ಟಚ್‌ಪ್ಯಾಡ್ ಕೆಲಸ ಮಾಡುತ್ತಿಲ್ಲವೇ?

ನಿಮ್ಮ ಲ್ಯಾಪ್‌ಟಾಪ್‌ನ ಟಚ್ ಪ್ಯಾಡ್ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ ಎಂಬ ದೂರಿದೆಯೇ? ಡೆಬಿಯನ್, ಉಬುಂಟು, ಲಿನಕ್ಸ್ ಮಿಂಟ್ ಇತ್ಯಾದಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ಇನ್ಸ್ಟಾಲ್ ಮಾಡಿದಾಗ ಈ ತೊಂದರೆ ಆಗಾಗ ಮರುಕಳಿಸುತ್ತದೆ.

ಇದನ್ನುಸರಿದೂಗಿಸುವುದು ಇಲ್ಲಿಯವರೆಗೆ ಕಷ್ಟ ಸಾಧ್ಯವಾಗಿತ್ತು. ಈಗ ಇದಕ್ಕೊಂದು ಸುಲಭ ವಿಧಾನವಿದೆ.

gpointing-device-settings ಎಂಬ ತಂತ್ರಾಂಶವೊಂದನ್ನು ಇನ್ಸ್ಟಾಲ್ ಮಾಡಿಕೊಂಡರೆ ಆಯ್ತು. ಇದರಲ್ಲಿ ಟಚ್‌ಪ್ಯಾಚ್ ಕೆಲಸ ಮಾಡಲು ಬೇಕಿರುವ ಎಲ್ಲ ಸೆಟ್ಟಿಂಗ್ಸ್‌ಗಳನ್ನು ಬದಲಿಸುತ್ತ ನಮಗೆ ಬೇಕಾದಂತೆ ಟಚ್‌ಪ್ಯಾಚ್ ಕೆಲಸ ಮಾಡುವಂತೆ ಮಾಡಬಹುದು.

ಸಿನ್ಯಾಪ್ಟೆಕ್ , ಉಬುಂಟು ಸಾಫ್ಟ್‌ವೇರ್ ಇನ್ಸ್ಟಾಲರ್ ಬಳಸಿ ಅಥವಾ ಈ ಕೆಳಗಿನ ಕಮ್ಯಾಂಡ್ ಅನ್ನು ನಿಮ್ಮ ಲಿನಕ್ಸ್ ಟರ್ಮಿನಲ್ ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ.

sudo apt-get install gpointing-device-settings

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This