ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ನಿಮಗಿದು ತಿಳಿದಿದೆಯೇ?, ವಿಶೇಷ, ಸುದ್ದಿ | 0 comments

Written By Omshivaprakash H L

April 1, 2012

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು ಪ್ರಾಯಶ: ಕೇಳಿರಲಿಕ್ಕಿಲ್ಲ. ರೆಡ್‌ಹ್ಯಾಟ್ ಈ ಮೈಲಿಗಲ್ಲನ್ನು ದಾಟಿದ ಮೊದಲ ಕಂಪೆನಿಯಾಗಿದೆ. 17 ವರ್ಷ ಪ್ರಾಯದ ಈ ಕೆಂಪೆನಿಯ ಮೈಲಿಗಲ್ಲು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಮತ್ತೊಂದು ಮುಖದ ಪರಿಚಯವನ್ನು ನಿಮಗೆ ಮಾಡಿಕೊಡುತ್ತದೆ.

ಗ್ನು/ಲಿನಕ್ಸ್ ಅನ್ನು ಇಂಟರ್ನೆಟ್ ಹಾಗೂ ಇತರೆ ಸೇವೆಗಳಿಗೆ ಬಳಸುವ ಸರ್ವರ್ಗಳಲ್ಲಿ ಬಳಸುವುದು ಸರ್ವೇ ಸಾಮಾನ್ಯ. ಇಂಟೆಲ್ , ಡೆಲ್, ಐ.ಬಿ.ಎಂ ಎಚ್.ಪಿ ಕಂಪೆನಿಗಳು ಲಿನಕ್ಸ್ ಅನ್ನು ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಮಾರುವ ಇತರೆ ಕಂಪೆನಿಗಳಾಗಿವೆ.

ವಿದ್ಯಾರ್ಥಿಗಳು ಸಾಮಾನ್ಯವಾಗಿ ಪುಸ್ತಕಗಳಲ್ಲೋ, ಲಿನಕ್ಸ್ ಸರ್ಟಿಫಿಕೇಷನ್ ಬಗ್ಗೆ ಮಾತನಾಡುವಾಗ ಮಾತ್ರ ರೆಡ್‌ಹ್ಯಾಟ್ ಪ್ರಸ್ತಾಪವಾಗುವುದು ಸಾಮಾನ್ಯ. ಆದರೆ, ರೆಡ್‌ಹ್ಯಾಟ್ ಬೆಂಬಲಿತ ಫೆಡೋರ ಮತ್ತು ಸೆಂಟ್ ಓ.ಎಸ್ (Fedora & CentOS) ಮುಕ್ತವಾಗಿ ನಮಗೆ ಲಭ್ಯವಿರುವ ಇತರೆ ಗ್ನು/ಲಿನಕ್ಸ್ ಆವೃತ್ತ್ತಿಗಳು. ಬಳಕೆದಾರರ ಅನುಕೂಲಕ್ಕೆ ಮತ್ತು ಅವಶ್ಯಕತೆ ತಕ್ಕಂತೆ ಗ್ನು/ಲಿನಕ್ಸ್ ಅನ್ನು ಮಾರ್ಪಡಿಸುವುದಲ್ಲದೇ, ಸಮುದಾಯದ ಶಕ್ತಿಯಿಂದಲೇ ಮುಕ್ತ ತಂತ್ರಾಂಶದ ಅಭಿವೃದ್ದಿ ಸಾಧ್ಯ ಎನ್ನುವುದನ್ನು ಅರಿತ ರೆಡ್‌ಹ್ಯಾಟ್ Fedora ಮತ್ತು CentOS ಸಮುದಾಯಗಳ ಜೊತೆಗೆ ಕೆಲಸ ಮಾಡುತ್ತದೆ.

ರೆಡ್‌ಹ್ಯಾಟ್‌ನ ಆದಾಯ ಮೂಲತ: ಅದರ ಲಿನಕ್ಸ್ ಸೇವೆಯ ಚಂದಾದಾರರಿಂದ ಬರುತ್ತದೆ. ತಂತ್ರಾಂಶ ಅಭಿವೃದ್ದಿ ಮಾಡುವ ಡೆವೆಲಪರ್‌ಗಳಿಗೂ ಕೂಡ ರೆಡ್‌ಹ್ಯಾಟ್ ಲಿನಕ್ಸ್ ರುಚಿ ತೋರಿಸುತ್ತ ತನ್ನ ಖಜಾನೆಗೆ ಹಣವನ್ನು ತುಂಬಿಸಿಕೊಳ್ಳುತ್ತದೆ. ಆರೇಕಲ್‌ನ ಡೇಟಾಬೇಸ್ ಸರ್ವರ್ಗಳೂ ಕೂಡ ರೆಡ್‌ಹ್ಯಾಟ್ ನ ಲಿನಕ್ಸ್ ನಿಂದ ಬೆಂಬಲಿತವಾಗಿವೆ.

ನೆನಪಿರಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಿಮಗೆ ಉಚಿತವಾಗಿ ಸಿಗುತ್ತವೆ,. ಆದರೆ ಅದಕ್ಕೆ ಹೆಚ್ಚಿನ ಸೇವೆ ಬೇಕಿದ್ದಲ್ಲಿ ಅದಕ್ಕೆ ಮಾತ್ರ ನೀವು ಹಣ ತೆರಬೇಕು. ಇದು ಅದರ ಸುತ್ತ ಇರುವ ಮಾರುಕಟ್ಟೆಗೆ ಬೆನ್ನೆಲುಬು.

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ