eps

ಕನ್ವರ್ಟ್ (convert) – ಬದಲಿಸು ಎಂಬರ್ಥ ಸೂಚಿಸುವ ಈ ಕಮ್ಯಾಂಡ್ ನಿಮ್ಮ ನೆನಪಿನಲ್ಲಿ ಉಳಿಯುವುದೂ ಸುಲಭ. ಅದರ ಉಪಯೋಗವೂ ಸುಲಭ.

ಪ್ರಯತ್ನಿಸಿ ನೋಡಿ.

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This