ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ ಸಾಮಾನ್ಯರೂ ಇರುತ್ತಾರಲ್ಲವೇ? ಅವರನ್ನು ತಲುಪುವುದು ಹೇಗೆ?

ಈ ಪ್ರಶ್ನೆಗಳಿಗೆ ಅನೇಕ ಉತ್ತರಗಳಿದ್ದರೂ, ಕೆಲಸದ ಒತ್ತಡ, ಸಮಯದ ಅಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಲಿನಕ್ಸಾಯಣದ ಇತರೆ ಯೋಜನೆಗಳಿಗೆ ಚಾಲನೆ ಸಿಗುವುದು ಆಗಾಗ ಮಾತ್ರ. ಪತ್ರಿಕೆಗಳ ಮೂಲಕ ಇಲ್ಲಿ ಬರೆದ ಕೆಲವೊಂದು ವಿಷಯಗಳು ಜನರಿಗೆ ಮುಟ್ಟಿದರೂ, ಅದರ ಸಂಖ್ಯೆ ವಿರಳವಾಗಿತ್ತು. ಈಗೊಂದು ಸಿಹಿ ಸುದ್ದಿ.

‘ಸಂಯುಕ್ತ ಕರ್ನಾಟದ’ ತಂತ್ರಜ್ಞಾನವನ್ನು ಕನ್ನಡಿಗರಿಗೆ ತಲುಪಿಸಲು ‘ಟೆಕ್ ಕನ್ನಡ’ ಎಂಬ ಅಂಕಣವನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ. ಫೆಭ್ರವರಿ ೧೦ ರಿಂದ ಪ್ರಕಟಾವಾಗುತ್ತಿರುವ ಈ ಅಂಕಣದಲ್ಲಿ ಗ್ನು/ಲಿನಕ್ಸ್ ಅಲ್ಲದೆ ತಂತ್ರಜ್ಞಾನವನ್ನು ಅರಿಯುವ ಕೆಲಸಕ್ಕೆ ಸಹಾಯಕವಾಗುವ ವಿಷಯಗಳ ಮಾಹಿತಿಪೂರವನ್ನು ನೀಡುವ ಆಶಯವಿದೆ.

ಟೆಕ್ ಕನ್ನಡದ ಅಂಕಣವನ್ನು – ಸಂಯುಕ್ತ ಕರ್ನಾಟಕವನ್ನು ಪ್ರತಿದಿನ (ಭಾನುವಾರ ಮತ್ತು ಸೋಮವಾರ ಹೊರತು ಪಡಿಸಿ) ಓದುವುದರ ಮೂಲಕ, ಅಥವಾ ಕೊಂಚ ತಡವಾಗಿ https://blog.shivu.in ನಲ್ಲಿ ಕಾಣಬಹುದು.

ಅದರ ಮೊದಲ ಲೇಖನದ ಪ್ರತಿ ಇಲ್ಲಿದೆ.

ಟೆಕ್ ಕನ್ನಡ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನಿಮಗೂ ಒಂದಿಷ್ಟು ಪ್ರಶ್ನೆಗಳಿಗೆ ಟೆಕ್ ಕನ್ನಡದಲ್ಲಿ ಉತ್ತರ ಬೇಕಿದ್ದರೆ ಖಂಡಿತ ಒಂದು ಸಂದೇಶ ಕಳುಹಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This