ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ

ಇತ್ತೀಚೆಗೆ ರೆಡ್‌ಹ್ಯಾಟ್ ಲಿನಕ್ಸ್ ತನ್ನ ಎಂಟರ್‌ಪ್ರೈಸ್ ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳ ಸಪೋರ್ಟ್ ಅವಧಿಯನ್ನು ೧೦ ವರ್ಷಗಳಿಗೆ ಹೆಚ್ಚಿಸಿದೆ. ಸಾಮಾನ್ಯವಾಗಿ ೭ ವರ್ಷದ ವರೆಗೆ ಲಿನಕ್ಸ್ ಅನ್ನು ಅವಲಂಭಿಸಿ ಅದರ ಸೇವೆಗಳನ್ನು ರೆಡ್‌ಹ್ಯಾಟ್ ನಿಂದ ಪಡೆಯುತ್ತಿದ್ದ ಕಂಪೆನಿಗಳು ಅಪ್ದೇಟ್/ಸಹಾಯವನ್ನು ಇದುವರೆಗೆ ಪಡೆಯ ಬಹುದಿತ್ತು.

ಚಿತ್ರ – ರೆಡ್‌ಹ್ಯಾಟ್

ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಿಂದ ಪಡೆಯಬಹುದು.  ಲಿನಕ್ಸ್ ಮಾರುಕಟ್ಟೆಯಲ್ಲಿ ಸೇವೆಯ ಮಾರಾಟದ ಮೂಲಕ  ೫೫-೬೦% ರಷ್ಟು ವ್ಯವಹಾರವನ್ನು ರೆಡ್‌ಹ್ಯಾಟ್ ಕುದುರಿಸುತ್ತದೆ. ಗ್ರಾಹಕರನ್ನೇ ನಂಬಿರುವ ಈ ಮಾರುಕಟ್ಟೆಯಲ್ಲಿ ರೆಡ್‌ಹ್ಯಾಟ್ ನ ಈ ಹೊಸ ಹೆಜ್ಜೆ ಗ್ರಾಹಕನನ್ನು ಮತ್ತಷ್ಟು ಮೆಚ್ಚಿಸುವಲ್ಲಿ  ಹಾಗೂ ಅವರ ನಂಬಿಕೆಯನ್ನು ಬಲಗೊಳಿಸುವಲ್ಲಿ ಉತ್ತಮ ಹೆಜ್ಜೆ ಎನ್ನಬಹುದು.

ಇತರೆ ಕಂಪೆನಿಗಳೇನೂ ಕಣ್ಮುಚ್ಚಿ ಕುಳಿತಿಲ್ಲ. ರೆಡ್ ಹ್ಯಾಟ್ ತನ್ನ ಹೊಸ ಸಪೋರ್ಟ್ ಬಗ್ಗೆ ವಿವರಿಸುತ್ತಿದ್ದಂತೆಯೇ ಆರೇಕಲ್ (Oracle) ಹಾಗೂ ಸೂಸೆ (SUSE) ಲಿನಕ್ಸ್ ಅನ್ನು ಕೊಂಡ Attachmate ಕೂಡ ತಮ್ಮ ಎಂಟರ್‌ಪ್ರೈಸ್ ಲಿನಕ್ಸ್‌ಗಳ ಸಪೋರ್ಟ್ ಅನ್ನು ೧೦ ವರ್ಷಗಳಿಗೆ ವಿಸ್ತರಿಸಿದರು.

ಬಾಹ್ಯ ಕೊಂಡಿಗಳು –

Oracle Linux support lifecycle has been extended to 10 years – https://blogs.oracle.com/linux/entry/oracle_linux_support_period_has

Novell Suse Linux Support – https://support.novell.com/inc/lifecycle/linux.html

One Response to “ಲಿನಕ್ಸ್ ಬಳಸುವ ಸಂಸ್ಥೆಗಳಿಗೆ ೧೦ ವರ್ಷದ ನಿಶ್ಚಿಂತೆ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This